ಸಾರಾಂಶ
Bhumi Puja for the new building of Aikuru Gram Panchayat
ಕನ್ನಡಪ್ರಭ ವಾರ್ತೆ ವಡಗೇರಾ
ತಾಲೂಕಿನ ಐಕೂರ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡಕ್ಕೆ ಅಧ್ಯಕ್ಷೆ ದೇವಕಿ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 20 ಲಕ್ಷ ರು. ಗಳು ಅನುದಾನದ ಬಿಡುಗಡೆ ಆಗಿದ್ದು, ಈ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಗ್ರಾಮವು ಗ್ರಾಮ ಪಂಚಾಯ್ತಿ ಕೇಂದ್ರವಾಗಿ ಸುಮಾರು 8 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ತುಂಬಾ ತೊಂದರೆಯಾಗಿತ್ತು. ಈಗ ಗ್ರಾಮಸ್ಥರು ಮತ್ತು ಮೇಲಧಿಕಾರಿಗಳ ಸಹಕಾರದಿಂದ ನಮ್ಮ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ್ದು, ನನಗೆ ತುಂಬಾ ಸಂತೋಷ ತಂದಿದೆ. ಪಂಚಾಯ್ತಿ ಕಟ್ಟಡವನ್ನು ಅಚ್ಚುಕಟ್ಟಾಗಿ ಉತ್ತಮ ಗುಣಮಟ್ಟದಲ್ಲಿ ಮತ್ತು ಆದಷ್ಟು ಬೇಗನೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ, ಹಸನಾಪುರ ಗ್ರಾಮ ಪಂಚಾಯ್ತಿ ಸದಸ್ಯರಾದ ಮರೆಪ್ಪ ನಸಲಾಯಿ, ಚಂದ್ರಾಯ ಊಳ್ಳೆಸೂಗುರು, ಸಂಗನಗೌಡ ಮಾಲಿ ಪಾಟೀಲ್, ಯಂಕಣ್ಣ ಠಾಣಗುಂದಿ, ಅಮೋಘ ಬಾಗ್ಲಿ, ಗ್ರಾಮದ ಮುಖಂಡರಾದ ತಿಪ್ಪಣ್ಣ ತಿಮ್ಮಣ್ಣಗೌಡ್ರು, ವೆಂಕಟರಾಯಗೌಡ, ಮಲಗಣ್ಣ, ಮಾನಸಪ್ಪ ಮೆದರಗಾಳ, ಬಸವರಾಜ್ ದಿವಳಗುಡ್ಡ, ಪರಶುರಾಮ್, ಪ್ರಭುಗೌಡ, ರಾಯಗೌಡ ಬಿರಾದಾರ್, ದೇವೇಂದ್ರಪ್ಪ ಕವಲ್ದಾರ್ ಸೇರಿದಂತೆ ಇತರರಿದ್ದರು.
----12ವೈಡಿಆರ್5: ವಡಗೇರಾ ತಾಲೂಕಿನ ಐಕೂರ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡಕ್ಕೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ದೇವಕಿ ಭೂಮಿ ಪೂಜೆ ನೆರವೇರಿಸಿದರು.