ಭೀಮಾ ಕೋರೆಗಾಂವ್‌ ಯುದ್ದ ದಲಿತರಿಗೆ ಸಿಕ್ಕ ಜಯ

| Published : Jan 02 2024, 02:15 AM IST

ಸಾರಾಂಶ

ಮಹಾರಾಷ್ಟ್ರದ ಪೇಶ್ವೆ ಹಾಗೂ ಮಹರ್ ಸಮುದಾಯ ಸೈನಿಕರ ಮದ್ಯೆ ನಡೆದ ಯುದ್ದದಲ್ಲಿ ದಲಿತರು ಜಯ ಸಾಧಿಸಿದ್ದ ದಿನದ ಅಂಗವಾಗಿ ಸಂವಿಧಾನ ಬಳಗದ 500ಕ್ಕಿಂತ ಹೆಚ್ಚು ದಲಿತ ಮುಖಂಡರು ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಭೀಮಾ ಕೋರಂಗಾವ್ ವಿಜಯೋತ್ಸವ ಪರ ಅದ್ದೂರಿಯ ಜೈಕಾರ ಮೊಳಗಿಸಿದರು.

ಪಳವಳ್ಳಿ ಸುಬ್ಬರಾಜ್‌ ಅಭಿಮತ । ಭೀಮಾ ಕೋರೆಗಾಂವ್ ಯುದ್ದ ಯಶಸ್ವಿ ದಿನ । ಸಂವಿದಾನ ಬಳಗದ ಮುಖಂಡರಿಂದ ಬೈಕ್ ರ್‍ಯಾಲಿ

ಕನ್ನಡಪ್ರಭ ವಾರ್ತೆ ಪಾವಗಡ

ಮಹಾರಾಷ್ಟ್ರದ ಪೇಶ್ವೆ ಹಾಗೂ ಮಹರ್ ಸಮುದಾಯ ಸೈನಿಕರ ಮದ್ಯೆ ನಡೆದ ಯುದ್ದದಲ್ಲಿ ದಲಿತರು ಜಯ ಸಾಧಿಸಿದ್ದ ದಿನದ ಅಂಗವಾಗಿ ಸೋಮವಾರ ತಾಲೂಕಿನ ಸಂವಿಧಾನ ಬಳಗದ 500ಕ್ಕಿಂತ ಹೆಚ್ಚು ದಲಿತ ಮುಖಂಡರು ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಭೀಮಾ ಕೋರಂಗಾವ್ ವಿಜಯೋತ್ಸವ ಪರ ಅದ್ದೂರಿಯ ಜೈಕಾರ ಮೊಳಗಿಸಿದರು.

ಬೆಳಗ್ಗೆ 10ಗಂಟೆಗೆ ಸಮಾವೇಶಗೊಂಡ ಸಂವಿಧಾನ ಬಳಗದ ದಲಿತ ಪರ ಸಂಘಟನೆಯ ಮುಖಂಡರು ಒಂದೆಡೆ ಸೇರಿ ಪಟ್ಟಣದ ಪ್ರವಾಸಿ ಮಂದಿರದಿಂದ ಬೈಕ್ ರ್‍ಯಾಲಿಯೊಂದಿಗೆ ಟೋಲ್ಗೇಟ್ ಗೆ ಆಗಮಿಸಿ ಡಾ,ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಜೈಕಾರ ಕೂಗಿದರು.

ಬಳಿಕ ನಗರದ ಬಳ್ಳಾರಿ ರಸ್ತೆ ಮೂಲಕ ಎಸ್ಎಸ್ ಕೆ ವೃತ್ತ , ಎಂಎಜಿ ಸರ್ಕಲ್ ಹಾಗೂ ಪೆನಗೊಂಡ ರಸ್ತೆ ಮೂಲಕ ತಾಪಂಗೆ ತೆರಳಿ ಕೋರೆಂಗಾವ್ ಯುದ್ದ ದಲಿತರಿಗೆ ಸಿಕ್ಕ ಯಶಸ್ಸಾಗಿದೆ ಎಂದು ಘೋಷಣೆ ಮೊಳಗಿಸಿದರು. ಅಂಬೇಡ್ಕರ್ ಪ್ರತಿಮೆ ಬಳಿ ವಾಪಸ್ಸಾಗಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಕರ್ನಾಟಕ ಬೌದ್ದ ಧರ್ಮದ ಅಧ್ಯಕ್ಷ ಪಳ್ಳವಳ್ಳಿ ಸುಬ್ಬರಾಜ್ ಮಾತನಾಡಿ, ಕಳೆದ 200ವರ್ಷಗಳ ಹಿಂದೆ ರಾಷ್ಟ್ರದಲ್ಲಿ ಅಸ್ಪ್ರಶತೆ ತಾಂಡವಾಡುತ್ತಿತ್ತು.ಈ ವೇಳೆ ಮಹಾರಾಷ್ಟ್ರದಲ್ಲಿ ಬ್ರಿಟಿಷರು ಮತ್ತು ಪೇಶ್ವೆಗಳಿಗೆ ಯುದ್ದ ಎದುರಾದಾಗ ಅಲ್ಲಿನ ಪೇಶ್ವೆ ಬಾಜೀರಾಯ ದಲಿತರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದನು. ಆಗ ಬ್ರಿಟಿಷರ ಪರ ನಿಂತ ಮಹರ್ ಸಮುದಾಯದ 500 ಸೈನಿಕರು ಪೇಶ್ವೆಗಳ ವಿರುದ್ದ ಹೋರಾಡಿ ಜಯಸಾಧಿಸಿದ್ದು, ಯುದ್ದದಲ್ಲಿ ಮೃತ ದಲಿತ ಸೈನಿಕರ ನೆನಪಿಗೆ ಬ್ರಿಟಿಷರು ಸ್ಮಾರಕ ಕಟ್ಟಿದ್ದಾರೆ. ದಲಿತ ಸೈನಿಕರ ಮನವಿಗೆ ಸ್ಪಂಧಿಸಿದ ಬ್ರಿಟಿಷರು ಶಿಕ್ಷಣ ಕಾಯ್ದೆ ಜಾರಿಗೆ ತಂದ ಪರಿಣಾಮ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದು, ಈ ಬಗ್ಗೆ ಅಂಬೇಡ್ಕರ್ ಸಂವಿಧಾನದಿಂದ ಶಿಕ್ಷಣ ಸಮಾನತೆ ಕಾಣಲು ಸಾಧ್ಯವಾಗಿದೆ ಎಂದರು.

