ಎಂಜಿನಿಯರ್ ಗಳು ಉದ್ಯೋಗದಾತರಾಗಬೇಕು

| Published : Sep 14 2025, 01:04 AM IST

ಸಾರಾಂಶ

ಅಮೇರಿಕಾದಲ್ಲಿ ಭಾರತೀಯರು ಸ್ಟಾರ್ಟಪ್ ಆರಂಭಿಸಲು ಕಷ್ಟವಾಗಿತ್ತು, ಮೊದಲಿಗೆ ಭಾರತದ ವಿನೋದ್ ಕೋಸ್ಲಾ ಸೇರಿದಂತೆ ಮೂರು ಮಂದಿಯ ತಂಡ ಸ್ಟಾರ್ಟಪ್ ಆರಂಭಿಸಿದರು,

ಕನ್ನಡಪ್ರಭ ವಾರ್ತೆ ನಂಜನಗೂಡುಟೈ-ಮೈಸೂರು ಸಂಸ್ಥೆ ನೆಕ್ಸ್ಟ್ ಫೌಂಡರ್ಸ್ ಯೋಜನೆಯಡಿ ಎಂಜಿನಿಯರ್ ಪದವಿಧರರು ಸ್ಟಾರ್ಟಪ್ ಆರಂಭಿಸುವ ಮೂಲಕ ಸ್ವಂತ ಉದ್ಯಮ ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಬೇಕು ಎಂದು ಟೈ –ಮೈಸೂರು ಸಂಸ್ಥೆಯ ಭಾಸ್ಕರ್ ಕಳಲೆ ಹೇಳಿದರು.ತಾಲೂಕಿನ ತಾಂಡವಪುರ ಎಂಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟೈ –ಮೈಸೂರು ಸಂಸ್ಥೆ ನೆಕ್ಸ್ಟ್ ಫೌಂಡರ್ಸ್ ಯೋಜನೆಯಡಿ ಸ್ಟಾರ್ಟಪ್ ಆರಂಭಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಮೇರಿಕಾದಲ್ಲಿ ಭಾರತೀಯರು ಸ್ಟಾರ್ಟಪ್ ಆರಂಭಿಸಲು ಕಷ್ಟವಾಗಿತ್ತು, ಮೊದಲಿಗೆ ಭಾರತದ ವಿನೋದ್ ಕೋಸ್ಲಾ ಸೇರಿದಂತೆ ಮೂರು ಮಂದಿಯ ತಂಡ ಸ್ಟಾರ್ಟಪ್ ಆರಂಭಿಸಿದರು, ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ವಿಯಾದರು, 1992ರಲ್ಲಿ ಬೆಂಗಳೂರಿನಲ್ಲಿ ಚಿಕ್ಕದಾಗಿ ಸ್ಟಾರ್ಟಪ್ ಉದ್ಯಮ ಆರಂಭವಾಯಿತು, ಈಗ ದೇಶದ ಸಿಲಿಕಾನ್ ಸಿಟಿಯಾಗಿ ಬೆಳೆದು ನಿಂತಿದೆ, ಈಗ ಸಿಡ್ನಿ, ಸಿಂಗಾಪುರ್, ಮಲೇಷಿಯಾ ಸೇರಿದಂತೆ ವಿಶ್ವದ ಬಿಜಿನಲ್ ಮಾಡೆಲ್ ಗಳಾಗಿ ಪ್ರಸಿದ್ದರಾಗಿದ್ದಾರೆ, ಯುವಕರು ಸ್ವಂತ ಪರಿಶ್ರಮದಿಂದ ಉದ್ಯಮ ಕಟ್ಟಿ ಯುವಕರಿಗೆ ಉದ್ಯೋಗ ಸೃಷ್ಠಿಸುವ ಕಾರ್ಯ ದೇಶವನ್ನು ಶ್ರೀಮಂತವಾಗಿ ಕಟ್ಟುವ ಕಾರ್ಯವಾಗಿದೆ. ಟೈ- ಮೈಸೂರು ಸಂಸ್ಥೆ ವಿಶ್ವದಾದ್ಯಂತ 65 ಕಡೆ ಯುವಕರಿಗೆ ತರಬೇತಿ ನೀಡಿ ಉದ್ಯಮ ಸ್ಥಾಪಿಸಲು ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.