ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಭೂಮಿ ಕೊಟ್ಟಿರುವ ಕೆಂಪಯ್ಯನಪಾಳ್ಯ ಗ್ರಾಮದ ಏಳು ರೈತರಿಗೆ ಶನಿವಾರ ಸಾಂಕೇತಿಕವಾಗಿ ಭೂ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

 ಬೆಂಗಳೂರು : ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಭೂಮಿ ಕೊಟ್ಟಿರುವ ಕೆಂಪಯ್ಯನಪಾಳ್ಯ ಗ್ರಾಮದ ಏಳು ರೈತರಿಗೆ ಶನಿವಾರ ಸಾಂಕೇತಿಕವಾಗಿ ಭೂ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

5 ಲಕ್ಷ ಇಡಿಗಂಟು

ಯೋಜನೆ ವ್ಯಾಪ್ತಿಯಲ್ಲಿ ಕೇವಲ ಒಂದು ಗುಂಟೆ ಜಮೀನು ಇರುವ ಮಾಲೀಕರಿಗೆ ವಿಶೇಷ ಪರಿಹಾರ. ಒಂದು ಗುಂಟೆ ಜಮೀನು ಕಳೆದುಕೊಳ್ಳುವ ರೈತರಿಗೆ 5 ಲಕ್ಷ ಇಡಿಗಂಟು ನೀಡಲು ಜಿಬಿಡಿಎ ಮುಂದಾಗಿದೆ. 

ಮೊದಲ ಹಂತದ ಭೂ ಪರಿಹಾರದ ಚೆಕ್

 ಈಗಾಗಲೇ 9 ಗ್ರಾಮಗಳ ಪೈಕಿ 3 ಗ್ರಾಮಗಳ 519 ಎಕರೆಗೆ ಅಂತಿಮ ಅಧಿಸೂಚನೆ ಮಾಡಲಾಗಿತ್ತು. ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ನೋಟಿಸ್ ಪಡೆದು ಒಪ್ಪಿಗೆ ನೀಡಿರುವ ರೈತರಿಗೆ ಶನಿವಾರ ಮೊದಲ ಹಂತದ ಭೂ ಪರಿಹಾರದ ಚೆಕ್ ವಿರತಣೆ ಮಾಡಲಾಗಿದೆ.

1 ತೆಂಗಿನ ಮರಕ್ಕೆ 40,446, 1 ಮಾವಿನ ಗಿಡಕ್ಕೆ 62000 ರು.: 

1 ಎಕರೆಗೆ ಬರೋಬ್ಬರಿ 2 ಕೋಟಿ 30 ಲಕ್ಷದ 7 ಸಾವಿರ ರು. ಪರಿಹಾರ ನೀಡಲಾಗಿದೆ. ಜೊತೆಗೆ ಜಮೀನಿನಲ್ಲಿ ಬೆಳೆದ ಬೆಳೆಗೂ ಪರಿಹಾರದ ಹಣವನ್ನು ನಿಗದಿಪಡಿಸಲಾಗಿದೆ. 1 ತೆಂಗಿನ‌ಮರಕ್ಕೆ 40,446, ರು., ಮಾವಿನ ಗಿಡ 62 ಸಾವಿರ ರು., ಅಡಿಕೆ ಮರಕ್ಕೆ 7,440 ರು., ಬಾಳೆ ಎಕರೆಗೆ 10.86 ಲಕ್ಷ ರು., ರೇಷ್ಮೆಗೆ ಪ್ರತಿ ಎಕರೆಗೆ 14 ಲಕ್ಷ ರು., ಹಲಸು ಎಕರೆಗೆ 42, 750 ರು. ಹುಣಸೆ ಎಕರೆಗೆ 53,310 ರು., ಸೀಬೆ ಎಕರೆಗೆ 3940 ರು., ಸಪೋಟ ಎಕರೆಗೆ 43,166 ರು.ನಂತೆ ಹಣ ನಿಗದಿ ಮಾಡಲಾಗಿದೆ.