ಸಾರಾಂಶ
ಎಸ್ಎಇ ಇಂಡಿಯಾ, 2025ರಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಭಾರತ್ ಮೊಬಿಲಿಟಿ ಎಕ್ಸ್‌ಫೋದಲ್ಲಿ ತಮ್ಮ ವಿಜೇತ ಮಾದರಿಗಳನ್ನು ಪ್ರದರ್ಶಿಸಲು ಏರೋ ಕ್ಲಬ್ ನಿಟ್ಟೆಯನ್ನು ಆಹ್ವಾನಿಸಿದೆ. ಎಸ್ಎಇ ಡಿಡಿಸಿ ತಂಡವನ್ನು 3ನೇ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಪ್ರತಿನಿಧಿಸಿದರೆ, 2 ನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ ಭಾನುಶಂಕರ್ ಎಸ್ಎಇ ಎಡಿಡಿಸಿ ತಂಡವನ್ನು ಪ್ರತಿನಿಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಏರೋ ಕ್ಲಬ್ ನಿಟ್ಟೆಯ ವಿದ್ಯಾರ್ಥಿಗಳು ಎಸ್ಎಇ ಇಂಡಿಯಾ ಸ್ಪರ್ಧೆಗಳಲ್ಲಿ ಉತ್ಕೃಷ್ಟತೆಯ ಪ್ರದರ್ಶನ ನೀಡಿದ್ದು, 2024ರಲ್ಲಿ ಈ ಕ್ಲಬ್‌ನ ಎಸ್ಎಇ ಡಿಡಿಸಿ ಮತ್ತು ಎಸ್ಎಇ ಎಡಿಡಿಸಿ ತಂಡಗಳು ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ಅಖಿಲ ಭಾರತ ಶ್ರೇಯಾಂಕ (ಎಐಆರ್)ದಲ್ಲಿ ಮೊದಲ ಸ್ಥಾನ ಗಳಿಸಿದೆ. ಜತೆಗೆ ಎಸ್ಎಇ ಎಡಿಡಿಸಿ ತಂಡವು ಪೇಲೋಡ್ ಡ್ರಾಪಿಂಗ್ ಮೆಕ್ಯಾನಿಸಂ ಡಿಸೈನ್ ವಿಭಾಗದಲ್ಲಿ ಪ್ರಶಂಸನೀಯ 3ನೇ ಸ್ಥಾನವನ್ನು ಗಳಿಸಿದೆ.ಈ ಅಸಾಧಾರಣ ಸಾಧನೆಗಳನ್ನು ಗುರುತಿಸಿದ ಎಸ್ಎಇ ಇಂಡಿಯಾ, 2025ರಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಭಾರತ್ ಮೊಬಿಲಿಟಿ ಎಕ್ಸ್‌ಫೋದಲ್ಲಿ ತಮ್ಮ ವಿಜೇತ ಮಾದರಿಗಳನ್ನು ಪ್ರದರ್ಶಿಸಲು ಏರೋ ಕ್ಲಬ್ ನಿಟ್ಟೆಯನ್ನು ಆಹ್ವಾನಿಸಿದೆ. ಎಸ್ಎಇ ಡಿಡಿಸಿ ತಂಡವನ್ನು 3ನೇ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಪ್ರತಿನಿಧಿಸಿದರೆ, 2 ನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ ಭಾನುಶಂಕರ್ ಎಸ್ಎಇ ಎಡಿಡಿಸಿ ತಂಡವನ್ನು ಪ್ರತಿನಿಧಿಸಿದ್ದಾರೆ.ಈ ಸಾಧನೆಗಳು ನಿಟ್ಟೆ ಮತ್ತು ಏರೋ ಕ್ಲಬ್‌ಗೆ ಹೆಮ್ಮೆ ತಂದಿದೆ. ಏರೋ ಮಾಡೆಲಿಂಗ್ ಮತ್ತು ಯುಎವಿ ತಂತ್ರಜ್ಞಾನಗಳಲ್ಲಿ ನಾವೀನ್ಯತೆ, ಉತ್ಕೃಷ್ಟತೆ ಮತ್ತು ನಾಯಕತ್ವವನ್ನು ಬೆಳೆಸುವ ಕ್ಲಬ್‌ನ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.