ಬಿಲ್ಲವಾಸ್ ಕತಾರ್‌ನ ನೂತನ ಸಮಿತಿಯ ಪದಗ್ರಹಣ

| Published : Feb 23 2024, 01:50 AM IST

ಸಾರಾಂಶ

ಸಂದೀಪ್ ಮಲ್ಲಾರ್ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅಪರ್ಣಾ ಶರತ್ ಉಪಾಧ್ಯಕ್ಷರಾಗಿ, ಮಹೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಅಜಯ್ ಕೋಟ್ಯಾನ್ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಉಡುಪಿಕತಾರ್‌ನಲ್ಲಿರುವ ಬಿಲ್ಲವ ಸಮುದಾಯದವರು ಕಟ್ಟಿಕೊಂಡಿರುವ ಬಿಲ್ಲವಾಸ್ ಕತಾರ್ ಒಂದು ತುಂಬಾ ಕ್ರಿಯಾಶಾಲಿ ಸಂಸ್ಥೆಯಾಗಿದ್ದು, ಅದರ ವಾರ್ಷಿಕ ಮಹಾಸಭೆಯಲ್ಲಿ ಬಿಲ್ಲವಾಸ್ ಕತಾರ್ 2024-25ನೇ ಸಾಲಿನ ಹೊಸ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಸಂದೀಪ್ ಮಲ್ಲಾರ್ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅಪರ್ಣಾ ಶರತ್ ಉಪಾಧ್ಯಕ್ಷರಾಗಿ, ಮಹೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಅಜಯ್ ಕೋಟ್ಯಾನ್ ಆಯ್ಕೆಯಾದರು.ಉಳಿದಂತೆ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಜಿತಿನ್, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ವೇತಾ ಸುವರ್ಣ, ಸದಸ್ಯತ್ವ ಸಂಯೋಜಕರಾಗಿ ಚಂಚಲಾಕ್ಷಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸೀಮಾ ಉಮೇಶ್ ಪೂಜಾರಿ, ಮಾಧ್ಯಮ ಸಂಯೋಜಕರಾಗಿ ನಿತಿನ್ ಸನಿಲ್, ಸಾರಿಗೆ ಸಂಯೋಜಕರಾಗಿ ನಿತಿನ್ ಕುಂಪಲ ಅವರು ಆಯ್ಕೆಯಾದರು.

ಪೂರ್ವಾಧ್ಯಕ್ಷರಾದ ರಘುನಾಥ್ ಅಂಚನ್ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನೂತನ ಸಮಿತಿಗೆ ಶುಭ ಹಾರೈಸಿದರು. ಹಿಂದಿನ ಸಮಿತಿಯ ಸದಸ್ಯರು ಮತ್ತು ಬಿಲ್ಲವಾಸ್ ಕತಾರ್‌ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.ಬಿಲ್ಲವಾಸ್ ಕತಾರ್ ಭಾರತೀಯ ರಾಯಭಾರ ಕಚೇರಿ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ - ಕತಾರ್ (ಐಸಿಸಿ -ಕತಾರ್ )ನ ಸಹವರ್ತಿ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿದೆ. ಬಿಲ್ಲವಾಸ್ ಕತಾರ್ ಸಂಘಟನೆಯು ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಉತ್ತೇಜನವನ್ನು ಕೊಡುವುದಕ್ಕೆ ಸಮರ್ಪಕವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ನಮ್ಮ ತಾಯ್ನಾಡಿನ ಕಂಪನ್ನು ವಿಶೇಷವಾಗಿ ಯುವಜನರಿಗೆ ತಲುಪಿಸುವಲ್ಲಿ ಸದಾ ಶ್ರಮಿಸುತ್ತಿದೆ.