ಜನವರಿ ೨೦ರಂದು ಹಾಸನದಲ್ಲಿ ೨೦೮ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಶುಕ್ರವಾರ ಸಂಜೆ ನಡೆಸಲಾಯಿತು. ಸಭೆಗೆ ಆಗಮಿಸಿದ ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ನಿವೃತ್ತ ಡಿಸಿಪಿ ಎಸ್. ಸಿದ್ಧರಾಜು ಅವರು ಸಮಿತಿಯಿಂದ ಕಾರ್ಯಕ್ರಮದ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಸಲಹೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಜನವರಿ ೨೦ ರಂದು ಹಾಸನದಲ್ಲಿ ೨೦೮ನೇ ಭೀಮಾಕೋರೆಂಗಾವ್ ವಿಜಯೋತ್ಸವ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಅವರ ಮೊಮ್ಮಗ ಭೀಮಾರಾವ್ ಅಂಬೇಡ್ಕರ್ ಅವರು ಮೊದಲ ಭಾರಿಗೆ ಆಗಮಿಸುತ್ತಿದ್ದಾರೆ ಎಂದು ವಿಜಯೋತ್ಸವ ಸಮಿತಿ ತಿಳಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಕಾರ್ಯಕ್ರಮ ಹಾಸನದ ಬಿ.ಎಂ. ರಸ್ತೆ ಪ್ರಜಾಸೌಧ ಪಕ್ಕದ ರಸ್ತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರೈಲ್ವೆ ನಿಲ್ದಾಣದಿಂದ ಎನ್.ಆರ್‌. ಸರ್ಕಲ್‌ವರೆಗೆ ವಿಜಯಸ್ತಂಭದೊಂದಿಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆಮೂಲೆಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ವಾಹನ ನಿಲುಗಡೆಗೆ ಈಗಾಗಲೇ ಸ್ಥಳವನ್ನು ಗುರುತು ಮಾಡಲಾಗಿದೆ. ಪೊಲೀಸ್ ಇಲಾಖೆ ತಿಳಿಸಿರುವಂತೆ ರೈಲ್ವೆ ನಿಲ್ದಾಣದಿಂದ-ಡಿಪೋವರೆಗೆ ರಸ್ತೆ ಬದಿಯಲ್ಲಿ ಪಾರ್ಕಿಂಗ್ (೧) ಮಾಡಬಹುದು. ರೇಷ್ಮೆ ಇಲಾಖೆ ಆವರಣ(೨), ಜ್ಞಾನಾಕ್ಷಿ ಕಲ್ಯಾಣ ಮಂಟಪ ಮುಂಭಾಗದ ರಸ್ತೆ(೩), ಹೊಸ ಬಸ್ ನಿಲ್ದಾಣದ ಬಳಿ ಪಾರ್ಕ್ ಬಳಿ ಪಾರ್ಕಿಂಗ್ ಸ್ಥಳ ಒಟ್ಟು ನಾಲ್ಕು ಸ್ಥಳಗಳನ್ನು ಗುರುತು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರು ಈ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಸಮಿತಿ ಮನವಿ ಮಾಡಿದೆ.

ಜನವರಿ ೨೦ರಂದು ಹಾಸನದಲ್ಲಿ ೨೦೮ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಶುಕ್ರವಾರ ಸಂಜೆ ನಡೆಸಲಾಯಿತು. ಸಭೆಗೆ ಆಗಮಿಸಿದ ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ನಿವೃತ್ತ ಡಿಸಿಪಿ ಎಸ್. ಸಿದ್ಧರಾಜು ಅವರು ಸಮಿತಿಯಿಂದ ಕಾರ್ಯಕ್ರಮದ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಸಲಹೆ ಸೂಚನೆ ನೀಡಿದರು

ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಚ್.ಕೆ. ಸಂದೇಶ್, ಉಪಾಧ್ಯಕ್ಷರಾದ ಶಿವಮ್ಮ, ಭಾಗ್ಯ ಕಲಿವೀರ್‌, ಅಂಬುಗಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಮಂಜು ತೇಜೂರು, ಹಾಡಗೋಡನಹಳ್ಳಿ ಉಮೇಶ್, ದೇವರಾಜು, ಪ್ರಚಾರ ಸಮಿತಿ ವೆಂಕಟೇಶ್ ಬ್ಯಾಕರವಳ್ಳಿ, ಜಗದೀಶ್ ಚೌಡಹಳ್ಳಿ, ಚೇತನ್‌ ಶಾಂತಿಗ್ರಾಮ, ರಾಮು, ತೋಟೇಶ್ ನಿಟ್ಟೂರು, ಭೀಮ್‌ ಆರ್ಮಿ ಪ್ರದೀಪ್, ನವೀನ್, ಶಿವಕುಮಾರ್ ಸಾತೇನಹಳ್ಳಿ, ಶಿವಣ್ಣ,ಕೆ.ವೈ. ಜಗದೀಶ್, ತಟ್ಟೆಕೆರೆ ಮಂಜು ಇನ್ನಿತರರು ಇದ್ದರು.