ಸಾರಾಂಶ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಏ. 11ರಿಂದ 14ರ ವರೆಗೆ ಹಮ್ಮಿಕೊಂಡಿರುವ "ಭೀಮ ಹೆಜ್ಜೆ- 100ರ ಸಂಭ್ರಮ " ರಥಯಾತ್ರೆ ಮತ್ತು ಬೈಕ್ ರ್ಯಾ ಲಿಗೆ ಭಾನುವಾರ ನಗರದ ಡಾ. ಅಂಬೇಡ್ಕರ್ ಮೂರ್ತಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.
ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಏ. 11ರಿಂದ 14ರ ವರೆಗೆ ಹಮ್ಮಿಕೊಂಡಿರುವ "ಭೀಮ ಹೆಜ್ಜೆ- 100ರ ಸಂಭ್ರಮ " ರಥಯಾತ್ರೆ ಮತ್ತು ಬೈಕ್ ರ‍್ಯಾಲಿಗೆ ಭಾನುವಾರ ನಗರದ ಡಾ. ಅಂಬೇಡ್ಕರ್ ಮೂರ್ತಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಡಾ. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ರಥಯಾತ್ರೆಗೆ ಚಾಲನೆ ನೀಡಿದ ಸಚಿವರು ರಥಯಾತ್ರೆಯ ವಾಹನ ಏರಿ ಸ್ವಲ್ಪ ದೂರ ಸಾಗಿ ಕೆಳಗಿಳಿದರು. ರಥಯಾತ್ರೆ ಮುಂದೆ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಚೆನ್ನಮ್ಮ ವೃತ್ತದ ವರೆಗೂ ಸಾಗಿದರು.ರಥಯಾತ್ರೆಯಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಮುಖಂಡರಾದ ಲಿಂಗರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹೇಂದ್ರ ಕೌತಾಳ, ದೀಪಕ್ ದೊಡ್ಡಯ್ಯ, ಡಾ. ಕ್ರಾಂತಿಕಿರಣ, ಬಸವರಾಜ ಅಮ್ಮಿನಭಾವಿ, ಲಕ್ಷ್ಮಣ್ ಬೀಳಗಿ, ಪ್ರಕಾಶ್ ಕ್ಯಾರಕಟ್ಟಿ, ಪರಶುರಾಮ್ ಪೂಜಾರ, ರಾಜು ಕಾಳೆ, ಮಂಜುನಾಥ ಕಾಟ್ಕರ, ನಾರಾಯಣ ಜರತಾರಘರ, ಅಶೋಕ್ ವಾಲ್ಮೀಕಿ, ಸಿದ್ದು ಮೊಗಲಿಶೆಟ್ಟರ್, ಶಿವು ಮೆಣಸಿನಕಾಯಿ, ಅನುಪ ಬಿಜವಾಡ, ಪ್ರಭು ನವಲಗುಂದಮಠ ಸೇರಿದಂತೆ ಹಲವರಿದ್ದರು.