ಸಾರಾಂಶ
ಗೌರಿಬಿದನೂರು: ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸೂಚಿಸಿದರು. ತಾಲೂಕಿನ ತೊಂಡೇಬಾವಿ, ಹೊಸೂರು, ಡಿ.ಪಾಳ್ಯ, ನಗರಗೆರೆ ಹೋಬಳಿ ವ್ಯಾಪ್ತಿಯ ಬೇವಿನಹಳ್ಳಿ, ಗೆದರೆ, ಬೈಚಾಪುರ, ನಕ್ಕಲಹಳ್ಳಿ, ಮುದಲೋಡು, ವಾಟದಹೊಸಹಳ್ಳಿ ಜಿ.ಕೊತ್ತೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ‘ಪ್ರಗತಿ ಕಾಲೋನಿ ಅಭಿವೃದ್ಧಿ’ ಯೋಜನೆಯ ಅನುದಾನಗಳೊಂದಿಗೆ ಒಟ್ಟು ಮೊತ್ತ 6 ಕೋಟಿ 10 ಲಕ್ಷಗಳ ವೆಚ್ಚಗಳಲ್ಲಿ ಸುಸಜ್ಜಿತ ಸಿ.ಸಿ.ರಸ್ತೆಗಳು, ಚರಂಡಿಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಹಂತ ಹಂತವಾಗಿ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಸರ್ಕಾರದಿಂದ ಅನುದಾನ ತಂದು ಮುಂದಿನ ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು. ಉತ್ತಮ ಗುಣಮಟ್ಟದಲ್ಲಿ ನಿಗದಿತ ಸಮಯಕ್ಕೆ ಕಾಮಗಾರಿಗಳನ್ನು ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಆಯಾ ಹೋಬಳಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು, ಸದಸ್ಯರು, ಪ್ರಮುಖ ಮುಖಂಡರು, ಚುನಾಯಿತ ಜನ ಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಗುತ್ತಿಗೆದಾರರು, ಕಾರ್ಯಕರ್ತರು ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.