ಅಡ್ವಾಣಿಗೆ ಭಾರತ ರತ್ನ: ಸುಬುಧೇಂದ್ರ ಶ್ರೀ ಹರ್ಷ

| Published : Feb 04 2024, 01:30 AM IST

ಸಾರಾಂಶ

ಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಪುರಸ್ಕಾರ ಭಾರತ ರತ್ನವನ್ನು ಘೋಷಿಸಿದ್ದರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಯಚೂರು: ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಪುರಸ್ಕಾರ ಭಾರತ ರತ್ನವನ್ನು ಘೋಷಿಸಿದ್ದರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಧ್ವನಿ ಮುದ್ರಿಕೆ ಮುಖಾಂತರ ಹೇಳಿಕೆ ನೀಡಿರುವ ಸ್ವಾಮಿಗಳು, ದೇಶದೆಲ್ಲೆಡೆ ಬಿಜೆಪಿಯ, ಹಿಂದೂತ್ವದ ವಿಶೇಷ ಚೇತನ ಮೂಡಿಸಿರುವ ಎಲ್‌.ಕೆ.ಅಡ್ವಾಣಿ ಅವರು ನಿಜವಾಗಿಯೂ ಅಭಿನಂದನಾರ್ಹರು. ಅವರ ಪರಿಶ್ರಮ, ಹೋರಾಟ ಮತ್ತು ಜನ ಜಾಗೃತಿ ಜಾತ್ರೆ ಪರಿಣಾಮವಾಗಿ ಇಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಿ, ಬಾಲ ಶ್ರೀರಾಮ ದೇವರ ಮೂರ್ತಿಯ ಪ್ರತಿಷ್ಠಾಪನೆ ಆಗಿದೆ. ಅಂತಹ ಉತ್ತಮ ಸಾಧಕರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ಲಭಿಸಿರುವುದು ಎಲ್ಲರಿಗೂ ಸಂತಸದ ಮತ್ತು ಹೆಮ್ಮಯ ವಿಷಯವಾಗಿದೆ ಎಂದಿದ್ದಾರೆ.