ಕನ್ನಡಪ್ರಭ ವಾರ್ತೆ ಹುನಗುಂದ

ಬೇವಿನಮಟ್ಟಿ ಕ್ರಾಸ್ ಬಳಿ ರಸ್ತೆಯಲ್ಲಿ ರಾತ್ರಿ ಲಾರಿಗೆ ಬೈಕ್ ಗುದ್ದಿದ್ದರಿಂದ ಸವಾರ ಸಿದ್ದಪ್ಪ ಹೊಸೂರ (ಪಟ್ಟಣಶೆಟ್ಟಿ) (46) ಮಂಗಳವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮೃತರು ಹುನಗುಂದ ನಗರದ ನಿವಾಸಿಯಾಗಿದ್ದು, ಇತನು ಅಮೀನಗಡದಿಂದ ಹುನಗುಂದ ನಗರಕ್ಕೆ ರಾತ್ರಿ ಬೈಕ್‌ ಮೂಲಕ ತೆರಳುವಾಗ ರಾತ್ರಿ ಲಾರಿಗೆ ಹಿಂಬದಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.