ಭುವನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಗೌಡ

| Published : Jul 17 2025, 12:40 AM IST

ಸಾರಾಂಶ

ಸೋಮೇಗೌಡ ಹಾಗೂ ಆನಂದ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಓ ಜಿತೇಂದ್ರ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಭುವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್. ಸೋಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಆನಂದ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸೋಮೇಗೌಡ ಹಾಗೂ ಆನಂದ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಓ ಜಿತೇಂದ್ರ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಂಘದ ನಿರ್ದೇಶಕರಾದ ಹಾಗೂ ಮಾಜಿ ಅಧ್ಯಕ್ಷ ಸೋಮಶೇಖರ್, ಹರೀಶ, ಮಾಜಿ ಉಪಾಧ್ಯಕ್ಷ ಮಹೇಶ, ನಿರ್ದೇಶಕರಾದ ಲೋಹಿತ್, ನವೀನ್, ಹಂಸರಾಜ, ಸುಮಿತ್ರ, ಹೇಮಾವತಿ, ಶಂಕರ್, ಬೋರಪ್ಪ, ಬಿ.ಎಸ್. ಸೋಮಶೇಖರ್, ಗ್ರಾಮದ ಮುಖಂಡರಾದ ನಿವೃತ ಶಿಕ್ಷಕ ಸಣ್ಣಸ್ವಾಮಿ ಗೌಡ, ಕುಮಾರ, ಜಯಣ್ಣ, ರಾಜೇಗೌಡ, ಬಿ.ಎನ್. ಗಿರೀಶ್, ಸಿಇಓ ಸತೀಶ್, ನೌಕರರಾದ ರಾಜೇಶ್ ಇದ್ದರು.