ಪರಿಸರ ನಾಶದಿಂದ ವಿನಾಶದತ್ತ ಪಕ್ಷಿ ಸಂಕುಲ

| Published : Apr 02 2024, 01:04 AM IST

ಸಾರಾಂಶ

ಕೂಲ್ ಡೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿ ಶಿಕ್ಷಕ ಸಿದ್ಧಲಿಂಗ ಚೌಧರಿ ಮಾತನಾಡಿ, ಪರಿಸರ ನಾಶದಿಂದ ವಿನಾಶದತ್ತ ಪಕ್ಷಿ ಸಂಕುಲ ಸಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸಿಂದಗಿಆಧುನಿಕತೆಯ ಭರಾಟೆಗೆ ಪರಿಸರ ವಿನಾಶವಾಗುತ್ತಿದೆ. ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು, ಪ್ರಕೃತಿ ವಿಕೋಪಗಳು ಘಟಿಸುತ್ತಿವೆ. ನಮ್ಮ ನಡುವೆ ಚಿಲಿಪಿಲಿಯೆಂದು ಉಲಿಯುತ್ತಿದ್ದ ಪಕ್ಷಿಗಳು ಕಣ್ಮರೆಯಾಗುತ್ತಿವೆ ಎಂದು ಶಿಕ್ಷಕ ಸಿದ್ಧಲಿಂಗ ಚೌಧರಿ ಹೇಳಿದರು.

ಪಟ್ಟಣದ ಲಿಟಲ್ ವಿಂಗ್ಸ್ ಫ್ರೀ ಸ್ಕೂಲ್‌ನಲ್ಲಿ ಸೋಮಾವಾರ ಹಮ್ಮಿಕೊಂಡ ಏಪ್ರಿಲ್ 1 ಕೂಲ್ ಡೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿ ಮಾತನಾಡಿದ ಅವರು, ಗಿಡಮರಗಳು ನಾಶವಾದ ಪರಿಣಾಮ ಅಲ್ಲಿದ್ದ ಅನೇಕ ಪಕ್ಷಿಗಳು ಇಂದು ಮರೆಯಾಗಿವೆ. ಮಳೆ ಸಮರ್ಪಕವಾಗಿ ಆದದೆ ಪ್ರಾಣಿಪಕ್ಷಿಗಳಿಗೆ ಕಾಡಿನಲ್ಲಿ ನೀರು ಸಿಗುವುದು ಕಷ್ಟವಾಗಿದೆ. ಆಹಾರ, ನೀರು, ಪ್ರಕೃತಿ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಪಕ್ಷಿಗಳ ಸಂಕುಲ ನಶಿಸುತ್ತಿದೆ. ಇಂದಿನ ಮಕ್ಕಳು ಅನೇಕ ಪಕ್ಷಿಗಳನ್ನು ಚಿತ್ರಗಳ ಮೂಲಕ ಹಾಗೂ ಪಕ್ಷಿ ಸಂಗ್ರಹಾಲಯಗಳಲ್ಲಿ ವೀಕ್ಷಿಸುವಂತಹ ಸ್ಥಿತಿ ತಲೆದೋರಿದೆ. ಆದರೆ ನಮ್ಮ ಸರ್ಕಾರಗಳು ಮಾತ್ರ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅಸಮತೋಲನಕ್ಕೆ ಕಾರಣ ಹುಡುಕುವ ಅಥವಾ ಪ್ರಾಣಿ ಪಕ್ಷಿ ಸಂಕುಲದ ವಿನಾಶ ತಪ್ಪಿಸುವತ್ತ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ನಿವೃತ್ತ ವ್ಯವಸ್ಥಾಪಕ ಅವದೂತ ಜೋಶಿ ಮಾತನಾಡಿ, ಪರಿಸರ ಜೊತೆ ಪಕ್ಷಿ ಸಂಕುಲನ ರಕ್ಷಸಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.

ಎಲ್ಲ ಮಕ್ಕಳಿಗೂ ಸಸಿಗಳನ್ನು ವಿತರಿಸಲಾಯಿತು. ತಟ್ಟೆಯಲ್ಲಿ ನೀರು ಮತ್ತು ಧಾನ್ಯಗಳನ್ನು ಇಟ್ಟು ಪ್ರತಿ ಮನೆಯಲ್ಲಿ ಈ ಕಾರ್ಯ ನಡೆಯಲೆಂದು ಪ್ರತಿಜ್ಞೆಗೈಯಲಾಯಿತು.

ಭಾರತಿ ಚೌಧರಿ, ಕಾವೇರಿ ಬಿರಾದಾರ, ಪೂಜಾ, ಸುರಭಿ, ನಗ್ಮಾ, ಅಭಿಷೇಕ, ಐಶ್ವರ್ಯ, ನಿಖಿತಾ, ನಾಗರೇಕಾ ಪ್ರಿಯಾಂಕಾ, ಅಶ್ವಿನಿ, ಸಂತೋಷ ಕಾಂಬಳೆ, ಎಸ್.ಎಸ್. ಪಾಟೀಲ, ಧರು ಕುಂಬಾರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.