ಸಾರಾಂಶ
ಶಿಪ್ಟ್ ಕಾರು ಲಾರಿ ಓವರ್ ಟೇಕ್ ಮಾಡಲು ಹೋದಾಗ ಹೆದ್ದಾರಿ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಂ10 ಇಜಿ 7074 ನಂಬರ್ ಬೈಕ್‌ಗೆ ಗುದ್ದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಲಾರಿಗೆ ಮಾರುತಿ ಸಿಫ್ಟ್ ಕಾರು ಡಿಕ್ಕಿ ಹೊಡೆದ ಬಳಿಕ ಹೆದ್ದಾರಿ ಬಲ ಬದಿಯ ಡಿವೈಡರ್ ಹಾರಿ ಹೋಗಿ ಎದುರು ಬರುತ್ತಿದ್ದ ಬೈಕ್ ಗುದ್ದಿ ಸವಾರ ಸಾವನ್ನಪ್ಪಿದರೆ, ಮತ್ತಿಬ್ಬರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದ ಘಟನೆ ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಸೋಮವಾರ ಬೆಳಗ್ಗೆ ನಡೆದಿದೆ.ಪಟ್ಟಣದ ಕೆನರಾ ಬ್ಯಾಂಕ್ ಮುಂದು ಹಾದು ಹೋಗುವ ಮೈಸೂರು- ಊಟಿ ಹೆದ್ದಾರಿಯಲ್ಲಿ ಗುಂಡ್ಲುಪೇಟೆ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕೆಎಲ್72 ಸಿ 576 ನಂಬರಿನ ಶಿಪ್ಟ್ ಕಾರು ಲಾರಿ ಓವರ್ ಟೇಕ್ ಮಾಡಲು ಹೋದಾಗ ಹೆದ್ದಾರಿ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಂ10 ಇಜಿ 7074 ನಂಬರ್ ಬೈಕ್‌ಗೆ ಗುದ್ದಿದೆ.
ಬೈಕ್ ಸವಾರ ಭೀಮನಬೀಡು ಗ್ರಾಮದ ಮನು ಆಲಿಯಾಸ್ ಮನೋಜ್ (23), ಹೆಗ್ಗಡಹಳ್ಳಿಯ ಮಹೇಶ್, ರಾಘವಾಪುರದ ಅಭಿ ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕಳುಹಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದರೆ, ಮಹೇಶ್ ಹಾಗೂ ಅಭಿ ಮೈಸೂರಿನ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಳಿಕ ಲಾರಿ, ಕಾರು,ಬೈಕ್ ನನ್ನು ವಶ ಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.೧ಜಿಪಿಟಿ೨
ಮನೋಜ್೧ಜಿಪಿಟಿ೩
ಗುಂಡ್ಲುಪೇಟೆ ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ನಜ್ಜು ಗುಜ್ಜಾದ ಮಾರುತಿ ಕಾರು.೧ಜಿಪಿಟಿ೪
ಗುಂಡ್ಲುಪೇಟೆ ಪಟ್ಟಣದ ಊಟಿ ಹೆದ್ದಾರಿಯ ಎಡ ರಸ್ತೆಯಿಂದ ಬಲ ರಸ್ತೆಗೆ ಕಾರು ಬಂದು ಬೀಳ್ತು!