ಪ್ರವಾಹ ಪೀಡಿತ ಚೆರಿಯಪರಂಬುಗೆ ಭೋಸರಾಜು, ಪೊನ್ನಣ್ಣ ಭೇಟಿ

| Published : Jul 21 2024, 01:19 AM IST

ಪ್ರವಾಹ ಪೀಡಿತ ಚೆರಿಯಪರಂಬುಗೆ ಭೋಸರಾಜು, ಪೊನ್ನಣ್ಣ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿಯ ಪ್ರವಾಹ ಪೀಡಿತ ಪ್ರದೇಶ ಚೆರಿಯಪಂಬುವಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಎಸ್‌. ಭೋಸರಾಜು ಭೇಟಿ ನೀಡಿದರು. ಸಮಸ್ಯೆ ಆಲಿಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ನಾಪೋಕ್ಲು: ಇಲ್ಲಿಯ ಕಾವೇರಿ ನದಿ ತೀರದ ಪ್ರವಾಹ ಪೀಡಿತ ಪ್ರದೇಶ ಚೆರಿಯಪರಂಬುವಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ಅವರು ಶನಿವಾರ ಅಧಿಕಾರಿಗಳ ಜೊತೆ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭ ಸ್ಥಳೀಯ ಪ್ರಮುಖರು ಮಾತನಾಡಿ ಇಲ್ಲಿ ಪ್ರತಿ ಬಾರಿ ಪ್ರವಾಹದ ಭೀತಿ ಎದುರಿಸುತ್ತಿದ್ದು, ಜೀವನ ಸಾಗಿಸುವುದು ಕಷ್ಟಕರವಾಗಿದೆ. ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಜೊತೆಗೆ ರಸ್ತೆಯೂ ದುಸ್ಥಿತಿಯಲ್ಲಿದ್ದು

ಸೂಕ್ತ ಪರಿಹಾರ ಒದಗಿಸುವಂತೆ ಅಳಲು ತೋಡಿಕೊಂಡರು.

ಸಮಸ್ಯೆಯನ್ನು ಆಲಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಕ್ರಿಯಾಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಿರುವುದರಿಂದ ನಾನು ಸರಕಾರದೊಂದಿಗೆ ವ್ಯವಹರಿಸಿ ಶಾಶ್ವತ ಪರಿಹಾರ ಮಾಡಿಕೊಡುವುದಾಗಿ ಹೇಳಿದರು. ಶಾಸಕರಾದ ಎ ಎಸ್ ಪೊನ್ನಣ್ಣ ಪ್ರತಿಕ್ರಿಯಿಸಿ ಮಾತನಾಡಿ ಹಲವಾರು ವರ್ಷಗಳಿಂದ ಇಲ್ಲಿ ಪ್ರವಾಹದಿಂದಾಗಿ ರಸ್ತೆ ಸಂಪರ್ಕದ ಸಮಸ್ಯೆ ಇದೆ. ಕಳೆದ ಸಾರಿ ವೀಕ್ಷಣೆ ಮಾಡಿ ರಸ್ತೆ ಎತ್ತರಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 1.30. ಕೋಟಿ ರೂಗಳ ಕ್ರಿಯಾಯೋಜನೆಯನ್ನು ಮಾಡಿ ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದ ಅವರು ಈ ವರ್ಷ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆಗಿ ಶಾಶ್ವತ ಪರಿಹಾರವಾಗಲಿದೆ ಎಂದುರು.

ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, SP ಕೆ ರಾಮರಾಜನ್, ಜಿಲ್ಲಾ ಪಂಚಾಯತಿ ಸಿಇಒ ಆನಂದ್, ಜಿಲ್ಲಾ ಪಂಚಾಯಿತಿ ಕಾರ್ಯ ಪಾಲಕ ಅಭಿಯಂತರರು ರಘು, ಅಶೋಕ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಕಂದಾಯ ಪರೀಕ್ಷಕ ರವಿಕುಮಾರ್ ಸಿಬ್ಬಂದಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ನೆರವಂಡ ಉಮೇಶ್, ಎಂ ಯಚ್. ಅಬ್ದುಲ್ ರೆಹಮಾನ್ ,ಬಾಚಮಂಡಲ ಲವ ಚಿನ್ನಪ್ಪ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಉಪ ಅಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಸದಸ್ಯರಾದ ಮಾಚೆಟ್ಟಿರ ಕುಸು ಕುಶಾಲಪ್ಪ ಕುಲ್ಲೇಟಿರ ಅರುಣ್ ಬೇಬ, ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೋoದಕ್ಕಿ, ಮಿರ್ಷದ್, ಸಿರಾಜುದ್ದೀನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.