ತಾಲೂಕು ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಡಿಜೆಎಸ್ ನಾರಾಯಣಪ್ಪ ಮಾತನಾಡಿ, ಮಹಾರಾಷ್ಟ್ರದ ಆಗಿನ ರಾಜ ಬಾಜೀರಾಯ ದಲಿತರ ಬಗ್ಗೆ ಅತ್ಯಂತ ಕೀಳು ಮನಸ್ಥಿತಿ ಹೊಂದಿದ್ದ ಪರಿಣಾಮ, ಮಹರ್ ಸೈನಿಕರು ಬ್ರಿಟಿಷರ ಪರ ನಿಲ್ಲುವ ಸಂದರ್ಭ ಒದಗಿತ್ತು. ಆಗ ಬ್ರಿಟಿಷ್ ಹಾಗೂ ಬಾಜೀರಾಯನ ಮದ್ಯೆ ನಡೆದ ಯುದ್ದದಲ್ಲಿ ಪೇಶ್ವೆಗಳನ್ನು ಸೋಲಿಸಿದ್ದು, ದಲಿತರಿಗೆ ಸಿಕ್ಕ ಜಯವಾಗಿದೆ. ಹೀಗಾಗಿ ಹೊಸ ವರ್ಷವನ್ನು ದಲಿತರ ವಿಜಯೋತ್ಸವದ ವರ್ಷವೆಂದು ಆಚರಿಸಬೇಕು.ಈ ಮಹತ್ತರ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ತಾಲೂಕಿನ ಎಲ್ಲಾ ದಲಿತ ಪರ ಚಿಂತನೆ ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಡಿಎಸ್ಎಸ್ ತಾಲೂಕು ಸಂಚಾಲಕ ಮೀನಗುಂಟೆಹಳ್ಳಿ ನರಸಿಂಹಪ್ಪ, ದಲಿತ ಸಂಘಟನೆ ಮುಖಂಡ ಸಿ.ಕೆ.ಪುರ ಹನುಮಂತರಾಯಪ್ಪ, ಡಿಎಸ್ಎಸ್ ಕಾರ್ಯದರ್ಶಿ ಕತಿಕ್ಯಾತನಹಳ್ಳಿ ನಾರಾಯಣ್, ಮದ್ಲೇಟಪ್ಪ,ಯುವ ಮುಖಂಡ ಚಿನ್ನಮ್ಮನಹಳ್ಳಿಯ ಸಿ.ಎಚ್‌.ಮುರಳಿ ಮೌರ್ಯ, ಆರ್.ಅಂಜಯ್ಯ, ವಿಜಯಕುಮಾರ್, ಪಳವಳ್ಳಿ ನರಸಿಂಹಪ್ಪ, ಬ್ಯಾಡನೂರು ಉಗ್ರಪ್ಪ, ಅಂಜನ್,ಗಂಗಾಧರ್‌,ರವಿ,ಅಗ್ನಿ,ಚನ್ನಕೇಶವ ನಾಗರಾಜು,ಚಿನ್ನಮ್ಮನಹಳ್ಳಿ ಗ್ರಾಪಂ ಸದಸ್ಯ ತಿಮ್ಮರಾಯಪ್ಪ,ತಿಮ್ಮರಾಜು, ಶನಿವಾರಪ್ಪ,ದುರ್ಗಣ್ಣ ಮುತ್ತುರಾಜು ಆನೇಕ ಜನರು, ದಲಿತ ಮುಖಂಡರು ಭಾಗವಹಿಸಿದ್ದರು.

----

ಪಾವಗಡ,ಭೀಮಾ ಕೋರೆಗಾಂವ್‌ ಯುದ್ದ ಕುರಿತು ಕರ್ನಾಟಕ ಬೌದ್ದ ಸಮಾಜದ ಅಧ್ಯಕ್ಷ ಸುಬ್ಬರಾಜ್‌ ಹಾಗೂ ಡಿಜೆಎಸ್‌ ನಾರಾಯಣಪ್ಪ,ಟಿ.ಎನ್‌.ಪೇಟೆ ರಮೇಶ್‌ ಡಿಎಸ್‌ಎಸ್‌ನ ನರಸಿಂಹಪ್ಪ ಕತಿಕ್ಯಾತನಹಳ್ಳಿ ನಾರಾಯಣ್‌ ಮುಂತಾದವರು ಮಾತನಾಡಿದರು.

---

ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾಂವ್ ಯುದ್ದ ಯಶಸ್ವಿ ದಿನದ ಹಿನ್ನೆಲೆ ಸಂವಿಧಾನ ಬಳಗದಿಂದ ಪಟ್ಟಣದಲ್ಲಿ ಬೈಕ್‌ ರ್‍ಯಾಲಿ ಮೂಲಕ ಜೈಕಾರ ಮೊಳಗಿಸಿದರು.