ಸಾರಾಂಶ
ಅಭಿಮಾನಿಗಳ ಶುಭ ಹಾರೈಕೆಯೇ ನನಗೆ ಶ್ರೀರಕ್ಷೆ ಎಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹುಟ್ಟುಹಬ್ಬದ ನಿಮಿತ್ತ ಸಮೀಪದ ನಾಗರಾಳ ಎಸ್.ಪಿ. ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶನಿವಾರ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು.ಮಂಜುನಾಥ ಪಾಟೀಲ ಅವರು 250 ಮಕ್ಕಳಿಗೆ ನೋಟ್ ಬುಕ್ ಗಳನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ವಿತರಿಸಿ ಮಾತನಾಡಿ, ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಪುಸ್ತಕಗಳನ್ನು ಮಾತ್ರ ಉಡುಗೊರೆಯಾಗಿ ನೀಡಬೇಕು. ಕಾರ್ಯಕರ್ತರ, ಅಭಿಮಾನಿಗಳ ಶುಭ ಹಾರೈಕೆಯೇ ನನಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಹೇಳಿದರು.
ಲೆಂಕೆಪ್ಪ ಹಿರೇಕುರಬರ, ಗ್ರಾಪಂ ಅಧ್ಯಕ್ಷ ರಾಮಪ್ಪ ವಾಲಿಕಾರ, ಉಪಾಧ್ಯಕ್ಷ ಯಲ್ಲಪ್ಪ ಹಿರೇಹಾಳ, ಗೋಪಾಲ ಜಕ್ಕಪ್ಪನವರ, ಮಂಜು ವಾಲಿಕಾರ, ಬಸವರಾಜ ಹಡಗಲಿ, ಮುಖ್ಯಗುರು ಶಬ್ಬಿರ ಬಾಗವಾನ, ಎಸ್.ವೈ.ಬದಿ, ಎಸ್.ಪಿ.ಗಂಗಾವತಿ, ಕೆ.ಎಲ್.ಲೋಪ್ಸ್, ಎಸ್.ಎಂ. ಪಾಟೀಲ, ಪಿ.ಎಂ. ಕೆಲವಡಿ, ಜೆ.ವೈ. ಮಾದರ ಇತರರು ಇದ್ದರು.ಹುಟ್ಟುಹಬ್ಬದ ನಿಮಿತ್ತ ಚಿತ್ರಕಲಾವಿದ ಬಸವರಾಜ ಹಡಗಲಿ ಬಿಡಿಸಿದ ವೀಣಾ ಭಂಗಿಯ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಫಕೀರಪ್ಪ ಚಿಕ್ಕದ್ಯಾವಪ್ಪನವರ, ಶಿವಾನಂದ ನರಗುಂದ, ಶಿವಾನಂದ ಜಕ್ಕಪ್ಪನವರ, ಜಗದೀಶ ಹಿರೇದ್ಯಾವಪ್ಪನವರ, ರಮೇಶ ಗೂಡುರ, ಪರಸಪ್ಪ ಆಲೂರು, ಮಂಜು ಪಾಟೀಲ, ಮಂಜು ಕುಂದರಗಿ ಇದ್ದರು.