ಸಾರಾಂಶ
ತಿಪಟೂರು: ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು.
ತಿಪಟೂರು: ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಮತ್ತಿಹಳ್ಳಿ ಗ್ರಾಪಂ ಸದಸ್ಯ ಎಂ.ಡಿ. ಹರೀಶ್‌ಗೌಡ ಮಾತನಾಡಿ, ಭೀಮಾ ಕೋರೆಗಾಂವ್ ಒಂದು ನೆನಪು. ಅಂಬೇಡ್ಕರ್ ಪ್ರತಿ ಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೆಗಾಂವ್ ಕೂಡ ಒಂದಾಗಿದೆ. ಬ್ರಿಟಿಷರು ಮೂರನೇ ಬಾರಿ ಯುದ್ಧ ಸಾರಿದಾಗ ಕೇವಲ ೫೦೦ ಮಹರ್ ಸೈನಿಕರು, ಸಾವಿರ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರನ್ನು ಕೇವಲ 12 ಗಂಟೆಗಳಲ್ಲಿ ಹಿಮ್ಮೆಟ್ಟಿಸಿ ರಾಜ ಬಾಜೀ ರಾಯನನ್ನು ಯುದ್ಧ ಭೂಮಿಯಿಂದ ಓಡಿಸಿ ವಿಜಯ ಪತಾಕೆಯನ್ನು ಹಾರಿಸಿದ ಸತ್ಯ ಅದಾಗಿತ್ತು. ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಮಹರ್ ವೀರಸೇನಾನಿ ಸಿದ್ದನಾಕನೂ ಸೇರಿದಂತೆ 26 ಸೈನಿಕರ ಹೆಸರನ್ನು ಕೆತ್ತಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕ ನಿರ್ಮಾಣದ ದಾಖಲೆಯನ್ನು ಅಂಬೇಡ್ಕರ್ ರವರು ಭಾರತಕ್ಕೆ ಬಂದು ಬಿಡುಗಡೆ ಮಾಡಿದ್ದರು. ಪ್ರತಿ ಜನವರಿ ಒಂದರಂದು ಅಲ್ಲಿಗೆ ಹೋಗಿ ನಮನ ಸಲ್ಲಿಸುವ ಮೂಲಕ ವೀರಗಾಥೆಯ ಪಾಠವನ್ನು ಪ್ರತಿ ಭಾರತೀಯರಿಗೂ ಮತ್ತು ಜಗತ್ತಿನ ಜನತೆಗೆಲ್ಲ ತಿಳಿಸಿಕೊಟ್ಟರು. ಆದ್ದರಿಂದ ಜನವರಿ ಒಂದು ಚರಿತ್ರಾರ್ಹ ದಿನವೆಂದು ಘೋಷಿಸಿದೆ ಎಂಬುದಾಗಿ ತಿಳಿಸಿದರು.ವಿಜಯೋತ್ಸವದಲ್ಲಿ ದಲಿತ ಮುಖಂಡರಾದ ಬಜಗೂರು ಮಂಜುನಾಥ್, ಕುಪ್ಪಾಳು ರಂಗಸ್ವಾಮಿ, ಕೊಪ್ಪ ಶಾಂತಪ್ಪ, ಕೊರಚ ಸಮಾಜದ ಅಧ್ಯಕ್ಷ ಮಾರನಗೆರೆ ಸತೀಶ್, ನಗರ ಅಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಸಂದೀಪ್, ರಹಮತ್ ಸೇರಿದಂತೆ ದಲಿತಪರ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.