ಸಾರಾಂಶ
ಇಂದು ಜಗತ್ತಿನಲ್ಲಿ ಎಷ್ಟೇ ಪ್ರಕಾರದ ವಿಶ್ವವಿದ್ಯಾಲಯಗಳಿದ್ದರು, ದ್ವೇಶ , ಕ್ರೌರ್ಯ, ಅಸೂಯೆ, ಹಿಂಸೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ನಿರ್ಮೂಲ ಮಾಡುವ ಶಿಕ್ಷಣ ನಮ್ಮಲ್ಲಿ ಸಿಗುತ್ತಿಲ್ಲ,
ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ರಾಜಯೋಗ ಭವನದ ಭೂಮಿ ಪೂಜೆಯನ್ನು ಬುಧವಾರ ಮೈಸೂರು ಉಪ ವಿಭಾಗದ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮಿಜಿ ನೆರವೇರಿಸಿದರು.ನಂತರ ಅವರು ಮಾತನಾಡಿ, ಇಂದು ಜಗತ್ತಿನಲ್ಲಿ ಎಷ್ಟೇ ಪ್ರಕಾರದ ವಿಶ್ವವಿದ್ಯಾಲಯಗಳಿದ್ದರು, ದ್ವೇಶ , ಕ್ರೌರ್ಯ, ಅಸೂಯೆ, ಹಿಂಸೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ನಿರ್ಮೂಲ ಮಾಡುವ ಶಿಕ್ಷಣ ನಮ್ಮಲ್ಲಿ ಸಿಗುತ್ತಿಲ್ಲ, ಇಂತಹ ನಿಟ್ಟಿನಲ್ಲಿ ಈಶ್ವರಿ ವಿಶ್ವವಿದ್ಯಾಲಯ ಕೆಲಸ ನಿರ್ವಹಿಸುತ್ತಿದ್ದು, ಜನತೆಗೆ ಮಾನವೀಯ ಮೌಲ್ಯವನ್ನು ಜಾಗೃತಗೊಳಿಸಿ ಮಾನವನನ್ನು ಮಹಾ ಮಾನವನನ್ನಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಈ ಭವನದ ಕಾರ್ಯ ಆರು ತಿಂಗಳಲ್ಲಿ ಮುಗಿಯಲಿದ್ದು, ಜನತೆಯ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.ಗ್ರಾಪಂ ಸದಸ್ಯ ವೈ.ಎಸ್. ರಾಮಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಪ್ರಭಾಮಣಿಜೀ, ಬಿ.ಸಿ.ಪಾರ್ಥಸಾರಥಿ, ಮಹದೇವಸ್ವಾಮಿ, ಶೋಭ ಸತೀಶ್, ದಾನೇಶ್ವರಿಜೀ, ಬಿ.ಕೆ. ರಂಗನಾಥ್, ಬಿ.ಕೆ. ರಾಮಚಂದ್ರರಾವ್, ಬಿ.ಕೆ. ಕೃಷ್ಣಮೂರ್ತಿ ಇದ್ದರು.