ಸಾರಾಂಶ
ಜನನ, ಮರಣ ಸಂಭವಿಸಿದ ೩೦ ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಗ್ರಾಪಂ ಕಾರ್ಯದರ್ಶಿಗಳೇ ವಿತರಿಸುವರು. ೩೦ ದಿನಗಳ ನಂತರವಾದರೆ ಗ್ರಾಮ ಲೆಕ್ಕಾಕಾರಿಗಳು ನೋಂದಣಾಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ಕೋಲಾರಇನ್ನು ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಪಂನಲ್ಲೇ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದ್ದಾರೆ.ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವನಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.ಇ -ಜನ್ಮ ತಂತ್ರಾಂಶ ಬಳಕೆ
ಇನ್ನು ಮುಂದೆ ಜನನ, ಮರಣ ಸಂಭವಿಸಿದ ೩೦ ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು. ಇದರಿಂದ ಅಧಿಕಾರಿಗಳು ಕಾರ್ಯದ ಒತ್ತಡದಲ್ಲಿದ್ದಾರೆ, ಇನ್ನೂ ಸಹಿ ಹಾಕಿಲ್ಲವೆಂದು ಸಬೂಬು ಹೇಳುವಂತಿಲ್ಲ. ಜನರು ಪದೇಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಾಗಿಲ್ಲ. ನೋಂದಣಿಯೂ ಬೇಗ ನಡೆಯಲಿದೆ. ನಂತರ ಪ್ರಮಾಣ ಪತ್ರವೂ ಸಿಗಲಿದೆ. ಗ್ರಾಪಂ ಕಾರ್ಯದರ್ಶಿಯವರೇ ಉಪ ನೋಂದಣಾಕಾರಿ ಆಗಿರುತ್ತಾರೆ ಎಂದು ಅವರು ತಿಳಿಸಿದರು.೩೦ ದಿನಗಳೊಳಗೆ ಪ್ರಮಾಣಪತ್ರಜನನ, ಮರಣ ಸಂಭವಿಸಿದ ೩೦ ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಗ್ರಾಪಂ ಕಾರ್ಯದರ್ಶಿಗಳೇ ವಿತರಿಸುವರು. ೩೦ ದಿನಗಳ ನಂತರವಾದರೆ ಗ್ರಾಮ ಲೆಕ್ಕಾಕಾರಿಗಳು ನೋಂದಣಾಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಜಿಲ್ಲಾದ್ಯಂತ ಎಲ್ಲಾ ಪಂಚಾಯಿತಿಗಳಲ್ಲೂ ಈ ಸೇವೆ ಕಲ್ಪಿಸಲಾಗಿದೆ. ಜತೆಗೆ, ವಿವಾಹ ನೋಂದಣಿಯೂ ಗ್ರಾಪಂಗಳಲ್ಲೇ ನಡೆಯಲಿದೆ ಮಾಹಿತಿ ನೀಡಿದರು. ಪಿಡಿಒಗಳನ್ನು ಜನನ-ಮರಣ ಪ್ರಮಾಣ ಪತ್ರ ವಿತರಣಾಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಪಂ ಕಾರ್ಯದರ್ಶಿರನ್ನು ಉಪ ನೋಂದಣಾಕಾರಿಯನ್ನಾಗಿ ನೇಮಿಸಲಾಗಿದೆ.ಹೇಗೆ ಕಾರ್ಯ ನಿರ್ವಹಣೆ?ಈ ಸಂಬಂಧ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ನೋಂದಾಯಿಸಿ, ಪ್ರಮಾಣ ಪತ್ರಗಳನ್ನು ಡಿಜಿಟಲ್ ಸಹಿ ಮೂಲಕ ವಿತರಿಸಲು ಗ್ರಾಪಂ ಕಾರ್ಯದರ್ಶಿಗಳು ಡಿಜಿಟಲ್ ಕೀಗಳನ್ನು ಹೊಂದಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಂತಹಂತವಾಗಿ ಮಾಹಿತಿ ನೀಡುವುದರ ಜತೆಗೆ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.ಎಲ್ಲಾ ಗ್ರಾಪಂಗಳಲ್ಲೂ ಈ ಸೇವೆ ಕಲ್ಪಿಸಲಾಗಿದೆ. ಇಷ್ಟೇ ಅಲ್ಲದೆ ವಿವಾಹ ನೋಂದಣಿಯೂ ಗ್ರಾಪಂಗಳಲ್ಲೇ ನಡೆಯಲಿದೆ. ಈವರೆಗೆ ವಿವಾಹ ನೋಂದಣಿ ಕಾರ್ಯ ಕೇವಲ ಉಪ ನೋಂದಾವಣಾಧಿಕಾರಿ ಕಛೇರಿಯಲ್ಲೇ ನಡೆಯುತ್ತಿತ್ತು. ಪಿಡಿಒಗಳನ್ನು ಜನನ-ಮರಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಪಂ ಕಾರ್ಯದರ್ಶಿರನ್ನು ಉಪ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.ಕಚೇರಿಗೆ ಅಲೆದಾಡಬೇಕಿಲ್ಲಹಿಂದೆಲ್ಲಾ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಪಡೆಯಬೇಕೆಂದರೆ ನಾಡಕಚೇರಿಯಿಂದ ತಹಸೀಲ್ದಾರ್ ಕಚೇರಿಯವರೆಗೂ ಅಲೆದಾಡಬೇಕಾಗುತ್ತಿತ್ತು. ಆದರೂ ಕ್ಲಪ್ತ ಸಮಯದಲ್ಲಿ ಸಿಗುತ್ತಿರಲಿಲ್ಲ. ಈ ಪರಿಸ್ಥಿತಿ ಗಮನಿಸಿ ರಾಜ್ಯದ ಕೆಲವೊಂದು ಸ್ಥಳೀಯಾಡಳಿತ ಸಂಸ್ಥೆಗಳು ಪರಿಸ್ಥಿತಿಯನ್ನು ಸುಧಾರಿಸಲು ಪ್ಪಯತ್ಸಿವೆ. ಇದೀಗ ರಾಜ್ಯ ಸರ್ಕಾರದ ಪಂಚಾಯ್ತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಇ ಬಗ್ಗೆ ಮುತುರ್ಜಿ ವಹಿಸಿ ಎಲ್ಲೆಡೆ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.