ರಾಣಿಬೆನ್ನೂರ ನಗರದ ಹಿಂದೂ ಸಮ್ಮೇಳನ ಸಮಿತಿ (ಉತ್ತರ) ವತಿಯಿಂದ ಏರ್ಪಡಿಸಲಾಗಿದ್ದ ವಿರಾಟ ಹಿಂದೂ ಸಮ್ಮೇಳನದ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕ್ ರ್ಯಾವಲಿ ಶನಿವಾರ ನಗರದಲ್ಲಿ ಜರುಗಿತು.
ರಾಣಿಬೆನ್ನೂರ: ನಗರದ ಹಿಂದೂ ಸಮ್ಮೇಳನ ಸಮಿತಿ (ಉತ್ತರ) ವತಿಯಿಂದ ಏರ್ಪಡಿಸಲಾಗಿದ್ದ ವಿರಾಟ ಹಿಂದೂ ಸಮ್ಮೇಳನದ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ ಶನಿವಾರ ನಗರದಲ್ಲಿ ಜರುಗಿತು.
ಇಲ್ಲಿಯ ಮೇಡ್ಲೇರಿ ರಸ್ತೆಯ ಗಂಗಾಜಲ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಸ್ವಾಮೀಜಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.ನಂತರ ಚೌಡೇಶ್ವರಿ ಬಡಾವಣೆ, ಮೃತ್ಯುಂಜಯ ನಗರ, ವಿಕಾಸ ನಗರ, ಹೌಸಿಂಗ್ ಕಾಲೋನಿ, ವಿನಾಯಕ ನಗರ, ಅಶೋಕ ನಗರ, ಬಸ್ ನಿಲ್ದಾಣ, ಮೇಡ್ಲೇರಿ ಕ್ರಾಸ್, ಅಂಚೆ ವೃತ್ತ, ಎಡಿಬಿ ವೃತ್ತ, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಗೌಳಿ ಗಲ್ಲಿ, ಮಹಾವೀರ ರಸ್ತೆ, ಸುಭಾಶ ವೃತ್ತ, ದೊಡ್ಡಪೇಟೆ ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿ, ರಂಗನಾಥ ನಗರ, ಸಂಗಮ್ ವೃತ್ತ, ರೈಲ್ವೆ ಸ್ಟೇಷನ್ ರಸ್ತೆ, ಅಶೋಕ ವೃತ್ತದಿಂದ ಎಪಿಎಂಸಿ ಮಾರುಕಟ್ಟೆ ಆವರಣ ಬಂದು ತಲುಪಿತು.ರ‍್ಯಾಲಿಯಲ್ಲಿ ಜೈ-ಶ್ರೀರಾಮ, ಜೈ ಹನುಮಾನ ಘೋಷಣೆಗಳನ್ನು ಜನರು ಕೂಗಿದರು.ಮಾಜಿ ಶಾಸಕ ಅರುಣಕುಮಾರ ಪೂಜಾರ, ಸಮ್ಮೇಳನದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಉಪಾಧ್ಯಕ್ಷರಾದ ಪ್ರಕಾಶ ಜೈನ್, ಶೀಪಾದ ಕುಲಕರ್ಣಿ, ಅರುಣಾ ಕಬಾಡಿ, ಸದಸ್ಯರಾದ ಜಗದೀಶ ಪ್ರಜಾಪತ್, ರವಿ ಕಿರಗೇರಿ, ಅಮೋಘ ಬಾದಾಮಿ, ಶ್ರೀಧರ ಪಾಸ್ತೆ, ಪವನ ಜನ್ನು, ಮುಖಂಡರಾದ ಸಂತೋಷ ತೆವರಿ, ರಾಮಣ್ಣ ಕಾಕಿ, ಯುವರಾಜ ಬ್ಯಾಡಗಿ, ನಾಗರಾಜ ಕೊರವರ, ಭಾರತಿ ಜಂಬಗಿ, ಪ್ರಭಾವತಿ ತಿಳವಳ್ಳಿ, ರೂಪಾ ಬಾಕಳೆ, ಸಂತೋಷ ನಾಯ್ಕ, ಸೂರಜ್ ಭೂತೆ, ಗಿರೀಶ ಹುಗ್ಗಿ, ಪ್ರಭಾಕರ ಶಿಗ್ಲಿ, ಸಂತೋಷ ದೈವಜ್ಞ, ಲಿಂಗರಾಜ ಅರಕೇರಿ, ಡಾ. ನಾರಾಯಣ ಪವಾರ, ಬಸವರಾಜ ಅಂತರವಳ್ಳಿ, ವಸಂತ ಹುಲ್ಲತ್ತಿ, ಅಶೋಕ ನಾಡಿಗೇರ, ಮೃತ್ಯುಂಜಯ ಕಾಕೋಳ, ಲಿಂಗರಾಜ ಬೂದನೂರ, ಮಮತಾ ಜಾಧವ, ವಿನಯಕುಮಾರ ಬಾಳನಗೌಡ್ರ, ಕೊಟ್ರೇಶಪ್ಪ ಎಮ್ಮಿ, ಎ.ಬಿ.ಪಾಟೀಲ, ಪವನಕುಮಾರ ಮಲ್ಲಾಡದ, ಪ್ರಕಾಶ ಮಣೇಗಾರ, ಕೆ.ಎನ್. ಷಣ್ಮುಖ, ಶಿವಪ್ಪ ಗುರಿಕಾರ, ರಾಜು ಬಣಕಾರ ಮತ್ತಿತರರಿದ್ದರು.