ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಆರ್ಯ ಈಡಿಗರ ಸಂಘದಿಂದ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.ಪಟ್ಟಣದ ಶಿವಪುರದ ಕೀರ್ತಿ ಶೇಷರಾದ ನಿಡಘಟ್ಟ ಅಣ್ಣೇಗೌಡರ ಕಟ್ಟಡದ ಈಡಿಗರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸೌಮ್ಯ ಶ್ರೀನಿವಾಸ್ ಅವರು ಮಾತನಾಡಿ, ಪುನೀತ್ ರಾಜಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷಗಳು ಸಂದಿದ್ದರು ಸಹ ಅವರ ನೆನಪು ನಮ್ಮ ಮನಸ್ಸಿನಲ್ಲಿ ಜೀವಂತವಾಗಿದೆ ಎಂದು ಗುಣಗಾನ ಮಾಡಿದರು.ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರು ಮದ್ದೂರಿನ ಯಾವುದಾದರೂ ಒಂದು ಬಡಾವಣೆ, ವೃತ್ತ ಹಾಗೂ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಗೌರವಾಧ್ಯಕ್ಷ ಎಂ.ಎಲ್.ತಮ್ಮಯ್ಯ, ಹೋಬಳ ರಂಗಯ್ಯ, ಎ.ಎಚ್.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಶ್ರೀನಿವಾಸ್, ಖಜಾಂಚಿ ಎಸ್.ಶ್ರೀನಿವಾಸ್, ನಿರ್ದೇಶಕರಾದ ಪುಟ್ಟಪ್ಪ, ಕೆ.ಜಿ.ಮೋಹನ್, ಪದಾಧಿಕಾರಿಗಳಾದ ಶಾಮಿಯಾನ ನಾರಾಯಣ, ಲಕ್ಷ್ಮಣ, ಶಿವಲಿಂಗಯ್ಯ, ತೋಟದ ಮನೆ ನಾಗೇಶ್ ಮತ್ತಿತರರು ಭಾಗವಹಿಸಿದ್ದರು.
ಪವರ್ ಸ್ಟಾರ್ ಪುನೀತ್ ಹುಟ್ಟುಹಬ್ಬ ಆಚರಣೆ
ಹಲಗೂರು:ಚನ್ನಪಟ್ಟಣ ರಸ್ತೆಯ ಗಂಧದ ಗುಡಿ ಕ್ಯಾಂಟೀನ್ ಮಾಲೀಕ ಕುಮಾರ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಸಂಭ್ರಮಿಸಿದ ಆಚರಿಸಿದರು.ಅಪ್ಪು ಜನ್ಮದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಡರಹಳ್ಳಿ ಗ್ರಾಮ ವ್ಯಾಪ್ತಿಯ ಕೆಇಬಿ ಶಾಖೆ ಕಿರಿಯ ಅಭಿಯಂತರ ಸಿ.ಕೆ.ನಂದೀಶ್ ಕೇಕ್ ಕತ್ತರಿಸಿ ಸಿಹಿ ಹಂಚಿಸಿದರು.ನಂತರ ನಂದಿಪುರದ ಎನ್.ಕೆ.ಕುಮಾರ್ ಮಾತನಾಡಿ, ಪವರ್ ಸ್ಟಾರ್ ಪುನೀತ್( ಅಪ್ಪು) ಮಾಡಿದ ಸಾಧನೆ ಹಾಗೂ ದಾನ ಧರ್ಮಗಳ ಬಗ್ಗೆ ಅವರು ತಿಳಿಸಿ ಅವರು ಇಂದು ನಮ್ಮೊಂದಿಗೆ ಇಲ್ಲದಿರುವುದು ತುಂಬಾ ದುಃಖದ ಸಂಗತಿ ಎಂದರು.
ದೇವರ ಇಚ್ಛೆ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಹೆಸರಿನಲ್ಲಿ ಇಂದು ನಮ್ಮ ಗಂಧದ ಗುಡಿ ಕ್ಯಾಂಟಿನ್ ಮಾಲೀಕ ಕುಮಾರ್ ಅವರು ಅಪ್ಪಟ ಅಭಿಮಾನಿಯಾಗಿದ್ದು, ಅವರ ಆದರ್ಶವನ್ನು ಅಳವಡಿಸಿಕೊಂಡು ನಡೆಯುತ್ತಿದ್ದಾರೆ. ಕುಮಾರ್ ಮತ್ತು ಸ್ನೇಹಿತರು ಸೇರಿ ಜನ್ಮದಿನವನ್ನು ಆಚರಿಸುತ್ತಿರುವುದು, ಜೊತೆಗೆ ಅಭಿಮಾನಿಗಳಿಗೆ ಲಘು ಉಪಹಾರ ನೀಡಿರುವುದು ಶ್ಲಾಘನೀಯ ಎಂದರು. ಈ ವೇಳೆ ಈಶ್ವರಿ ಶಾಮಿಯಾನ ಮಲ್ಲೇಶ್, ದೇವರಾಜು, ರವಿ, ಮಹದೇವ, ಶಿವಮಾದು, ರಾಜು ,ಯಶು, ಪ್ರಶಾಂತ್ ಸೇರಿದಂತೆ ಇತರರು ಇದ್ದರು.