ಸಾರಾಂಶ
ಸದ್ಗುರುಗಳ ಸುಸಂಸ್ಕೃತಿಯಿಂದ ಭಾರತ ಕರ್ಮ ಮತ್ತು ಧರ್ಮ ಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಜನಸಿರುವು ನಾವುಗಳೇ ಪುಣ್ಯವಂತರು ಎಂದು ಮಾಜಿ ಶಾಸಕರು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸದ್ಗುರುಗಳ ಸುಸಂಸ್ಕೃತಿಯಿಂದ ಭಾರತ ಕರ್ಮ ಮತ್ತು ಧರ್ಮ ಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಜನಸಿರುವು ನಾವುಗಳೇ ಪುಣ್ಯವಂತರು ಎಂದು ಮಾಜಿ ಶಾಸಕರು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಅಲ್ಲೀಪುರ ಮಹಾದೇವತಾತನವರ ಸದ್ಭಕ್ತ ಮಂಡಳಿ ಹಾಗೂ ಶಿವಾನುಭವ ಸಮಿತಿ ಚರಂತಿಮಠ ಬಾಗಲಕೋಟೆ ಸಹಯೋದಲ್ಲಿ ನಡೆದ ಸದ್ಗುರು ಅಲ್ಲೀಪುರ ಮಹಾದೇವತಾತನವರ 37ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಲೀಪುರ ತಾತನವರನ್ನು ಜೀವನದಲ್ಲಿ ದರ್ಶನ ಪಡೆಯುವ ಭಾಗ್ಯ ಒಮ್ಮೆ ಒದಗಿತ್ತು. ಅವರು ಹೆಚ್ಚು ಮಾತಾಡುತ್ತಿರಲಿಲ್ಲ ಮೌನವಾಗಿರುತ್ತಿದ್ದರು. ಭಾರತ ಇಂಥ ಸದ್ಗುರುಗಳ ಸುಸಂಸ್ಕೃತಿಯಿಂದಾಗಿ ಭಾರತ ಕರ್ಮ ಮತ್ತು ಧರ್ಮ ಭೂಮಿಯಾಗಿದ್ದು, ಇಂಥ ಪುಣ್ಯದ ನೆಲೆದಲ್ಲಿ ಜನಸಿರುವ ನಾವುಗಳೇ ಪುಣ್ಯವಂತರು. ಅವರ ಸ್ಮರಣೋತ್ಸವ ಬಾಗಲಕೋಟೆಯಲ್ಲಿ ನಡೆದಿರುವುದು ವಿಶೇಷ ಎಂದರು.ಮುಖ್ಯ ಅತಿಥಿಗಳಾಗಿ ಮಿಶ್ರಿಕೋಟೆಯ ಉಪನ್ಯಾಸಕರಾದ ಚೈತನ್ಯದೇವಿ ಗುದ್ನಯ್ಯನವರಮಠ ಮಾತನಾಡಿ, ಗುರು ಎಂದರೆ ವ್ಯಕ್ತಿಯಲ್ಲ ಶಕ್ತಿ. ರೂಪಕ್ಕಿಂತ ಗುಣ ದೊಡ್ಡದು, ಗುಣಕ್ಕಿಂತ ಜ್ಞಾನ ದೊಡ್ಡದು, ಜ್ಞಾನಕ್ಕಿಂತ ವಿನಯ ದೊಡ್ಡದು, ಶರಣು ನಿದ್ರೆಗೈದರೆ ಜಪ ಕಾಣಿರೊ, ಶರಣನೆದ್ದುಕುಳಿತರೆ ಶಿವರಾತ್ರಿ ಕಾಣಿರೋ, ಶರಣ ನುಡಿದುದೇ ಶಿವ ತತ್ವ ಕಾಣಿರೋ, ಕೂಡಲಸಂಗನಶರಣನ, ಕಾಯವೇ ಕೈಲಾಸ ಕಾಣಿರೊ ಎಂದು ವಚನಗಳ ಮೂಲಕ ಸದ್ಗುರು ಅಲ್ಲೀಪುರ ಶ್ರೀ ಮಹಾದೇವತಾತನವರ ಬಗ್ಗೆ ಮಾಹಿತಿ ನೀಡಿದರು.ಧಾರವಾಡ ರುದ್ರಬಳಗದ ಅಧ್ಯಕ್ಷರಾದ ಗಿರಿಜಕ್ಕ ಶೆಟ್ಟರ ಮಾತನಾಡಿ, ಸಿದ್ದಲಿಂಗಪ್ಪ ಹೊಸಕೇರಿ ಇವರ ಸರ್ವ ಸಮರ್ಪಣೆ ಭಕ್ತಿ ಈ ಕಾರ್ಯಕ್ರಮಕ್ಕೆ ಕಾರಣ. ಎಲ್ಲರೂ ಅಲ್ಲೀಪುರತಾತನವರ ಆಶೀರ್ವಾದ ಪಡೆಯಲಿ ಎಂಬ ಆಸೆ ಅವರದು ಎಂದರು.ನರಗುಂದ ವೀರಕ್ತಮಠ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಲೀಲಾಮೂರ್ತಿಗಳಾಗಿದ್ದ ತಾತನವರಿಗೆ ಯಾವ ಬಂಧನವೂ ಹಿಡಿಸುತ್ತಿರಲಿಲ್ಲ. ಸಿದ್ಧಾರೂಢರು, ನಾಗಲಿಂಗಪ್ಪ ಅಥಣಿ ಶಿವಯೋಗಿಗಳೊಂದಿಗೆ ಮತ್ತು ಶಿವಯೋಗ ಮಂದಿರದಲ್ಲಿದ್ದು, ಹಾನಗಲ್ಲ ಕುಮಾರ ಸ್ವಾಮಿಗಳ ಬಳಿಯಲ್ಲಿ ಚರ್ಚಿಸಿದ್ದರು.ಪೂಜ್ಯ ತಾತನವರು ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಎಂದರು.ವೀರೇಶ ನಾಗಠಾಣ ಹಾಗೂ ಸಂಗಡಿಗರಿಂದ ವಚನಗಾಯನ, ಅರಬ್ಬಿ ಹಾಗೂ ಹೊಸಕೇರಿ ಮತ್ತು ವೈಜಾಪೂರ ಮನೆತನದ ಮಕ್ಕಳಿಂದ ವಚನ, ನೃತ್ಯ ಜರುಗಿದವು. ಸಿದ್ದಲಿಂಗಪ್ಪ ಹೊಸಕೇರಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಸಾಹಿತಿ ಶಿವಾನಂದ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.