ಸಂತ ಸೆಬಾಸ್ಟೀನ್ ದೇವಾಲಯದಲ್ಲಿ ಜನ್ಮ ದಿನೋತ್ಸವ, ಬಲಿಪೂಜೆ

| Published : Sep 10 2025, 01:04 AM IST

ಸಂತ ಸೆಬಾಸ್ಟೀನ್ ದೇವಾಲಯದಲ್ಲಿ ಜನ್ಮ ದಿನೋತ್ಸವ, ಬಲಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂತ ಸೆಬಾಸ್ಟೀಯನ್‌ ದೇವಾಲಯದಲ್ಲಿ ಕನ್ಯಾಮಾತೆ ಮರಿಯಮ್ಮನವರ ಜನ್ಮದಿನೋತ್ಸವ ಅಂಗವಾಗಿ ಆಡಂಬರ ಬಲಿಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

7ನೇ ಹೊಸಕೋಟೆ ಸಂತ ಸೆಬಾಸ್ಟೀನ್ ದೇವಾಲಯದಲ್ಲಿ ಕನ್ಯಾಮಾತೆ ಮರಿಯಮ್ಮನವರ ಜನ್ಮ ದಿನೋತ್ಸವದ ಅಂಗವಾಗಿ ಆಡಂಬರ ಬಲಿಪೂಜೆಯನ್ನು ನೆರವೇರಿಸಲಾಗಿದ್ದು, ನೂರಾರು ಆಗಮಿಸಿದ್ದ ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಮಾತೆಯ ಜಯಂತಿಯ ಸಂಭ್ರಮಕ್ಕೆ ಸಾಕ್ಷಿಯಾದರು. ಸೋಮವಾರದಂದು ಸಂಜೆ ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾದ ರೇ.ಫಾ ವಿ.ಎಂ.ಮಾಣಿ ಹಾಗೂ ಕೊಪ್ಪ ಸಂತಮೇರಿ ಸೆಮಿನಿರಿ ಸಿಎಂಐ ರೇಕ್ಟರ್ ರೇ.ಫಾ.ನೀಬಿನ್ ಕನ್ಯಾಮಾತೆ ಮರಿಯಮ್ಮನವರ ಜನ್ಮದಿನೋತ್ಸವದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಆಡಂಬರ ಬಲಿಪೂಜೆಯನ್ನು ಸಮರ್ಪಿಸಿದರು. ದೇವಾಲಯದ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಕ್ರೆಸ್ತ ಭಕ್ತಾದಿಗಳು ಮಾತೆ ಬೊಂಬಿನ ಅವರ ಪ್ರತಿಮೆಯನ್ನು ಹಿಡಿದುಕೊಂಡು ದೇವಾಲಯದ ಆವರಣದಲ್ಲಿ ಜಪಸರ ಪ್ರಾರ್ಥನೆಯನ್ನು ನೆರವೇರಿಸುವ ಮೂಲಕ ಆಶೀರ್ವಚನವನ್ನು ನೀಡಿದರು. ಭಕ್ತಾದಿಗಳು ಪರಸ್ಪರ ಮಾತೆ ಮರಿಯಮ್ಮನವರ ಜನ್ಮದಿನದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.