ಭಟ್ಕಳದಲ್ಲಿ ಪ್ರಧಾನ ಕಚೇರಿ ಹೊಂದಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ 17 ಶಾಖೆ ಹೊಂದಿರುವ ಸಂಘ ಎಲ್ಲರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಂಘ ₹500 ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ.
ಭಟ್ಕಳ: ಇಲ್ಲಿನ ಜನತಾ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವರ್ಷದ ವಾರ್ಷಿಕ ಮಹಾಸಭೆ ಅಧ್ಯಕ್ಷ ಹಾಗೂ ಡೆಪ್ಯುಟಿ ಸ್ಪೀಕರ್ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಷೇರುದಾರರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘ ಉತ್ತಮವಾಗಿ ವ್ಯವಹಾರ ನಡೆಸಿ ಕಳೆದ ಮಾರ್ಚ್ ಅಂತ್ಯಕ್ಕೆ ₹3.31 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ ₹14 ಕೋಟಿಗೂ ಅಧಿಕ ಷೇರು ಬಂಡವಾಳ, ₹242 ಕೋಟಿ ಠೇವಣಿ ಹೊಂದಿದ್ದು, ಸದಸ್ಯರಿಗೆ ವಿವಿಧ ಸಾಲವಾಗಿ ₹291 ಕೋಟಿ ಸಾಲ ವಿತರಣೆ ಮಾಡಿದ್ದೇವೆ. ಈ ಸಲ ಷೇರುದಾರರಿಗೆ ಶೇ. 10ರಷ್ಟು ಲಾಭಾಂಶ ನೀಡಲು ನಿರ್ಧರಿಸಿದ್ದೇವೆ ಎಂದ ಅವರು, ಸಂಘವನ್ನು ಹಿರಿಯರು ಶ್ರಮದಿಂದ ಕಟ್ಟಿದ್ದು, ಅದನ್ನು ಬೆಳೆಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಭಟ್ಕಳದಲ್ಲಿ ಪ್ರಧಾನ ಕಚೇರಿ ಹೊಂದಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ 17 ಶಾಖೆ ಹೊಂದಿರುವ ಸಂಘ ಎಲ್ಲರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಂಘ ₹500 ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಸುಮಾರು 100 ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಪ್ರೈವೇಟ್ ಲಿ ಕಂಪನಿ, ಪಾರ್ಟನರ್ ಶಿಪ್,, ಪ್ರೊಪರೈಟರ್ ಶಿಪ್, ಲಿಮಿಟೆಡ್ ಲಯಬಿಲಿಟಿ ಪಾರ್ಟನರ್‌ಶಿಪ್ ಹೊಂದಿದವರಿಗೆ ಸಾಲ ನೀಡಲು ಚಿಂತನೆ ನಡೆಸಲಾಗಿದೆ.
ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಸಂಘದ ಅಭಿವೃದ್ಧಿ ಹೆಚ್ಚಾಗಲು ಸಾಧ್ಯವಾಗುತ್ತದೆ. ಸಂಘದ ಹಿತದೃಷ್ಟಿಯಿಂದ ಕಟಬಾಕಿ ಸಾಲಗಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಹೀಗಾಗಿ ಸಾಲ ಪಡೆದವರು ಕಟಬಾಕಿ ಮಾಡಿಕೊಳ್ಳದೇ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡಬೇಕು ಎಂದರು.ಸಂಘ ಆರ್ಥಿಕ ವ್ಯವಹಾರದ ಜತೆಗೆ ಸಮಾಜಮುಖಿಯಾಗಿಯೂ ಸ್ಪಂದಿಸುತ್ತಿದೆ. ಬಡಮಕ್ಕಳ ಶೈಕ್ಷಣಿಕ, ಅನಾರೋಗ್ಯ, ಕ್ರೀಡೆ, ಧಾರ್ಮಿಕ ಹೀಗೆ ಅನೇಕ ರೀತಿಯಲ್ಲಿ ಜನತೆಗೆ ಸಹಾಯ ಸಹಕಾರ ಮಾಡಲಾಗುತ್ತಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ವಿನಯ ನಾಯ್ಕ ವರದಿ ವಾಚಿಸಿದರು. ಉಪಾಧ್ಯಕ್ಷ ಪರಮೇಶ್ವರ ದೇವಡಿಗ ಸ್ವಾಗತಿಸಿದರು. ನಿರ್ದೇಶಕ ಕೃಷ್ಣಾ ನಾಯ್ಕ ವಂದಿಸಿದರು. ಸಭೆಯಲ್ಲಿ ನಿರ್ದೇಶಕರಾದ ನಾಗಪ್ಪ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ವೆಂಕಟ್ರಮಣ ಮೊಗೇರ, ಅಲ್ಬರ್ಟ ಡಿಕೋಸ್ತ, ಲಕ್ಷ್ಮೀ ನಾಯ್ಕ, ಗೀತಾ ನಾಯ್ಕ ಇದ್ದರು.