ದಾಸ ಸಾಹಿತ್ಯದ ಮೂಲಕ ಸಮಾನತೆಯ ಬೆಳೆಕು ಚೆಲ್ಲಿದ ಭಕ್ತ ಕನಕದಾಸರು: ಪಿ.ಎಂ.ನರೇಂದ್ರಸ್ವಾಮಿ

| Published : Nov 19 2024, 12:53 AM IST

ದಾಸ ಸಾಹಿತ್ಯದ ಮೂಲಕ ಸಮಾನತೆಯ ಬೆಳೆಕು ಚೆಲ್ಲಿದ ಭಕ್ತ ಕನಕದಾಸರು: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜಕ್ಕಾಗಿ ಶ್ರಮಿಸುವ ಉದ್ದೇಶದಿಂದಲೇ ಕನಕದಾಸರು ಇಂದಿಗೂ ನಮ್ಮೊಂದಿಗಿದ್ದಾರೆ. ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ಅದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದಾಸ ಸಾಹಿತ್ಯದ ಮೂಲಕ ಸಮಾನತೆಯ ಬೆಳೆಕು ಚೆಲ್ಲಿದ ಭಕ್ತ ಕನಕದಾಸರ ಮಾರ್ಗದರ್ಶನದಲ್ಲಿ ನಾವೇಲ್ಲಾರೂ ಒಂದಾಗಿ ನಾಡನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಮೇಲ್ವಾರ್ಗದ ಅಟ್ಟಹಾಸದ ನಡುವೆಯೂ ಕನಕದಾಸರು ಕನ್ನಡ ಭಾಷೆಯಲ್ಲಿ ಶೋಷಣೆಯನ್ನು ತನ್ನ ಕೀರ್ತನೆ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದರು.

ಸಮಾಜಕ್ಕಾಗಿ ಶ್ರಮಿಸುವ ಉದ್ದೇಶದಿಂದಲೇ ಕನಕದಾಸರು ಇಂದಿಗೂ ನಮ್ಮೊಂದಿಗಿದ್ದಾರೆ. ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ಅದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕೆ ಎಂದರು.

ತಾಲೂಕು ಕ್ರೀಡಾಂಗಣವನ್ನು ಅಧಿಕೃತವಾಗಿ ಶ್ರೀಭಕ್ತಕನಕದಾಸ ಕ್ರೀಡಾಂಗಣ ಎಂದು ಸರ್ಕಾರದಿಂದಲೇ ಹೆಸರು ಇಡಲಾಗಿದೆ. ಕನಕ ಭವನ ನಿರ್ಮಾಣ ಕಾಮಗಾರಿಗೆ ಕೆಲವು ಅಡೆತಡೆಗಳಿದ್ದು, ಎಲ್ಲವನ್ನು ನಿವಾರಣೆ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ಮುಂದಾಗುತ್ತೇನೆ ಎಂದರು.

ಜಾತಿ ಧರ್ಮಗಳ ಕೂಪದಲ್ಲಿದ್ದ ಜನರಲ್ಲಿ ಅರಿವು ಮೂಡಿಸಿ ಸಮಾಜದ ಸಮಾನತೆ ಸೋದರತ್ವ ಮನೋಭಾವನೆ ರೂಪಿಸಿದ ಕನಕದಾಸರ ಆದರ್ಶ ಎಲ್ಲರೂ ಮಾದರಿಯಾಗಿದೆ ಎಂದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಪುಟ್ಟಬಸವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರೂ ಕನಕದಾಸರ ನಡೆ ನುಡಿ ಅನುಕರಣೆ ಮೂಲಕ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಪ್ರೊ.ಭೀಮ್‌ರಾಜ್ ಭಕ್ತಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ತಹಸೀಲ್ದಾರ್ ಬಿ.ವಿ.ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಕುರುಬರ ಸಾರ್ವಜನಿಕ ಸೊಸೈಟಿ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ನೂರುಲ್ಲಾ, ಪ್ರಮೀಳಾ, ಮುಖಂಡರಾದ ಕೆ.ಜೆ.ದೇವರಾಜು, ಬಿ.ಆರ್.ರಾಮಚಂದ್ರು, ಚಂದ್ರಕುಮಾರ್, ಜಯಣ್ಣ, ಸಿ.ಮಾಧು, ಚಿಕ್ಕಣ್ಣ, ಸಾಹಳ್ಳಿ ಶಶಿ, ಪ್ರಭುಲಿಂಗು, ಮಹದೇವು, ರಾಜಮ್ಮ, ಪದ್ಮಾ, ಬಸವರಾಜು, ಆನಂದ್, ಸಂತೋಷ್, ಎಚ್.ಬಸವರಾಜು, ಅಯೂಬ್ ಪಾಷಾ, ಶಂಕರೇಗೌಡ, ಬಂಕ್ ಮಹದೇವು ಇದ್ದರು.