ಚಿತ್ಪಾವನ ಭಾಷೆಯಲ್ಲಿ ‘ಭೀಷ್ಮ ಪ್ರತಿಜ್ಞೆ‘ ತಾಳಮದ್ದಲೆ

| Published : May 31 2024, 02:16 AM IST

ಚಿತ್ಪಾವನ ಭಾಷೆಯಲ್ಲಿ ‘ಭೀಷ್ಮ ಪ್ರತಿಜ್ಞೆ‘ ತಾಳಮದ್ದಲೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಿನಿ ಹೆಬ್ಬಾರ್ ನೆಲ್ಲಿತಡ್ಕ ಇವರ ಸ್ಪಷ್ಟತೆ ಹಾಗೂ ಮಾಧುರ್ಯದಿಂದ ಕೂಡಿದ ಹಾಡುಗಾರಿಕೆಯಂತೂ ಪ್ರೇಕ್ಷಕರ ಮನ ಸೆಳೆಯಿತು. ಸ್ವತಃ ಇವರ ಪುತ್ರ ವರುಣ ಹೆಬ್ಬಾರ್ ಮದ್ದಳೆಯಲ್ಲಿ ಸಾಥ್ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪಳೆಯುಳಿಕೆ ಭಾಷೆಯೆಂಬ ಹೆಗ್ಗಳಿಗೆಕೆ ಪಾತ್ರರಾಗಿರುವ ಚಿತ್ಪಾವನ ಭಾಷೆಯಲ್ಲಿ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆಯು ಮೇ 26ರಂದು ದರ್ಬೆತಡ್ಕ ಶ್ರೀ ಕಾಲಕಾಮಪರಶುರಾಮ ದೇವಸ್ಥಾನದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶಾಲಿನಿ ಹೆಬ್ಬಾರ್ ನೆಲ್ಲಿತಡ್ಕ ಇವರ ಸ್ಪಷ್ಟತೆ ಹಾಗೂ ಮಾಧುರ್ಯದಿಂದ ಕೂಡಿದ ಹಾಡುಗಾರಿಕೆಯಂತೂ ಪ್ರೇಕ್ಷಕರ ಮನ ಸೆಳೆಯಿತು. ಸ್ವತಃ ಇವರ ಪುತ್ರ ವರುಣ ಹೆಬ್ಬಾರ್ ಮದ್ದಳೆಯಲ್ಲಿ ಸಾಥ್ ನೀಡುತ್ತಾ ತಾಯಿ ಶಾಲಿನಿ ಹೆಬ್ಬಾರ್ ಅವರ ಭಾಗವತಿಕೆಗೆ ಮೆರುಗು ತುಂಬಿದರು. ಚೆಂಡೆಯಲ್ಲಿ ಶ್ರೇಯಸ್ಸ್ ಪಾಳಂದೆ ಅವರ ಕೈಚಳಕ ನಾದವು ಹಿಮ್ಮೆಳಕ್ಕೆ ಗಟ್ಟಿ ದನಿಯು ಬೆರೆಸಿತ್ತು.

ಕಲಾವಿದ ವರದ ಶಂಕರ ದಾಮಲೆ (ಯೋಜನಗಂಧಿ), ಮಹಾದೇವ ಶೆಂಡ್ಯೆ (ದಾಶರಾಜ) ಮುಮ್ಮೇಳದಲ್ಲಿ ಸಾಥ್‌ ನೀಡಿದರು. ಚಿತ್ಪಾವನಿ ಪ್ರಾದೇಶಿಕತೆಯನ್ನು ಅನುಭವ ಜನ್ಯ ನುಡಿಗಟ್ಟುಗಳು ಆಡು ಭಾಷೆಯ ಗಾದೆಗಳ ಮೂಲಕ ಚಿತ್ಪಾವನಿ ಪ್ರಾದೇಶಿಕತೆಯನ್ನು ಭಾಷಾ ಪ್ರೌಡಿಮೆಯನ್ನು ಅನಾವರಣಗೊಳಿಸುವಲ್ಲಿ ತಾಳಮದ್ದಳೆ ಸಾಕ್ಷಿಯಾಯಿತು.

ದಿನಕರ ಗೋಖಲೆ(ಶಂತನು) ಅವರು ಕನ್ನಡ ಭಾಷೆಯ ಅರ್ಥದ ಭಾವಾನುವಾದ ಮಾಡಿದಂತೆ ನಿರರ್ಗಳವಾಗಿ ಚಿತ್ಪಾವನಿಯಲ್ಲಿ ತಮ್ಮ ವಾಕ್ಚಾತುರ್ಯವನ್ನು ಪ್ರಚುರಪಡಿಸಿದರು.

ತೆರೆಮೆರೆಯ ಹವ್ಯಾಸಿ ಕಲಾವಿದ ನಾರಾಯಣ ಫಡಕೆ(ದೇವವ್ರತ) ಅವರ ಅರ್ಥಗಾರಿಕೆಯ ಜ್ಞಾನಸುಧೆಯನ್ನು ಹರಿಸುವಲ್ಲಿ ವೇದಿಕೆ ಸಾಕ್ಷಿಯಾಯಿತು.

ತಾಲೂಕು ಚಿತ್ಪಾವನ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಸ್ವಾಗತಿಸಿದರು. ನಿವೃತ್ತ ಸೈನಿಕ ರಘುನಾಥ ಆಠವಳೆ ಉದ್ಘಾಟಿಸಿದರು. ಉಪಾಧ್ಯಕ್ಷ ವರದಶಂಕರ ದಾಮಲೆ ವಂದಿಸಿದರು. ಗಜಾನನ ಅಭ್ಯಂಕರ್ ನಿರ್ವಹಿಸಿದರು. ಏಕಾಂಗಿಯಾಗಿ 15 ಅಡಿ ಬಾವಿ ತೋಡಿದ ವಿಶ್ವನಾಥ ಶೆಂಡ್ಯೆ ದಂಪತಿಯನ್ನು ಸನ್ಮಾನಿಸಲಾಯಿತು.