ಕನ್ನಡಪ್ರಭ ವಾರ್ತೆ ಪಾವಗಡ
ಸ್ಥಳೀಯ ಶಾಸಕ ಎಚ್.ವಿ. ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭೋವಿ ಸಮಾಜದ ಮುಖಂಡರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ವೇಳೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸುಜಿತ್ ರಾಜ್, ಸಮಾಜ ಹಾಗೂ ಪಕ್ಷ ಸಂಘಟನೆಯಲ್ಲಿ ಉತ್ತಮ ಕಾರ್ಯ ಮಾಡಿರುವ ವೆಂಕಟೇಶ್ ಅವರು ತಾಲೂಕಿನಲ್ಲಿ ಪಕ್ಷ ಸದೃಢವಾಗುವಂತೆ ಮಾಡಿದ್ದಾರೆ. ಈ ಹಿಂದೆ ಮಾಜಿ ಸಚಿವ ದಿ. ವೆಂಕಟರಮಣಪ್ಪ ಸಹ 50 ವರ್ಷಗಳ ಕಾಲ ಪಕ್ಷದಲ್ಲಿದ್ದು ಕೆಲಸ ಮಾಡಿದ್ದಾರೆ. ಅವರ ಮಗನಾಗಿರುವ ವೆಂಕಟೇಶ್ ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಸಚಿವ ಸ್ಥಾನ ನೀಡಿದಲ್ಲಿ ಸಮಾಜಕ್ಕೂ ಅನುಕೂಲವಾಗಲಿದೆ. ಈಗಾಗಲೇ ಭೋವಿ ಸಮಾಜದ ಸಾಕಷ್ಟು ಜನ ಕಾಂಗ್ರೆಸ್ ಜೊತೆಗಿದ್ದು ಮುಂದಿನ ದಿನಗಳಲ್ಲಿ ಸಹ ಹೆಚ್ಚಿನ ಪ್ರಾಶಸ್ಯ ನೀಡುವ ಮೂಲಕ ಯುವ ಹಾಗೂ ಭೋವಿ ಸಮಾಜದ ಕೋಟಾದ ಅಡಿ,ರಾಜ್ಯ ಸಚಿವ ಸಂಪುಟದಲ್ಲಿ ಪಾವಗಡದ ಶಾಸಕ ಎಚ್.ವಿ.ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಮಾತನಾಡಿ, ರೈಲ್ವೆ ಕಾಮಗಾರಿ , ಕುಡಿಯುವ ನೀರಿಗೆ ತುಂಗಭದ್ರಾ ಯೋಜನೆ, ಭದ್ರಾ ಮೇಲ್ದಂಡೆ ಎತ್ತಿನ ಹೊಳೆ ಯೋಜನೆಯ ಪ್ರಗತಿ ಸೇರಿದಂತೆ ರಸ್ತೆ ಶಾಲಾ ಕಾಲೇಜು ಇತರೆ ಗ್ರಾಮೀಣ ಪ್ರಗತಿಗೆ ವಿಶೇಷ ಒತ್ತು ನೀಡಿ ತಂದೆ ಪುತ್ರ ಕೆಲಸ ಮಾಡಿದ್ದಾರೆ.ಈ ಹಿನ್ನಲೆಯಲ್ಲಿ ಇಲ್ಲಿನ ಶಾಸಕ ಎಚ್.ವಿ.ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.ತಾಲೂಕು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಭೋವಿ ಅಭವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬೊಟ್ಟು ವೆಂಕಟೇಶಲು ಇಂಟೂರಾಯನಹಳ್ಳಿ ಮುತ್ಯಾಲಪ್ಪ, ಟಿ.ಹನುಮಂತರಾಯಪ್ಪ, ತಾಲೂಕು ಭೋವಿ ಸಂಘದ ಅಧ್ಯಕ್ಷ ಬಂಗಾರಪ್ಪ, ವಡ್ಡರಹಟ್ಟಿ ದಾಸಪ್ಪ ಭೋವಿ, ತಿಮ್ಮಪ್ಪ, ರಾಮಾಂಜಿನಪ್ಪ, ನಾಗೇಶ್, ಸುಬ್ಬರಾಯಪ್ಪ, ವೆಂಕಟಸ್ವಾಮಿ, ಚಂದ್ರು, ಕೃಷ್ಣಪ್ಪ, ಶ್ರೀನಪ್ಪ, ಆದಿನಾರಾಯಣಪ್ಪ, ಕದಿರೇಹಳ್ಳಿ ಕೆಂಚಪ್ಪ,ಕೊತ್ತೂರು ಶ್ರೀನಿವಾಸ್,ಭೂಪೂರ್ ಅಶ್ವತ್ಥಪ್ಪ,ಪೊತಗಾನಹಳ್ಳಿ ಪೂಜಾರ್ ತಿಮ್ಮಪ್ಪ,ಜಯರಾಮ್ ಗುತ್ತಿಗೆದಾರ ಗಂಗಪ್ಪ ಹಾಗೂ ನಾಗಲಾಪುರ ಕುಮಾರ್ ಇತರೆ ಅನೇಕ ಮಂದಿ ಭೋವಿ ಸಮುದಾಯದ ಹಿರಿಯ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.