ಸಾರಾಂಶ
ಜಿ.ಪಂ. ಮಾಜಿ ಸದಸ್ಯ ಪಿ.ಎಂ ಲತೀಫ್ ಅವರಿಂದ ಸೂರು ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಿತು.
ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತ ಪುತ್ರ ವಿಶ್ವನಾಥ್ ಹಾಗೂ ವಯೋವೃದ್ಧೆ ತಾಯಿ ಬೈರಿ ಅವರಿಗೆ ಜಿ.ಪಂ.ಮಾಜಿ ಸದಸ್ಯ ಪಿ.ಎಂ..ಲತೀಫ್ ಅವರಿಂದ ಸೂರು ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಿತು.
ಬುಧವಾರ ಗರಗಂದೂರು ಮಲಿಕಾರ್ಜುನ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತ ಪುತ್ರನೊಂದಿಗೆ ವಯೋವೃದ್ಧೆ ತಾಯಿ ಬೈರಿಯವರು ಬಿರುಗಾಳಿ ಮಳೆ ಚಳಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಗುಡಿಸಲಿನಲ್ಲಿ ನೆಲೆಸಿರುವ ಬಗ್ಗೆ ಸ್ಥಳೀಯ ನಿವಾಸಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ವರದಿಗೊಂಡಿತ್ತು. ಕೂಡಲೇ ವಿಷಯ ತಿಳಿದ ಜಿ.ಪಂ.ಮಾಜಿ ಸದಸ್ಯ ಸ್ಪಂದಿಸಿ ವೈಯಕ್ತಿಕವಾಗಿ ಸೂರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಮಲಿಕಾರ್ಜುನ ಕಾಲೋನಿಗೆ ತೆರಳಿ ಸೂರು ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿ ಭೂಮಿಪೂಜೆಯನ್ನು ನೆರವೇರಿಸಿ ಬೈರಿ ಅವರೊಂದಿಗೆ ತಾನು ಸಹಾಯಕ್ಕೆ ಇರುವುದಾಗಿ ತಿಳಿಸಿದ್ದಾರೆ.