ಸಾರಾಂಶ
ನಾಪೋಕ್ಲು ಗ್ರಾಮ ಪಂಚಾಯಿತಿಯ 2024 -25ರ ಸಾಲಿನ ಹರಾಜು ಪ್ರಕ್ರಿಯೆ ಬಿಡ್ದುದಾರರ ಅಸಮಾಧಾನ, ಗೊಂದಲದ ನಡುವೆ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಗ್ರಾಮ ಪಂಚಾಯಿತಿಯ 2024 -25ರ ಸಾಲಿನ ಹರಾಜು ಪ್ರಕ್ರಿಯೆ ಬಿಡ್ದುದಾರರ ಅಸಮಾಧಾನ, ಗೊಂದಲದ ನಡುವೆ ನಡೆಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾರುಕಟ್ಟೆ ಸುಂಕ ಎತ್ತಾವಳಿ 15,15,120 ರು. ಗೆ ಹರಾಜು ಹಾಗೂ ವಾಹನ ಸುಂಕ ಎತ್ತಾವಳಿಗೆ ಹರಾಜು ಪ್ರಕ್ರಿಯೆ ನಡೆ 61,100 ರು.ಗೆ ಹರಾಜು ಮಾಡಲಾಯಿತು. ಕುರಿ ಮಾಂಸ ಮಾರಾಟದ ಎರಡು ಲೈಸೆನ್ಸ್‌ಗಳಲ್ಲಿ ಆರು ಜನ ಬಿಡ್ಡುದಾರರು ಭಾಗವಹಿಸಿದ್ದು, 7 ಲಕ್ಷ ರು.ಗೆ ಮಾರಾಟವಾದರೆ, ಎರಡನೇ ಲೈಸನ್ಸ್ 8 ಲಕ್ಷ ರು.ಗೆ ಹರಾಜು ಮಾಡಲಾಯಿತು. ಕೋಳಿ ಮಾಂಸ ಮಳಿಗೆಗಳಿಗೆ ಒಂದಕ್ಕೆ 66,000 ರು. ನಂತೆ 14 ಮಳಿಗೆಗೆ ಲೈಸನ್ಸ್ ನೀಡಲಾಯಿತು.
ಹಸಿ ಮೀನು ಮಾರಾಟ ಹಾಗೂ ಹಂದಿ ಮಾಂಸ ಮಾರಾಟ ಎತ್ತಾವಳಿಗೆ ಬಿಡ್ಡುದಾರರು ಪಾಲ್ಗೊಳ್ಳದೆ ಇರುವುದರಿಂದ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಲಾಯಿತು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಹರಾಜು ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಶಿ, ಕೆ.ಎ. ಇಸ್ಮಾಯಿಲ್, ಟಿ.ಎ.ಮೊಹಮ್ಮದ್, ಕನ್ನಂಬೀರ ಸುದಿ ತಿಮ್ಮಯ್ಯ, ಬಿ.ಎಂ.ಪ್ರತೀಪ, ಕೋಟೆರ ನೀಲಮ್ಮ, ಕೆ.ವೈ. ಅಶ್ರಫ್, ಶಿವಚಾಳಿಯಂಡ ಜಗದೀಶ್, ಬಾಳೆಯಡ ಪುಷ್ಪ, ಯಶೋದಾ, ಸಾಬ ತಿಮ್ಮಯ್ಯ, ಎಚ್ಎಸ್ ಪಾರ್ವತಿ ಉಪಸ್ಥಿತರಿದ್ದರು.