ಸಾರಾಂಶ
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಮಂಗಳವಾರ ವನಸಿರಿ ಫೌಂಡೇಶನ್ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ‘ಹಕ್ಕಿ-ಪಕ್ಷಿಗಳ ಗುಟುಕು ನೀರಿನ ಅರವಟ್ಟಿಗೆ’ ಅಭಿಯಾನ ಕಾರ್ಯಕ್ರಮವನ್ನು ಬಂಗಾಲಿ ಕ್ಯಾಂಪಿನ ಸಿದ್ದಾಶ್ರಮದ ಸಿದ್ಧರಾಮ ಶರಣರು ಉದ್ಘಾಟಿಸಿದರು.
ನಂತರ ಮಾತನಾಡಿ ಅವರು ಸಿಂಧನೂರು ತಾಲ್ಲೂಕು ಸೇರಿದಂತೆ ಕಲ್ಯಾಣ ಕರ್ನಾಟಕದ ಮೂರ್ನಾಲ್ಕು ಜಿಲ್ಲೆಯಲ್ಲಿ ಪರಿಸರ ಜಾಗೃತಿಗೆ ಪ್ರೇರಣೆ ನೀಡಿದ ಮೊಟ್ಟಮೊದಲ ಸಂಸ್ಥೆಯನ್ನುವ ಹೆಗ್ಗಳಿಕೆಯನ್ನು ವನಸಿರಿ ಫೌಂಡೇಶನ್ ಪಡೆದಿದೆ ಎಂದು ಶ್ಲಾಘಿಸಿದರು.ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಮರ ಕಡಿಯಬೇಕಾದರೆ ಅರಣ್ಯಾಧಿಕಾರಿಗಳಿಗಿಂತ ಹೆಚ್ಚಾಗಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರನ್ನು ಕೇಳುವಷ್ಟರ ಮಟ್ಟಿಗೆ ವನಸಿರಿ ಫೌಂಡೇಶನ್ ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದೆ ಎಂದರು.
ಏ.1 ರಂದು ಆಚರಿಸುವ ‘ಏಪ್ರಿಲ್ ಫೂಲ್’ ಬದಲಾಗಿ ‘ಏಪ್ರಿಲ್ ಕೂಲ್’ ಹೆಸರಿನಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಅತ್ಯಂತ ಮಾನವೀಯವಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳಿ ವಿವಿಧ ಹಣ್ಣಿನ ಬೀಜಗಳನ್ನು ಸಂಗ್ರಹಿಸಿಡಲು ತಿಳಿಸುತ್ತಾರೆ. ನಂತರ ಅವುಗಳನ್ನು ತೆಗೆದುಕೊಂಡು ಕಾಡಿಗೆ ತೆರಳಿ ಬಿತ್ತನೆ ಮಾಡುವ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ’ ಎಂದರು.ರೌಡಕುಂದಾ ಶಿವಕುಮಾರ ಸ್ವಾಮೀಜಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಗವಿಸಿದ್ದೇಶ್ವರ ಆಸ್ಪತ್ರೆಯ ವೈದ್ಯ ಡಾ.ಶರಣಬಸವ, ಡಾ.ಮಲ್ಲಿಕಾರ್ಜುನ ಇತ್ಲಿ ಮಸ್ಕಿ, ಚೇತನ ಆಸ್ಪತ್ರೆಯ ಡಾ.ನಾಗರಾಜ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಮರಿಬಸನಗೌಡ ವಕೀಲರ ಟ್ರಸ್ಟ್ ಅಧ್ಯಕ್ಷ ಎಂ.ಅಮರೇಗೌಡ ವಕೀಲ, ಬಸವರಾಜ ಸಾಹುಕಾರ ವಕೀಲ, ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ನಿವೃತ್ತ ಮುಖ್ಯಶಿಕ್ಷಕ ಗಂಗನಗೌಡ ಪಾಟೀಲ್, ಗುತ್ತಿಗೆದಾರ ಹಾರುನ್ ಜಾಗಿರದಾರ್, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಶಂಭೋಜಿ, ಸಮಾಜಸೇವಕ ಮುತ್ತುಪಾಟೀಲ್, ವನಸಿರಿ ಫೌಂಡೇಶನ್ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತ ಸಾರಂಗಮಠ, ಕಾರುಣ್ಯಾಶ್ರಮದ ಚನ್ನಬಸಯ್ಯಸ್ವಾಮಿ, ಪುನೀತ್ ಆಶ್ರಮದ ಪಂಪಯ್ಯಸ್ವಾಮಿ, ಶ್ರೀಕೃಷ್ಣದೇವರಾಯ, ಐಕ್ಯೂ, ಸನ್ರೈಸ್, ನ್ಯಾಷನಲ್ ಕಾಲೇಜ್, ಶ್ರೀಮಂಜುನಾಥ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.