ಭೀಮಾನದಿ ಎಫೆಕ್ಟ್‌: ಕರ್ನಾಟಕ-ಮಹಾ ಸಂಪರ್ಕ ಸ್ಥಗಿತ

| Published : Aug 07 2024, 01:06 AM IST

ಭೀಮಾನದಿ ಎಫೆಕ್ಟ್‌: ಕರ್ನಾಟಕ-ಮಹಾ ಸಂಪರ್ಕ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ. ಮಹಾರಾಷ್ಟ್ರದ ಜಲಾಶಯಗಳಿಂದ ಲಕ್ಷಾಂತರ ಕ್ಯುಸಕ್ ನೀರು ಹರಿಬಿಟ್ಟದ್ದರಿಂದ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಹುತೇಕ ಬ್ಯಾರೆಜ್‌ ಕಮ್‌ ಬ್ರಿಡ್ಜ್‌ಗಳು ನೀರಿನಲ್ಲಿ ಮುಳಗಿದ್ದು, ಕರ್ನಾಟಕ - ಮಾಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಚಾರ ಸ್ಥಗಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಚಡಚಣ.

ಮಹಾರಾಷ್ಟ್ರದ ಜಲಾಶಯಗಳಿಂದ ಲಕ್ಷಾಂತರ ಕ್ಯುಸಕ್ ನೀರು ಹರಿಬಿಟ್ಟದ್ದರಿಂದ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಹುತೇಕ ಬ್ಯಾರೆಜ್‌ ಕಮ್‌ ಬ್ರಿಡ್ಜ್‌ಗಳು ನೀರಿನಲ್ಲಿ ಮುಳಗಿದ್ದು, ಕರ್ನಾಟಕ - ಮಾಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಚಾರ ಸ್ಥಗಿತಗೊಂಡಿದೆ.

ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಗೋವಿಂದಪುರ, ಉಮರಾಣಿ, ಚಿತಪೂರ -ಧೂಳಖೇಡ, ನಿವರಿಗಿ-ಉಮರಜ ಹಾಗೂ ಹಿಂಗಣಿ ಸೇರಿ ಬಹುತೇಕ ಬ್ಯಾರೇಜ್ ಕಮ್‌ ಬ್ರಿಡ್ಜ್‌ಗಳು ತುಂಬಿ ಹರಿಯುತ್ತಿವೆ. ರಸ್ತೆ ಸಂಪರ್ಕ ಸ್ಥಗಿತಗೊಂಡ ನಿಮಿತ್ಯ ವಾಹನ ಸವಾರರು, ಪ್ರಯಾಣಿಕರು ಮತ್ತು ಗಡಿಯ ಸಂಬಂಧಪಟ್ಟ ರೈತರು ತೊಂದರೆಗೊಳಾಗಿದ್ದಾರೆ. ನದಿ ತೀರದ ಜಮೀನಿನ ರೈತರ ಬೆಳೆಗೆ ನೀರು ನುಗ್ಗಿದ್ದು, ಪ್ರಮುಖ ಬೆಳೆಗಳಾದ ಕಬ್ಬು, ತೊಗರಿ, ಬಾಳೆ ಜಲಾವೃತವಾಗಿವೆ.