ಎಡಿಯೂರು- ಮಾಯಸಂದ್ರ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ

| Published : Jul 18 2024, 01:33 AM IST

ಎಡಿಯೂರು- ಮಾಯಸಂದ್ರ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರು ಗಡಿಭಾಗದಿಂದ ತುರುವೇಕೆರೆ ತಾಲೂಕಿನ ಅಂಚೀಹಳ್ಳಿ ಗೇಟ್‌ವರೆಗೆ ಸುಮಾರು ೧೦ ಕೋಟಿ ವೆಚ್ಚದಲ್ಲಿ ರಸ್ತೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಐದಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುರುವೇಕೆರೆ ತಾಲೂಕಿನ ಎಡಿಯೂರು- ಮಾಯಸಂದ್ರ ರಸ್ತೆಯ ದುರಸ್ಥಿಗೆ ಈಗ ಕಾಲ ಕೂಡಿಬಂದಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಮೊದಲ ಹಂತವಾಗಿ ಯಡಿಯೂರು ಗಡಿಭಾಗದಿಂದ ತುರುವೇಕೆರೆ ತಾಲೂಕಿನ ಅಂಚೀಹಳ್ಳಿ ಗೇಟ್‌ವರೆಗೆ ಸುಮಾರು ೧೦ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಗಡಿಭಾಗವಾಗಿರುವ ಅಂಚೀಹಳ್ಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗ ಸುಮಾರು ೫ ಮೀಟರ್ ನಷ್ಟು ರಸ್ತೆ ಇದೆ. ಇದನ್ನು ೭ ಮೀಟರ್‌ವರೆಗೆ ವಿಸ್ತರಿಸಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಅಂಚೀಹಳ್ಳಿ ಗೇಟ್ ನಿಂದ ಮಾಯಸಂದ್ರದ ರಸ್ತೆಯ ಅಂಚಿನವರೆಗೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಸುಮಾರು ೧೦ ಕೋಟಿ ವೆಚ್ಚವಾಗಲಿದೆ ಎಂದರು. ಮೊದಲ ಹಂತದ ಕಾಮಗಾರಿ ಇಂದಿನಿಂದಲೇ ಪ್ರಾರಂಭವಾಗಲಿದೆ. ಇನ್ನು ಮೂರು ತಿಂಗಳೊಳಗೆ ರಸ್ತೆ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ. ಎರಡನೇ ಹಂತದ ರಸ್ತೆ ಕಾಮಗಾರಿ ಇನ್ನು ಹದಿನೈದು ದಿನಗಳಲ್ಲಿ ಪ್ರಾರಂಭವಾಗಲಿದೆ. ಅದೂ ಸಹ ಮೂರ್‍ನಾಲ್ಕು ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಹಲವಾರು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಹಲವಾರು ಅಪಘಾತಗಳೂ ಸಂಭವಿಸಿ ಪ್ರಾಣ ಹಾನಿ ಆಗಿತ್ತು. ಇದನ್ನು ಗಮನಿಸಿ ರಸ್ತೆಯ ಪುನರ್ ನಿರ್ಮಾಣ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಸರ್ಕಾರ ಮೊದಲ ಹಂತದ ರಸ್ತೆ ಕಾಮಗಾರಿಗೆ ೧೦ ಕೋಟಿ ಬಿಡುಗಡೆ ಮಾಡಿದೆ ಎಂದರು. ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಂಜಿನಿಯರ್ ಗಳು ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು. ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಪ್ರಭಾಕರ್, ಸಹಾಯಕ ಇಂಜಿನಿಯರ್‌ಗಳಾದ ಇಮ್ರಾನ್, ರಝೀಕಾ ನಯೀಮ್, ಭೈತರಹೊಸಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಂಜಮ್ಮ, ಉಪಾಧ್ಯಕ್ಷೆ ಶಾರದಮ್ಮ ರಾಜು, ಗುತ್ತಿಗೆದಾರರಾದ ತುಮಕೂರಿನ ಅಶೋಕ್, ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಥರಮನಕೋಟೆ ರಾಜು, ಭೈತರಹೊಸಳ್ಳಿ ರಾಮಚಂದ್ರು, ಮೂಡಲಗಿರಿಗೌಡ, ಮುತ್ಸಂದ್ರ ಜಗದೀಶ್, ಅಂಚಿಹಳ್ಳಿ ಕುಮಾರ್, ಧನಂಜಯ್, ಅಶೋಕ್, ಬಾಲಕೃಷ್ಣ, ರಮೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.