ಮಂಗಳೂರು: ನಾಡಿನಾದ್ಯಂತ ಜನಪ್ರಿಯಗೊಂಡಿರುವ ‘ಬಿಂದು’ ಸಂಸ್ಥೆಯ ಹೊಸ ಉತ್ಪನ್ನ ‘ಸಿಪ್ಆನ್ ಆಕ್ಟೀವ್ ಪ್ಲಸ್’ ಪಾನೀಯವನ್ನು ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.ಈ ಪಾನೀಯವನ್ನು ತಾಜಾ ನೈಸರ್ಗಿಕ ಸೇಬಿನ ಹಣ್ಣಿನ ಪಲ್ಪ್‌ನಿಂದ ತಯಾರಿಸಲಾಗಿದೆ. ಇದು ಕಿತ್ತಳೆ ಹಣ್ಣಿನ ಫ್ಲೇವರ್‌ನ್ನು ಹೊಂದಿದೆ.
ಈ ಪಾನೀಯದಲ್ಲಿ ಗ್ಲುಕೋಸ್‌ನ ಅಂಶ ಇರುವುದರಿಂದ ಇದು ಕ್ರೀಡಾಪಟುಗಳಿಗೆ ತ್ವರಿತ ಶಕ್ತಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಒದಗಿಸುತ್ತದೆ. ಇದು ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ನಿರ್ಜಲೀಕರಣ ತಡೆಯಲು ಸಹಕಾರಿಯಾಗಲಿದೆ.ಈ ಪಾನೀಯದಲ್ಲಿ ಅಥ್ಲೆಟಿಕ್ಸ್ ವ್ಯಾಯಾಮಗಳಿಗೆ ಅಥವಾ ಹೊರಗಿನ ಮತ್ತು ವೈಯಕ್ತಿಕ ಆಟಗಳಿಗೆ ಅಗತ್ಯವಾದ ಖನಿಜಾಂಶಗಳಾದ ಸೋಡಿಯಂ ಮತ್ತು ಪೊಟಾಷಿಯಂ ಹಾಗೂ ಗ್ಲೂಕೋಸ್ ಅಂಶವನ್ನು ಸೇರಿಸಲಾಗಿದೆ.
ಆದ್ದರಿಂದ ಇದು ತ್ವರಿತ ಶಕ್ತಿಯನ್ನು ನೀಡಿ ದಣಿವನ್ನು ನೀಗಿಸುತ್ತದೆ ಹಾಗೂ ಒಟ್ಟಾರೆಯಾಗಿ ಇದೊಂದು ಕ್ರೀಡಾ ಪಾನೀಯವಾಗಿದೆ. ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.