ಸಾರಾಂಶ
ಸುದೀರ್ಘ ಕಾಲ ಭೈರಪ್ಪನವರ ಓದುಗರ ಮನಸ್ಸನ್ನು ಕಾದಂಬರಿಗಳು ಆಕರ್ಷಣೆಗೊಳಿಸಿವೆ. ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ
ಕುಷ್ಟಗಿ: ಸಾಹಿತಿ ಎಸ್.ಎಲ್. ಭೈರಪ್ಪ ಅವರು ಕಾದಂಬರಿಗಳನ್ನು ರಚಿಸುವ ಮೂಲಕ ಕನ್ನಡ ಓದುಗರ ಸಂಖ್ಯೆಯನ್ನು ಹೆಚ್ಚಿಸಿದವರು ಎಂದು ಕಸಾಪ ಅಧ್ಯಕ್ಷ ನಿಂಗಪ್ಪ ಸಜ್ಜನ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭೈರಪ್ಪ ಅವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ನಡೆಸುತ್ತಿದ್ದ ಪೂರ್ವ ತಯಾರಿ, ವ್ಯಾಪಕ ಅಧ್ಯಯನ, ಸಂಚಾರ ಗಮನಾರ್ಹವಾದುದು. ಸುದೀರ್ಘ ಕಾಲ ಭೈರಪ್ಪನವರ ಓದುಗರ ಮನಸ್ಸನ್ನು ಕಾದಂಬರಿಗಳು ಆಕರ್ಷಣೆಗೊಳಿಸಿವೆ. ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ ಎಂದರು.ಎಪಿಎಂಸಿ ಮಾಜಿ ನಿರ್ದೇಶಕ ಹನುಮಂತರಾವ್ ದೇಸಾಯಿ ಮಾತನಾಡಿ, ಸಾಹಿತಿಗಳಿಗೆ ಓದುಗರೇ ಪ್ರಶಸ್ತಿ ಮತ್ತು ಪುರಸ್ಕಾರಗಳು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗಳನ್ನು ಎಸ್.ಎಲ್. ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಳಿದರು. ಬದುಕು ಮತ್ತು ಅನುಭವಗಳಿಗೆ ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಕಾದಂಬರಿ ಪ್ರಕಾರವನ್ನು ಮಾಧ್ಯಮವಾಗಿಸಿಕೊಂಡರು. ಯಾವ ಸಾಹಿತ್ಯ ಪಂಥಗಳ ಗುಂಪಿಗೂ ಒಳಗಾಗದೆ ತಮ್ಮದೇ ವ್ಯಕ್ತಿತ್ವದ ಛಾಪು ಮೂಡಿಸಿದರು ಎಂದರು.
ಈ ವೇಳೆ ಒಂದು ನಿಮಿಷ ಮೌನಾಚರಣೆ ಮೂಲಕ ನುಡಿನಮನ ಸಲ್ಲಿಸಲಾಯಿತು. ಬಸನಗೌಡ ಪೊಲೀಸ್‌ಪಾಟೀಲ್, ದೊಡ್ಡನಗೌಡ ಮಾಟೂರು, ನಾರಾಯಣಪ್ಪ ಮೆದಿಕೇರಿ, ಪ್ರಭುದೇವ ಕಲ್ಯಾಣಮಠ, ಕೆ.ವೈ. ಕಂದಕೂರು, ಶ್ರೀನಿವಾಸ ಕಂಟ್ಲಿ, ಅಯ್ಯಪ್ಪ ಗೋತಗಿ, ಕಲ್ಲಯ್ಯಸ್ಯಾಮಿ ಸರಗಣಾಚಾರಿ ಇದ್ದರು.