ಜಿಲ್ಲಾ ಉಸ್ತುವಾರಿ ವೆಂಕಟೇಶ್ ಮತ್ತಿತರರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡ ಯಶಸ್ವಿಯಾಗಿ ನಡೆಸಲಾಗಿದೆ.

ಮುಳಬಾಗಿಲು:

ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಕಾರ್ಯಕ್ರಮ ಎಲ್ಲೆಲ್ಲಿ ಯಶಸ್ವಿಯಾಗಿದೆಯೋ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ತಿಳಿಸಿದರು.

ಸಂಘಟನೆ ಸೃಜನ್ ಅಭಿಯಾನ ಕಾರ್ಯಕ್ರಮಕ್ಕೆ ಎಐಸಿಸಿ ವೀಕ್ಷಕ ರಾಮಕೃಷ್ಣ ಓಜ, ಬೀರೇ೦ದರ್ ಸಿಂಗ್, ಮಾಜಿ ಶಾಸಕ ಬಾಗೇಪಲ್ಲಿ ಸಂಪಂಗಿ, ಜಿಲ್ಲಾ ಉಸ್ತುವಾರಿ ವೆಂಕಟೇಶ್ ಮತ್ತಿತರರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡ ಯಶಸ್ವಿಯಾಗಿ ನಡೆಸಲಾಗಿದೆ.

ಅದೇ ರೀತಿ ಕಾಂಗ್ರೆಸ್ ಸಂಘಟನೆ ಸೃಜನ್ ಅಭಿಯಾನ ಕಾರ್ಯಕ್ರಮ ಸಹ ದೇಶಾದ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಕ್ತವಾಗಿ ಕಾರ್ಯಕರ್ತರನ್ನು ಆಹ್ವಾನಿಸಲಾಗಿದ್ದು ತಮ್ಮ ಹೆಸರುಗಳನ್ನು ಎಐಸಿಸಿ ವೀಕ್ಷಕರಿಗೆ ಲಿಖಿತ ರೂಪದಲ್ಲಿ ತಲುಪಿಸಿದರೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಂಡು ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್ಯಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ, ಮುಖಂಡರಾದ ಸಿ.ಎಂ.ವೆಂಕಟರಾಮೇ ಗೌಡ, ಗಾಂಧಿ, ಜಿ.ರಾಮಲಿಂಗಾರೆಡ್ಡಿ, ರಾಜೇಂದ್ರ ಗೌಡ, ಉತ್ತನೂರ್ ಶ್ರೀನಿವಾಸ್, ಕಸುವು ಎಂ.ವೆಂಕಟರಮಣ, ಸಿ.ವಿ.ಗೋಪಾಲ್, ಎಂ.ಗೋಪಾಲ್, ವಡ್ಡಹಳ್ಳಿ ವೇಣುಗೋಪಾಲ್, ಕಾರ್ಗಿಲ್ ವೆಂಕಟೇಶ್, ಕಗ್ಗನಹಳ್ಳಿ ಶ್ರೀನಿವಾಸ್, ತಾವರೆಕೆರೆ ನಾರಾಯಣ ರೆಡ್ಡಿ, ಉತ್ತನೂರು ಅರವಿಂದ್, ರಾಜು, ಚೋಟುಸಾಬ್, ಜಬಿವುಲ್ಲಾ, ಸುಬ್ರಮಣಿ, ರಂಗಸ್ವಾಮಿ, ರಾಮಮೂರ್ತಿ ನಾಯ್ಡು, ಯುವ ಕಾಂಗ್ರೆಸ್‌ನ ಎಂ.ಎನ್.ಅಭಿಷೇಕ್, ಸೂರಿ ಇದ್ದರು.