ಬೀರೂರು.ಪಟ್ಟಣದಲ್ಲಿ ಜನಸಂದಣಿ ಮತ್ತು ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತರಳಬಾಳು ಕಲ್ಯಾಣ ಮಂದಿರದಿಂದ ಪತ್ರೆ ಕಲ್ಯಾಣ ಮಂಟಪದ ವರೆಗೂ ರಸ್ತೆ ಅಗಲೀಕರಣ, ಕಾಂಕ್ರಿಟ್ ರಸ್ತೆ ಮಧ್ಯೆ ಡಿವೈಡರ್ ಅಳವಡಿಸುವ ಕಾಮಗಾರಿಗೆ ₹35 ಕೋಟಿ ವೆಚ್ಚವಾಗಲಿದ್ದು, ಟೆಂಡರ್ ಕರೆದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ₹ 7ಕೋಟಿ ವೆಚ್ಚದ ಲಿಂಗದಹಳ್ಳಿ ರಸ್ತೆಯಲ್ಲಿ ಧ್ವಿಪಥ ರಸ್ತೆ ಮತ್ತು ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಬೀರೂರು.ಪಟ್ಟಣದಲ್ಲಿ ಜನಸಂದಣಿ ಮತ್ತು ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತರಳಬಾಳು ಕಲ್ಯಾಣ ಮಂದಿರದಿಂದ ಪತ್ರೆ ಕಲ್ಯಾಣ ಮಂಟಪದ ವರೆಗೂ ರಸ್ತೆ ಅಗಲೀಕರಣ, ಕಾಂಕ್ರಿಟ್ ರಸ್ತೆ ಮಧ್ಯೆ ಡಿವೈಡರ್ ಅಳವಡಿಸುವ ಕಾಮಗಾರಿಗೆ ₹35 ಕೋಟಿ ವೆಚ್ಚವಾಗಲಿದ್ದು, ಟೆಂಡರ್ ಕರೆದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಭಾನುವಾರ ಸಂಜೆ ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ₹ 7ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಅಲಂಕಾರಿಕ ದೀಪಗಳ ಉದ್ಘಾಟನೆ ಮಾಡಿ ಮಾತನಾಡಿದರು. ಬೀರೂರು ಪಟ್ಟಣದ ಅಂಡರ್ ಬ್ರಿಡ್ಜ್ ಮೇಲ್ಬಾಗದ ಮಾರ್ಗದ ಕ್ಯಾಂಪ, ಭಗವತ್ ನಗರ, ಹೊಸಾಳಮ್ಮ ಮತ್ತಿತರ ಬಡಾವಣೆಗಳು ಸೇರಿದಂತೆ ಸುಮಾರು 7 ಪುರಸಭಾ ವಾರ್ಡಗಳಿದ್ದು, ಇಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಕೆಮ್ಮಣ್ಣುಗುಂಡಿ, ಕಲ್ಲತ್ತಿ ಗಿರಿ, ಚಿಕ್ಕಮಗಳೂರು ಇನ್ನಿತರ ಪ್ರವಾಸಿ ತಾಣಗಳಿಗೆ ಲಿಂಗದಹಳ್ಳಿ ರಸ್ತೆ ಪ್ರಮುಖ ರಸ್ತೆಯಾಗಿದೆ. ಪ್ರವಾಸಿಗರಿಗೆ ಮುಜುಗರ, ಕಿರಿಕಿರಿಯಾಗುವುದನ್ನು ತಪ್ಪಿ ಸಲು ಇಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದುದ್ದರ ಕಾರಣ ಅಪಘಾತ ತಪ್ಪಿಸಲು ರಸ್ತೆ ಅಗಲಿಕರಣ ಮಾಡಿ ಧ್ವಿಪಥ ಮಾಡಿ ಜಗಮಗಿ ಸುವಂತೆ ವಿದ್ಯುತ್ ದೀಪಾಲಂಕಾರ ಮಾಡಿ ಜನರ ಹಲವು ವರ್ಷಗಳ ಕನಸು ನನಸು ಮಾಡಿದ್ದೇನೆ ಎಂದರು.ಜೊತೆಗೆ ಬೀರೂರು ಪಟ್ಟಣದ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಹೈಟೆಕೆ ಸ್ಪರ್ಷ ನೀಡಲು ₹ 3ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ. ಹಿರಿಯಂಗಳ ರಸ್ತೆಗೆ ₹50ಲಕ್ಷ ಹಾಕಿ ರಸ್ತೆ ಮಾಡಿಸಲಾಗಿದೆ ಎಂದರು.2 ರೈಲ್ವೆ ಅಂಡರ್ ಪಾಸ್ ಕಾಮಗಾರಿ ಶೀಘ್ರ ಪ್ರಾರಂಭ:ಪಟ್ಟಣದ ಮಾರ್ಗದ ಕ್ಯಾಂಪ್ ಮತ್ತಿತರ ಬಡಾವಣೆಗಳ ಜನರು ಪಟ್ಟಣದ ಹೃದಯ ಭಾಗಕ್ಕೆ ಬರಲು 2-3ಕಿ.