ಟೈ-ಮೈಸೂರು ಸಂಸ್ಥೆ ಸಹ ಸದಸ್ಯ ಮಂಜುನಾಥ್ ಭಟ್ ಮಾತನಾಡಿ, ವಿಶ್ವದಾದ್ಯಂತ ಸ್ಟಾರ್ಟಪ್ ಗಳಿಗೆ ಹೆಚ್ಚಿನ ಮಾನ್ಯತೆ ಇದೆ, ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಅಭಿಲಾಸೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಸ್ಟಾರ್ಟಪ್ ಆರಂಭಿಸಲು ಟೈ-ಮೈಸೂರು ಸಂಸ್ಥೆ ಸಹಕಾರ, ನೆರವು, ಮಾರ್ಗದರ್ಶನ ನೀಡಲಿದೆ, ಇನ್ಫೋಸಿಸ್ ನಾರಾಯಣಮೂರ್ತಿ ಅವರಿಗೆ ತಮ್ಮ ಸಂಸ್ಥೆ ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಕೊಂಡಿರಲಿಲ್ಲ, ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪದವಿ ಗಳಿಸಿದ ನಂತರ ಉದ್ಯಮ ಆರಂಭಿಸುವ ಬದಲು ವಿದ್ಯಾರ್ಥಿ ದೆಸೆಯಿಂದಲೇ ಉದ್ಯಮ ಸ್ಥಾಪಿಸಬಹುದಾಗಿದೆ, ಕಾಲೇಜಿನಿಂದ 30 ಮಂದಿ ನಮ್ಮ ನೆಕ್ಸ್ಟ್ ಫೌಂಡರ್ಸ್ ಯೋಜನೆಯಡಿ ತರಬೇತಿ ಪಡೆದು ಸ್ಟಾರ್ಟಪ್ ಉದ್ಯಮಿಗಳಾಗಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ವೈ.ಟಿ. ಕೃಷ್ಣೇಗೌಡ ಮಾತನಾಡಿ, ಹಳ್ಳಿಯ ಹಿನ್ನೆಲೆಯಿಂದ ಬಂದ ಪ್ರೊಫೆಸರ್ ಗಳು ಕೂಡಿ ಸ್ಥಾಪಿಸಿದ ಎಂ.ಐ.ಟಿ ಎಂಜಿನಿಯರಿಂಗ್ ಕಾಲೇಜು ಬೃಹತ್ತಾಗಿ ಬೆಳೆದು ಮೈಸೂರಿನಲ್ಲಿ ನರ್ಸಿಂಗ್ ಕಾಲೇಜ್, ಪ್ರಥಮ ದರ್ಜೆ ಕಾಲೇಜು, ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ 10 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶವಾಗಿದೆ, ಜೆಎಸ್ಎಸ್ ಸಂಸ್ಥೆಯ ನಂತರ 2ನೇ ಸ್ಥಾನದಲ್ಲಿ ನಾವಿದ್ದೇವೆ, ವಿದ್ಯಾರ್ಥಿಗಳು ಸ್ಟಾರ್ಟಪ್ ಉದ್ಯಮ ಸ್ಥಾಪಿಸಲು ನೆರವಾಗುವ ನಿಟ್ಟಿನಲ್ಲಿ ದೇಶದ ಪ್ರಸಿದ್ದ ಕಂಪನಿಗಳ ಸಿಇಒ ಗಳನ್ನು ಕರೆದು ನೆಕ್ಸ್ಟ್ ಫೌಂಡರ್ಸ್ ಯೋಜನೆಯಡಿ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ಎಂಐಟಿ ಕಾಲೇಜಿನ ಟ್ರಸ್ಟಿಗಳಾದ ಎಚ್.ಕೆ. ಚೇತನ್, ಧರ್ಮಪ್ರಸಾದ್, ಪ್ರಾಧ್ಯಾಪಕರಾದ ಡಾ. ಸುನೀಲ್, ಪ್ರೊ. ಮೊಹಮದ್ ಸಲಾಮತ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.