ಭಾರತೀಯ ಸಂಸ್ಕೃತಿ ನನಗೆ ತುಂಬಾ ಇಷ್ಟ, ಸಂಸ್ಕೃತಿಯ ಪ್ರತೀಕ ಭರತನಾಟ್ಯ ಎಂದು ಖ್ಯಾತ ಭರತನಾಟ್ಟ ಕಲಾವಿದರು, ಚಲನಚಿತ್ರ ನಟ ಶ್ರೀಧರ್ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಭಾರತೀಯ ಸಂಸ್ಕೃತಿ ನನಗೆ ತುಂಬಾ ಇಷ್ಟ, ಸಂಸ್ಕೃತಿಯ ಪ್ರತೀಕ ಭರತನಾಟ್ಯ ಎಂದು ಖ್ಯಾತ ಭರತನಾಟ್ಟ ಕಲಾವಿದರು, ಚಲನಚಿತ್ರ ನಟ ಶ್ರೀಧರ್ ಹೇಳಿದರು.

ತಾಲೂಕಿನ ಮಮತ ಮಹಿಳಾ ಸಮಾಜ ವತಿಯಿಂದ ಪಟ್ಟಣದ ಅರಮನೆ ವೈಭವ ಹೋಟೆಲ್‌ನಲ್ಲಿ ಏರ್ಪಾಡಾಗಿದ್ದ ಮಮತ ಮಹಿಳಾ ಸಮಾಜ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಕಲೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ನನಗೆ ತುಂಬಾ ಆಸಕ್ತಿ ಇದೆ, ನಿತ್ಯ 8 ಗಂಟೆಗಳ ಸಮಯ ಭರತನಾಟ್ಯ ಸಾಧನೆಯಲ್ಲಿ ತೊಡಗಿಕೊಳ್ಲುತ್ತೇನೆ, ಮಾತೃಸ್ಥಾನ ಬಹಳ ದೊಡ್ಡದು, ನಾನು ನಟ ಶ್ರೀಧರ ಎನ್ನುವುದನ್ನು ಮರೆತು ಆಯಾ ಪಾತ್ರಗಳಲ್ಲಿ ಬೆರೆತು ಪಾತ್ರಗಳನ್ನು ನಿರ್ವಹಿಸುತ್ತಿದ್ದೇನೆ, ಸಂತ ಶಿಶುನಾಳ ಪರೀಫ ಚಲನಚಿತ್ರದಲ್ಲಿ ಸಂತ ಶಿಶುನಾಳ ಪರೀಫರ ಪಾತ್ರ ನನಗೆ ಅತ್ಯಂತ ತೃಪ್ತಿ ಕೊಟ್ಟ ಪಾತ್ರವಾಗಿದೆ, ತರೀಕೆರೆ ಕೆರೆ ಏರಿ ಮೇಲೆ ಈ ಹಾಡು ಕೇಳಿ ನಾನು ತುಂಬಾ ಸಂತೋಷ ಪಟ್ಟಿದ್ದೇನೆ, ಸಮಾಜದ ಸದಸ್ಯೆಯರು ಸುಶ್ರಾವ್ಯವಾಗಿ ಹಾಡಿದ ಅಮೃತಘಳಿಗೆ ಚಲನಚಿತ್ರದ ಹಾಡು ಹಿಂದೂಸ್ಥಾನ ಎಂದೂ ಮರೆಯದ ಭಾರತ ರತ್ನ ನೀನಾಗು ಹಾಡು ಕೇಳಿ ಅತ್ಯಂತ ಸಂತೋಷವಾಯಿತು ಎಂದು ಹೇಳಿದರು.

ಮಮತ ಮಹಿಳಾ ಸಮಾಜದ ಅಹ್ವಾನ ಪತ್ರಿಕೆ ತುಂಬಾ ಆಕರ್ಷಣೀಯವಾಗಿದೆ, ಪತ್ರಿಕೆಯಲ್ಲಿ ಪ್ರೀತಿಪೂರ್ವಕವಾದ ಆಹ್ವಾನ ಇದೆ, ಸಮಾಜ ಕಟ್ಟುವ ಕಾರ್ಯವನ್ನು ನೀವು ಮಾಡಿದ್ದೀರಿ, ತರೀಕೆರೆಗೆ ಬರಲು ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.

ಮಮತ ಮಹಿಳಾ ಸಮಾಜ ಅಧ್ಯಕ್ಷೆ ಮಂಜುಳ ವಿಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಖ್ಯ ಅತಿಥಿಗಳಾಗಿ ಚಿತ್ರನಟ ಶ್ರೀಧರ್ ಅವರು ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಇನ್ನೂ ಉನ್ನತ ಮಟ್ಟದ ಕಾರ್ಯಕ್ರಮಗಳು ಸಮಾಜದಲ್ಲಿ ನೆಡೆಯಲಿ ಎಂದು ಹಾರೈಸಿದರು. ಎರಡು ವರ್ಷ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಸಮಾಜದ ಹಿರಿಯ ಸದಸ್ಯರು ನನಗೆ ಎಲ್ಲ ಸಂದರ್ಭಗಳಲ್ಲೂ ನನ್ನ ತಪ್ಪು ಒಪ್ಪುಗಳನ್ನು ತಿದ್ದಿ ಸರಿಪಡಿಸಿ ನನಗೆ ಸಹಕಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಹಾಗೆಯೇ ಸಮಿತಿಯ ಪದಾದಿಕಾರಿಗಳು ನನ್ನ ಜೊತೆಗೆ ಕೈಜೋಡಿಸಿ ಎಲ್ಲ ಕಾರ್ಯಕ್ರಮಗಳಿಗೆ ಸಹಕರಿಸಿದ್ದಾರೆ, ಸಮಾಜದ ಎಲ್ಲಾ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದ್ದಾರೆ ಎಂದರು.

ಮಮತ ಮಹಿಳಾ ಸಮಾಜದ ಕಾರ್ಯದರ್ಶಿ ರೋಹಿಣಿ ಏನ್.ಮೂರ್ತಿ ವರದಿ ವಾಚಿಸಿದರು. ಜಯಲಕ್ಷ್ಮಿ ಜಗದೀಶ್ ಅವರು ಖ್ಯಾತ ಭರತನಾಟ್ಟ ಕಲಾವಿದರು, ಚಲನಚಿತ್ರ ನಟ ಶ್ರೀಧರ್ ಅವರನ್ನು ಪರಿಚಯಿಸಿದರು.

ರೋಹಿಣಿ ಎನ್.ಮೂರ್ತಿ, ಅವರ ತಂಡದವರು ಅಮೃತಘಳಿಗೆ ಚಲನಚಿತ್ರದ ಹಾಡು ಹಿಂದೂಸ್ಥಾನ ಎಂದೂ ಮರೆಯದ ಭಾರತ ರತ್ನ ನೀನಾಗು ಹಾಡು ಹೇಳಿದರು. ವಾಣಿ ಶ್ರೀನಿವಾಸ್ ಅವರು ಬಹುಮಾನಗಳನ್ನು ವಿತರಿಸಿದರು. ಮಮತ ಮಹಿಳಾ ಸಮಾಜ ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.