ಸಾರಾಂಶ
ವಾರಣಾಸಿ ಮೂಲದ ಸಪ್ತ ನದಿಗಳ ಜಲ ಸಂಗ್ರಹ ಅಯೋಧ್ಯಾ ಯಾತ್ರಾ ಸಮಿತಿಯಿಂದ ಶೃಂಗೇರಿ ಶ್ರೀ ರಾಮ ಮಂದಿರದಲ್ಲಿ ತೀರ್ಥ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ವಾರಣಾಸಿ ಮೂಲದ ಸಪ್ತ ನದಿಗಳ ಜಲ ಸಂಗ್ರಹ ಅಯೋಧ್ಯಾ ಯಾತ್ರಾ ಸಮಿತಿಯಿಂದ ಶೃಂಗೇರಿ ಶ್ರೀ ರಾಮ ಮಂದಿರದಲ್ಲಿ ತೀರ್ಥ ವಿತರಿಸಲಾಯಿತು.ಜಲಪ್ರಸಾದ ಬುಧವಾರ ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ತಲುಪಿದ್ದು, ಶ್ರೀ ಶಾರದೆ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಯೋಧ್ಯಾ ಯಾತ್ರೆ ಸಮಿತಿ ರಾಷ್ಠ್ರೀಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಶರ್ಮ ಸನಾತನ ಹಿಂದೂ ಧರ್ಮದಲ್ಲಿ ಗಂಗೆ, ಯಮುನೆ, ಸರಸ್ವತಿ, ಗೋದಾವರಿ, ನರ್ಮದಾ, ಸಿಂಧೂ, ಕಾವೇರಿ ಈ ಏಳು ನದಿಗಳು ಪವಿತ್ರ ಮೂಲ ನದಿಗಳು, ಸಪ್ತನದಿಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಐದು ನದಿಗಳು ಭಾರತದ ಭಾಗದಲ್ಲಿ ಲಭ್ಯವಿದ್ದು ಸರಸ್ವತಿ ಮತ್ತು ಸಿಂಧೂ ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಹುಟ್ಟಿ ಅದೇ ಭಾಗದಲ್ಲಿ ಹರಿಯುತ್ತದೆ. ಹಾಗಾಗಿ ಸಪ್ತ ನದಿ ಜಲಾಭಿಷೇಕಕ್ಕೆ ಸರಸ್ವತಿ, ಸಿಂಧೂ ಎರಡು ನದಿಗಳ ನೀರು ಅವಶ್ಯಕ. ಹಾಗಾಗಿ ಪಾಕ್ ಆಕ್ರಮಿತ ನೀಲಂ ಕಣಿವೆಯ ಶಾರದಾ ಗ್ರಾಮದಲ್ಲಿ ಲಭ್ಯವಿರುವ ಸರಸ್ವತಿ, ಸಿಂಧೂ ಇವುಗಳೊಂದಿಗೆ ಆ ಪ್ರದೇಶದ ಪಾರ್ವತಿ ಘಾಟಿ, ನಾಗರ ಘಾಟಿಯಲ್ಲಿ ಹರಿಯುವ ಮಧುಮತಿ ಕಿಶನ್ ಗಂಗಾ ನದಿಗಳ ನೀರನ್ನು ಭಾರತೀಯ ಮೂಲದ ಶಾರದಾ ಸರ್ವಜ್ಞ ಪೀಠ ರಕ್ಷಣಾ ಸಮೀತಿ ಪಿಓಕೆ ಯ ಮುಸ್ಲಿಂ ಸಮಾನ ಮನಸ್ಕ ಮಿತ್ರರ ಮೂಲಕ ಸಂಗ್ರಹಿಸಿ ಅನೇಕ ದೇಶ ಸುತ್ತಿ ಶೃಂಗೇರಿಗೆ ತಂದು ಜಗದ್ಗುರುಗಳ ಅನುಗ್ರಹ ಪಡೆದು ಅವರ ಆಶಯದಂತೆ ಯಾತ್ರೆ ಮೂಲಕ ಅಯೋಧ್ಯೆ ತಲುಪಿಸಿ ಅಲ್ಲಿ ಜಲ ಬಳಸಿದ ನಂತರ ಪ್ರಸಾದ ರೂಪದಲ್ಲಿ ಜಲ ಸಂಗ್ರಹಿಸಿ ಇಲ್ಲಿಗೆ ತರಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಶ್ಮೀರದ ನಂದಲಾಲ್ ಜೀ ಆಶ್ರಮದ ಗುರು ಮೋಹನ್ ಕಿಶನ್ ಮೋಂಘಾ ಮಾತನಾಡಿ, ಮುಂದೆ ಇದೇ ಜಲಭರಿತ ಕುಂಭವನ್ನು ಭಾರತದ ಎಲ್ಲಾ ಜ್ಯೋತಿರ್ಲಿಂಗ, ಶಕ್ತಿ ಪೀಠಗಳಿಗೆ ಯಾತ್ರೆ ಮೂಲಕ ಒಯ್ಯುವ ಉದ್ದೇಶ ಹೊಂದಿದೆ. ಆ ಮೂಲಕ ಶ್ರೀ ರಾಮ ತೀರ್ಥ ಪ್ರಸಾದ ರೂಪದಲ್ಲಿ ದೇವರ ದರ್ಶನಕ್ಕೆ ಬರುವ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷ ಚಂಪಲಾಲ್ ಜೀ, ಮುಖಂಡರಾದ ರವೀಂದ್ರ ಕಣಕಟ್ಟೆ, ಆದರ್ಶ ಮತ್ತಿತರರು ಇದ್ದರು.14 ಶ್ರೀ ಚಿತ್ರ 1-ಶೃಂಗೇರಿಯಲ್ಲಿ ಅಯೋದ್ಯೆ ಯಾತ್ರೆ ಸಮಿತಿಯಿಂದ ಶ್ರೀ ರಾಮಮಂದಿರ ಜಲಪ್ರಸಾದ ತೀರ್ಥ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮೋಹನ್ ಕಿಶನ್ ಮೋಂಘಾಜಿ, ಚಂಪಲಾಲ್ ಜೀ, ರವೀಂದ್ರ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))