ಸಾರಾಂಶ
ಸಿದ್ದಾಪುರ: ಕನ್ನಡದ ಕುರಿತಾದ ನಮ್ಮ ಅಭಿಮಾನ ಇನ್ನೂ ಇಮ್ಮಡಿಗೊಳ್ಳಬೇಕು. ಭುವನೇಶ್ವರಿ ದೇವಿಯ ಸನ್ನಿಧಿ ಭುವನಗಿರಿ ಮತ್ತು ಕದಂಬರ ರಾಜಧಾನಿ ಬನವಾಸಿ ಇವೆರಡೂ ಕನ್ನಡಿಗರ ಪಾಲಿಗೆ ಪವಿತ್ರ ಕ್ಷೇತ್ರಗಳು ಎಂದು ಮಡಿಕೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಧೀಶೆ ಸಿ. ರೇಣುಕಾಂಬ ತಿಳಿಸಿದರು.ಶನಿವಾರ ತಾಲೂಕಿನ ಭುವನಾಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕದಂಬ ಸೈನ್ಯದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡಕ್ಕೆ ಪುರಾತನವಾದ ಇತಿಹಾಸವಿದೆ. ಆದರೆ ಇಂದು ಯುವ ಪೀಳಿಗೆಗೆ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ. ನಾವು ಹೆಚ್ಚು ಕನ್ನಡವನ್ನು ಬಳಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ ಕನ್ನಡವನ್ನು ನೀಡಲು ಸಾಧ್ಯ. ವೈಯಕ್ತಿಕವಾಗಿ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಾ ಇಂದಿಗೂ ನ್ಯಾಯಾಲಯದಲ್ಲಿ ಕನ್ನಡದಲ್ಲೇ ಆದೇಶ ನೀಡುತ್ತಿದ್ದೇನೆ ಎಂದರು. ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಪರಂಪರೆಯಲ್ಲಿ ಮೊದಲ ಸ್ಥಾನದಲ್ಲಿರುವ ಭುವನಗಿರಿ ಕನ್ನಡಿಗರ ಹೆಮ್ಮೆಯ ಮತ್ತು ಪೂಜ್ಯ ಕ್ಷೇತ್ರ. ಕದಂಬ ಸೈನ್ಯ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತ ಬಂದಿದ್ದು, ದೇವಾಲಯ ಆಡಳಿತ ಮಂಡಳಿ, ಸಾರ್ವಜನಿಕರು, ಪತ್ರಕರ್ತರು ಸಹಕಾರ ನೀಡುತ್ತಿದ್ದಾರೆ ಎಂದರು. ಅತಿಥಿಗಳಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ್, ನರಗುಂದದ ವಕೀಲ ರಮೇಶ ನಾಯ್ಕರ್, ಬಾದಾಮಿ ರೈತ ಸೇನಾ ತಾಲೂಕು ಅಧ್ಯಕ್ಷ ಅಶೋಕ ಸಾತನ್ನವರ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು, ಬರಹಗಾರ್ತಿ ಸುಧಾರಾಣಿ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ಮಾಲತಿ ಭಟ್ ಅವರಿಗೆ ವೀರರಾಣಿ ಚೆನ್ನಭೈರವಾದೇವಿ ಪ್ರಶಸ್ತಿ, ಯಕ್ಷಗಾನ ಕಲಾವಿದ ವಸಂತ ಹೆಗಡೆ, ಪ್ರಾಚಾರ್ಯ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಪ್ರೊ. ಎಂ.ಕೆ. ನಾಯ್ಕ ಹೊಸಳ್ಳಿ, ಜಾನಪದ ಗಾಯಕ ಗೋಪಾಲ ಕಾನಳ್ಳಿ, ರಂಗಭೂಮಿ ನಟ, ನಿರ್ದೇಶಕ ಗಣಪತಿ ಹೆಗಡೆ ಹಿತ್ಲಕೈ, ವಿದ್ವಾಂಸ ಜಯರಾಮ ಭಟ್ ಗುಂಜಗೋಡ ಅವರಿಗೆ ಕದಂಬ ರತ್ನ ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ಹಲವು ಸಾಧಕರಿಗೆ ಕಾಕುತ್ಸವರ್ಮ ಪ್ರಶಸ್ತಿ, ವೀರರಾಣಿ ಚೆನ್ನಭೈರವಾದೇವಿ ಪ್ರಶಸ್ತಿ ಮತ್ತು ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಉದಯ ಕುಮಾರ ಕಾನಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಪ್ಪ ಅರೇರ ಸವಣೂರು ನಿರೂಪಿಸಿದರು.
ಜೇನುಹುಳು ದಾಳಿ: 6 ಜನರಿಗೆ ಗಾಯಮುಂಡಗೋಡ: ಗದ್ದೆ ಕೆಲಸಕ್ಕೆ ಹೋಗುತ್ತಿದ್ದವರ ಮೇಲೆ ಜೇನುಹುಳು ದಾಳಿ ನಡೆಸಿದ ಪರಿಣಾಮ ಮಹಿಳೆ ಸೇರಿದಂತೆ ಆರು ಜನರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಇಂದೂರ ಬಳಿ ಶನಿವಾರ ನಡೆದಿದೆ.ಇಂದೂರ ಗ್ರಾಮದ ಪುಷ್ಪಾವತಿ ನಾಗಪ್ಪ ಸತ್ತೂರ, ಇಮ್ರಾನಖಾನ ಕರೀಮಸಾಬ್ ಬಾಳೆಕಾಯಿ, ಗೌಸಮೋದ್ದಿನ ಹಜರತಲಿ ಬೆಂಡಿಗೇರಿ, ಪದ್ಮಶ್ರೀ ನಾಗಪ್ಪ ಸತ್ತೂರ, ಕಿರಣ ನಾಗಪ್ಪ ಸತ್ತೂರ, ಅಭಿಷೇಕ ನಿಂಗಪ್ಪ ಗೊಳ್ಳೇದ ಎಂಬವರು ಜೇನುಹುಳು ದಾಳಿಯಿಂದ ಗಾಯಗೊಂಡಿದ್ದಾರೆ. ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದುಕೊಂಡಿದ್ದಾರೆ.