ಇಂದು ಬರಗೂರು ಬೆಟ್ಟದಲ್ಲಿ ದೊಡ್ಡ ಕೊಂಡೋತ್ಸವ

| Published : Jun 30 2025, 12:34 AM IST

ಸಾರಾಂಶ

ತಮಿಳುನಾಡಿನ ಬರಗೂರು ಬೆಟ್ಟದಲ್ಲಿ ನಡೆಯುವ ದೊಡ್ಡ ಕೊಂಡೋತ್ಸವಕ್ಕೆ ಮಲೆ ಮಾದೇಶ್ವರ ಬೆಟ್ಟದಿಂದ ತೆರಳಿದ ತಂಡಕ್ಕೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಚಾಲನೆ ನೀಡಿದರು

ಕನ್ನಡಪ್ರಭ ವಾರ್ತೆ, ಹನೂರು

ತಮಿಳುನಾಡಿನ ಬರಗೂರು ಬೆಟ್ಟದಲ್ಲಿ ನಡೆಯುವ ದೊಡ್ಡ ಕೊಂಡೋತ್ಸವಕ್ಕೆ ಮಲೆ ಮಾದೇಶ್ವರ ಬೆಟ್ಟದಿಂದ ತೆರಳಿದ ತಂಡಕ್ಕೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಚಾಲನೆ ನೀಡಿದರು.

ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ವಿವಿಧ ಗ್ರಾಮಗಳಿಂದ ತಮಿಳುನಾಡಿನ ಬರಗೂರು ಗ್ರಾಮದಲ್ಲಿ ನಡೆಯುವ ಕೊಂಡೋತ್ಸವಕ್ಕೆ ಸಾಂಪ್ರದಾಯದಂತೆ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿ ನಂತರ ತಂಡದವರನ್ನು ಕಳುಹಿಸಿಕೊಡಲಾಯಿತು.

ಈರೋಡ್ ಜಿಲ್ಲೆಯ ತಮಿಳುನಾಡಿನ ತುರುಸನ ಪಾಳ್ಯ ಬರಗೂರು ಬೆಟ್ಟದಲ್ಲಿ ಸೋಮವಾರ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡು, ಜು.1 ರಂದು, ಬರಗೂರು ಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ದೊಡ್ಡ ಕೊಂಡೋತ್ಸವ ನಡೆಯುವುದರಿಂದ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತಲಿನ ದೇವರುಗಳ ಉತ್ಸವ ಮೂರ್ತಿಗಳು ಹಾಗೂ ಛತ್ರಿ ಚಾಮರದೊಂದಿಗೆ ದೊಡ್ಡಣೆ ಗ್ರಾಮದ ಮೂಲಕ ತಮಿಳುನಾಡಿಗೆ ಕಾಲ್ನಡಿಗೆಯಲ್ಲಿ ತೆರಳಿದ ಭಕ್ತ ವೃಂದಕ್ಕೆ ಶ್ರೀಗಳು ಆಶೀರ್ವದಿಸಿ ಕಳಿಸಿಕೊಟ್ಟರು.