ಮೀ ಸುತ್ತಿಕೊಂಡು ಬರಬೇಕಿತ್ತು. ಈ ಸಮಸ್ಯೆ ಅರಿತು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮನೆಗೆ ಆಗಮಿಸಿದ್ದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ನೀಡಿದ್ದರಿಂದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, 17 ಅಡಿ ಅಂಡರ್ ಪಾಸ್ ಕಾಮಗಾರಿ ಹಾಗೂ ಬಿ.ಕೋಡಿಹಳ್ಳಿ ರಸ್ತೆಗೂ ಅಂಡರ್ ಪಾಸ್ ನಿರ್ಮಾಣಕ್ಕೆ ಒಪ್ಪಿದ್ದಾರೆ ಎಂದರು.ಕಳೆದ 2.5 ವರ್ಷಗಳಿಂದ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ನೀಡುವ ಮುಖೇನ ಕಡೂರು ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿ ಕಾಮಗಾರಿ ಉದ್ಘಾಟನೆ ಮಾಡಲಾಗುತ್ತಿದೆ. ನಮ್ಮ ಈ ಕಾರ್ಯಗಳ ಬಗ್ಗೆ ಅಪಹಾಸ್ಯ, ಟೀಕೆ ಮಾಡುವ ವಿರೋಧ ಪಕ್ಷದವರಿಗೆ ಬೀರೂರು ಪಟ್ಟಣದ ಇಂತಹ ಜಟಿಲ ಸಮಸ್ಯೆಗೆ ಪರಿಹಾರದ ಮಾಡುವ ಯೋಚನೆಗಳು ಬಾರದೇ ಇರುವುದು ದುರದೃಷ್ಟಕರ ಎಂದರು.ಪುರಸಭೆ ಮಾಜಿ ಅಧ್ಯಕ್ಷೆ ವನಿತಾ ಮಧು ಮಾತನಾಡಿ, ನನ್ನ ಪುರಸಭೆ ಅಧ್ಯಕ್ಷೆ ಅವಧಿಯಲ್ಲಿ ಮಾರ್ಗದ ಕ್ಯಾಂಪ್ ಸುತ್ತ ಮುತ್ತಲಿನ ಜನರ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಸಮಸ್ಯೆ ಬಗ್ಗೆ ಮನವಿ ಮಾಡಿದ ಹಿನ್ನಲೆಯಲ್ಲಿ ನುಡಿದಂತೆ ನಡೆದಿದ್ದಾರೆ ನಮ್ಮ ಶಾಸಕರು, ಅವರ ಅಭಿವೃದ್ದಿ ಕಾರ್ಯಗಳು ಜನರ ಮಾತಾಗಿವೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್ , ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಆಶ್ರಯ ಕಮಿಟಿ ಸದಸ್ಯರಾದ ಮುಬಾರಕ್, ಬಿ.ಟಿ.ಚಂದ್ರಶೇಖರ್, ಮೈಲಾರಪ್ಪ, ಪುರಸಭೆ ಮಾಜಿ ಸದಸ್ಯರಾದ ಲೋಕೇಶಪ್ಪ, ಜಿಮ್ ರಾಜು, ಮಾಣಿಕ್ ಭಾಷ, ಜಿಯಾವುಲ್ಲಾ, ಮಾಜಿ ನಾಮಿನಿ ಸದಸ್ಯ ಮಲ್ಲಿಕಾರ್ಜುನ್, ಪಿಡ್ಲ್ಯೂಡಿ ಎಇಇ ಬಸವರಾಜ ನಾಯ್ಕ್, ಗುತ್ತಿಗೆದಾರ ವಿನಯ್, ಬಾವಿಮನೆ ಮಧು, ಕಾಂಗ್ರೆಸ್ ಯುವ ನಾಯಕ ಆರೀಫ್, ಮಂಕಿ ಜಯಣ್ಣ ಟಿಬು ವಿನೋದ್ ಮತ್ತಿತರು ಇದ್ದರು.26 ಬೀರೂರು 3ಬೀರೂರಿನ ಲಿಂಗದಹಳ್ಳಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಯೊಂದಿಗೆ ₹ 7ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಅಲಂಕಾರಿಕ ದೀಪಗಳನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಬೀರೂರು ದೇವರಾಜ್ , ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಆಶ್ರಯ ಕಮಿಟಿ ಸದಸ್ಯರಾದ ಮುಬಾರಕ್ ಮತ್ತಿತರಿದ್ದರು.