ಸಾರಾಂಶ
ಭಕ್ತ ಮಾರ್ಕಂಡೇಶ್ವರ ಸಾಕ್ಷಾತ್ ಶಿವನನ್ನೇ ಒಲಿಸಿಕೊಂಡ ಮಹಾನ್ ದೈವಭಕ್ತರಾಗಿದ್ದರು ಎಂದು ಕಾಂಗ್ರೆಸ್ ಯುವ ಮುಖಂಡರಾದ ಸನ್ನಿಗೌಡ ತೂನ್ನೂರ್ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಭಕ್ತ ಮಾರ್ಕಂಡೇಶ್ವರ ಸಾಕ್ಷಾತ್ ಶಿವನನ್ನೇ ಒಲಿಸಿಕೊಂಡ ಮಹಾನ್ ದೈವಭಕ್ತರಾಗಿದ್ದರು ಎಂದು ಕಾಂಗ್ರೆಸ್ ಯುವ ಮುಖಂಡರಾದ ಸನ್ನಿಗೌಡ ತೂನ್ನೂರ್ ಹೇಳಿದರು.ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ವಡಗೇರಾ ತಾಲೂಕು ಘಟಕದ ವತಿಯಿಂದ ವಡಗೇರಾ ಪಟ್ಟಣದ ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಭಕ್ತ ಮಾರ್ಕಂಡೇಶ್ವರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ಮಾತನಾಡಿ, ನಮ್ಮ ಸಮುದಾಯವು ತೀರಾ ಹಿಂದುಳಿದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಸಮುದಾಯಕ್ಕೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ರಾಜಕೀಯವಾಗಿ ಕೂಡ ಸ್ಥಾನಮಾನ ನೀಡಬೇಕು. ನಮ್ಮ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ವಡಗೇರಾ ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಭಕ್ತ ಮಾರ್ಕಂಡೇಶ್ವರ ಭಾವಚಿತ್ರದ ಮೆರವಣಿಗೆಯು ಬನದ ರಚೋಟೇಶ್ವರ ಕಲ್ಯಾಣ ಮಂಟಪದವರೆಗೆ ಜರುಗಿತು.
ಮಹಿಳಾ ಘಟಕದ ರಾಜ್ಯಾಧ್ಯಕ್ಷ ಉಮಾ ಜಗದೀಶ, ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಸಿ.ಎನ್. ಭಂಡಾರಿ, ತಹಸೀಲ್ದಾರ್ ಶ್ರೀನಿವಾಸ್ ಚಾಪಲ್, ಶಿಲ್ಪಾ ಪ್ರೇಮಾನಂದ್, ಬಸವರಾಜ್ ಹುನುಗುಂದ, ವೀರಸಂಗಪ್ಪ ಹಾವೇರಿ, ನಾಗರಾಜ್ ಮಾನ್ವಿ, ಬಿಜೆಪಿ ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೂರ, ಕಾಂಗ್ರೆಸ್ ಮುಖಂಡ ಬಾಷುಮಿಯ ನಾಯ್ಕೋಡಿ, ಡಾ. ಜಗದೀಶ್ ಹಿರೇಮಠ, ಶರಣು ಮಾತಳ್ಳಿ, ಯಂಕಪ್ಪ ಬಸವಂತಪುರ, ಸಂಗಮೇಶ್ ಅಡ್ಡಿ, ಸೋಮಶೇಖರ್ ಗೋಗಿ, ಬಸವರಾಜ್ , ಕೊಟ್ರಪ್ಪ ಧನವಾಡ, ನೇಕಾರ ಸಮುದಾಯದ ವಡಗೇರಾ ತಾಲೂಕಾಧ್ಯಕ್ಷ ಸಂತೋಷ್ ಬೊಜ್ಜಿ, ಈರಪ್ಪ ಚಿನ್ನಿ ಇತರರಿದ್ದರು.