ಬಿರುನಾಣಿ: ರು.70 ಲಕ್ಷ ವೆಚ್ಚದ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ

| Published : Mar 16 2024, 01:46 AM IST

ಬಿರುನಾಣಿ: ರು.70 ಲಕ್ಷ ವೆಚ್ಚದ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿರುನಾಣಿ ವ್ಯಾಪ್ತಿಯಲ್ಲಿ 70 ಲಕ್ಷ ರು. ಅನುದಾನದಲ್ಲಿ ಗುರುವಾರ ಸಂಜೆ ಕಾಮಗಾರಿ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ನಡೆಸಿದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ರು. 60 ಲಕ್ಷ ಅನುದಾನವನ್ನು ಮೀಸಲಿಟ್ಟಿರುವುದಾಗಿ ವಿವರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ ಲೋಕಸಭಾ ಚುನಾವಣೆ ಯಾವುದೇ ಘಳಿಗೆಯಲ್ಲಿ ಘೋಷಣೆಯಾಗಬಹುದು. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗುವುದಿಲ್ಲ. ಚುನಾವಣೆ ಹಿನ್ನಲೆ ಕಾಮಗಾರಿ ಕುಂಠಿತವಾಗಬಾರದು ಕಾಮಗಾರಿಗಳು ಸ್ಥಗಿತವಾಗಬಾರದು ಎಂಬ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಸಾಮೂಹಿಕವಾಗಿ ಭೂಮಿಪೂಜೆ ನಡೆಸಲಾಗುತ್ತಿದೆ ಎಂದು ವಿರಾಜಪೇಟೆ ಶಾಸಕ ಎ.ಸ್.ಪೊನ್ನಣ್ಣ ಹೇಳಿದ್ದಾರೆ.

ಬಿರುನಾಣಿ ವ್ಯಾಪ್ತಿಯಲ್ಲಿ 70 ಲಕ್ಷ ರು. ಅನುದಾನದಲ್ಲಿ ಗುರುವಾರ ಸಂಜೆ ಕಾಮಗಾರಿ ಉದ್ಘಾಟನೆ ಹಾಗೂ ಹೊಸ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು. ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ರು. 60 ಲಕ್ಷ ಅನುದಾನವನ್ನು ಮೀಸಲಿಟ್ಟಿದ್ದೇವೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳಿಗೆ ಸುಮಾರು 250 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಕುಡಿಯುವ ನೀರಿನ ಘಟಕ, ಉದ್ಯಾನವನ, ಐನ್ ಮನೆ, ದೇವಸ್ಥಾನ, ಮಂದಿರ ಮಸೀದಿ, ಚರ್ಚ್ ಅಭಿವೃದ್ಧಿ, ಸೇತುವೆ, ತಡೆಗೋಡೆ, ಸಮುದಾಯ ಭವನ,ಕೆರೆಗಳು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆ, ಕೋರ್ಟ್ ನಿರ್ಮಾಣಕ್ಕೆ ರು. 25 ಕೋಟಿ ಎಸ್‌ಎಸ್‌ಡಿಪಿ ರು. 25 ಕೋಟಿ, ಇಎಸ್ಆರ್ ರು.6 ಕೋಟಿ ಇದೆಲ್ಲ ಸೇರಿದರೆ ಸುಮಾರು ರು. 300 ಕೋಟಿಯಷ್ಟು ಅನುದಾನವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು,ಸಂಪುಟದ ಸಚಿವರು ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದರು.ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಮಾತನಾಡಿ, ಉತ್ತಮ ಶಾಸಕರನ್ನು ನೀವು ಆಯ್ಕೆ ಮಾಡಿದ್ದೀರಿ ಅವರನ್ನು ಉಪಯೋಗಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಅವರಿಗೆ ಜನರ ಬೆಂಬಲ ನಿರಂತರವಾಗಿರಬೇಕು ಎಂದರು.

ಬಿರುನಾಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬುಟ್ಟಿಯಂಡ ನಾಣಯ್ಯ ಮಾತನಾಡಿ, ಕಾಮಗಾರಿಗೆ ಅನುದಾನ ಒದಗಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ಶಾಸಕ ಪೊನ್ನಣ್ಣ ಅವರಿಗೆ ಗ್ರಾಮಸ್ಥರು ಹಾರ ಹಾಕಿ ಸ್ವಾಗತಿಸಿ ಸನ್ಮಾನಿಸಿದರು. ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಅಣ್ಣಳ ಮಾಡ ಲಾಲಾ ಅಪ್ಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾ.ಪಂ. ಮಾಜಿ ಅಧ್ಯಕ್ಷೆ ರೇವತಿ ಪರಮೇಶ್ವರ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ, ತಾ.ಪಂ. ಮಾಜಿ ಸದಸ್ಯ ಬೊಳ್ಳೇರ ಪೊನ್ನಪ್ಪ,ಪ್ರಮುಖರಾದ ಕರ್ತಮಾಡ ನಂದ, ಕಾಳಿಮಾಡ ರಸಿಕ, ಅಣ್ಣಳ ಮಾಡ ಚಿಣ್ಣಪ್ಪ, ಗಿರೀಶ್, ಬುಟ್ಟಿಯಂಡ ಗಪ್ಪಣ್ಣ, ಕಳಕಂಡ ಜೀತು ಕುಶಾಲಪ್ಪ, ಅಣ್ಣಿರ ವಿಜು ಪೂಣಚ್ಚ, ಬಲ್ಯ ಮೀದೇರಿರ ರನ್ನು, ಅನಿತಾ ಬುಟ್ಟಿಯಂಡ ಗಪ್ಪಣ್ಣ, ಸುನಿತಾ, ಲೀನಾ ಮತ್ತಿತರರು ಭಾಗವಹಿಸಿದ್ದರು.