ನರಸಿಂಹರಾಜಪುರಯಾವುದೇ ರಾಜಕೀಯ ಉದ್ದೇಶವಿಲ್ಲದೆ ಜಾತಿ, ಧರ್ಮ, ಬೇಧವಿಲ್ಲದೆ ಸಮಾಜ ಸೇವೆ ಮಾಡುವುದೇ ವಿಶ್ವನಾಥ್ ಗದ್ದೆಮನೆ ಚಾರಿಟ್ರಬಲ್ ಟ್ರಸ್ಟ್ ನ ಉದ್ದೇಶ ಎಂದು ದಾನಿ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಹೇಳಿದರು.

- ಗದ್ದೇಮನೆ ವಿಶ್ವನಾಥ್ ಪ್ಯಾನ್ಸ್ ಕ್ಲಬ್ ಉದ್ಘಾಟನೆ, ಪದವಿ ಸ್ವೀಕಾರ ಸಮಾರಂಭ

ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರ

ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಜಾತಿ, ಧರ್ಮ, ಬೇಧವಿಲ್ಲದೆ ಸಮಾಜ ಸೇವೆ ಮಾಡುವುದೇ ವಿಶ್ವನಾಥ್ ಗದ್ದೆಮನೆ ಚಾರಿಟ್ರಬಲ್ ಟ್ರಸ್ಟ್ ನ ಉದ್ದೇಶ ಎಂದು ದಾನಿ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಹೇಳಿದರು.ಭಾನುವಾರ ಪಟ್ಟಣದ ಸುಂಕದಕಟ್ಟೆಯ ಎಸ್.ಎನ್‌. ಈವೆಂಟ್ ಹಾಲ್, ತೀರ್ಥಂಕರ ಕಾಂಪ್ಲೆಕ್ಸ್ ನಲ್ಲಿ ನಡೆದ ವಿಶ್ವನಾಥ್ ಗದ್ದೆಮನೆ ಅವರ ಫ್ಯಾನ್ಸ್ ಕ್ಲಬ್ ಉದ್ಘಾಟನೆ , ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಕಳೆದ 13 ವರ್ಷಗಳ ಹಿಂದೆ 3 ಜನರಿಂದ ವಿಶ್ವನಾಥ್ ಗದ್ದೆಮನೆ ಬಳಗ ಸ್ಥಾಪಿಸಿ ಶಿಕ್ಷಣ, ಆರೋಗ್ಯ, ಕೃಷಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾ ಗುತ್ತಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಶೃಂಗೇರಿ ಕ್ಷೇತ್ರ ಮಟ್ಟದ ರೈತ ಒಕ್ಕೂಟ ಸ್ಥಾಪಿಸಲಾಗಿದೆ. ಮಲೆನಾಡಿನ ರೈತರ ಒತ್ತುವರಿ ಸಮಸ್ಯೆಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಉದ್ದೇಶ ಹೊಂದಿದ್ದು ನ್ಯಾಯಾ ಲಯಕ್ಕೆ ಹೋಗಲು ಸಾಧ್ಯವಾಗದ ರೈತರಿಗೆ ವಕೀಲರ ನೇಮಿಸಿ, ವಕೀಲರ ಶುಲ್ಕವನ್ನು ಟ್ರಸ್ಟ್ ನಿಂದ ಭರಿಸಲಾಗುತ್ತದೆ. ಈಗಾಗಲೇ ರೈತ ಒಕ್ಕೂಟದ ಕಚೇರಿಯನ್ನು ಕೊಪ್ಪ ಮತ್ತು ನರಸಿಂಹರಾಜಪುರ ಭಾಗದಲ್ಲಿ ತೆರೆಯಲಾಗಿದ್ದು ರೈತರ ಸಮಸ್ಯೆಗಳ ಬಗ್ಗೆ ಅರ್ಜಿ ಸ್ವೀಕರಿಸಲು ಸಿಬ್ಬಂದಿ ನೇಮಕ ಮಾಡಲಾಗುವುದು. ಫೆ.21 ರಂದು ರೈತ ಒಕ್ಕೂಟದ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಜ.30 ರಂದು ಇದಕ್ಕಾಗಿ ಪೂರ್ವಭಾವಿ ಸಭೆ ಆಯೋಜಿಸ ಲಾಗಿದ್ದು ಕ್ಷೇತ್ರದ ಬೂತ್ ಮಟ್ಟದಿಂದ ಒಬ್ಬೊಬ್ಬರು ಪ್ರತಿನಿಧಿ ಆಗಮಿಸಲಿದ್ದು ರೈತ ಒಕ್ಕೂಟದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು . ಪ್ರಸಕ್ತ ಸಾಲಿನಲ್ಲಿ 8,900 ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ.

ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳ 22 ಸಾವಿರ ಮಕ್ಕಳಿಗೆ ವಿಶ್ವನಾಥ್ ಗದ್ದೆಮನೆ ಚಾರಿಟ್ರಬಲ್ ಟ್ರಸ್ಟ್ ನಿಂದ ಸಮವಸ್ತ್ರ, ಟ್ರ್ಯಾಕ್ ಪ್ಯಾಟ್, ಟಿಶರ್ಟ್ ಕೊಡುಗೆಯಾಗಿ ಕೊಡುವ ಗುರಿ ಹೊಂದಲಾಗಿದೆ. ಸರ್ಕಾರಿ ಶಾಲೆ ಮಕ್ಕಳಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು ಕ್ರೀಡಾಕೂಟಗಳಲ್ಲಿ ಭಾಗವಹಿಸುವಾಗ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಟ್ರ್ಯಾಕ್ ಪ್ಯಾಟ್ , ಟಿ ಶರ್ಟ್ ಧರಿಸಿರುತ್ತಾರೆ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಆತ್ಮ ವಿಶ್ವಾಸ ಕುಂದಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ರ್ಯಾಕ್ ಶೂಟ್ ವಿತರಿಸಲಾಗಿದೆ. ವಿಶ್ವನಾಥ್ ಗದ್ದೆ ಮನೆ ಫ್ಯಾನ್ಸ್ ಕ್ಲಬ್ ಆರಂಭವಾಗಿರುವುದು ಸಂತಸ ತಂದಿದ್ದು ಇದರ ಮೂಲಕ ಸ್ವಚ್ಛತಾ ಅಭಿಯಾನ, ಆರೋಗ್ಯ, ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗುವುದು. ತಮ್ಮ ಆದಾಯದ ಶೇ. 20ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಗದ್ದೆಮನೆ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ನ ಗೌರವಾಧ್ಯಕ್ಷ ರಮೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡುತ್ತಿರುವ ಗದ್ದೆಮನೆ ವಿಶ್ವನಾಥ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶ ದಿಂದ ಕ್ಲಬ್ ಸ್ಥಾಪಿಸಲಾಗಿದೆ. ಇದರಲ್ಲಿ ರಾಜಕೀಯ, ಜಾತಿ,ಮತ, ಪಕ್ಷ ಬೇಧವಿಲ್ಲ. ಮುಂದಿನ ದಿನಗಳಲ್ಲಿ ನೋಂದಣಿ ಮಾಡಲಾಗುವುದು ಎಂದರು.

ಕ್ಲಬ್ ನ ಕಾರ್ಯದರ್ಶಿ ಎಂ.ಆರ್.ಅಜಿತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಶಕ್ತರಿಗೆ, ಬಡವರಿಗೆ ಜಾತಿ,ಧರ್ಮ ಬೇಧವಿಲ್ಲದೆ ಸೇವೆ ಸಲ್ಲಿಸುತ್ತಿರುವ ಗದ್ದೆಮನೆ ವಿಶ್ವನಾಥ್ ಸಮಾಜ ಸೇವೆಗೆ ಕೈಜೋಡಿಸುವ ಉದ್ದೇಶದಿಂದ ಸಮಾನ ಮನಸ್ಕ ಯುವಕ ಯುವತಿಯರು ಸೇರಿ ಫ್ಯಾನ್ಸ್ ಕ್ಲಬ್ ಸ್ಥಾಪಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯುತ್ ಲೈನ್ ಮನ್ ಗಳಿಗೆ ಸ್ವೇಟರ್ ವಿತರಿಸಲಾಯಿತು. ಗದ್ದೆಮನೆ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಗದ್ದೆಮನೆ ವಿಶ್ವನಾಥ್ ಫ್ಯಾನ್ಸ್ ಕ್ಲಬ್ ನ ಅಧ್ಯಕ್ಷ ಪಿ.ಸಿ.ಮುರುಳಿಧರ ವಹಿಸಿದ್ದರು. ಕ್ಲಬ್ ನ ಉಪಾಧ್ಯಕ್ಷ ಎಂ.ಆರ್. ರಾಜೇಶ್, ಖಜಾಂಚಿ ಕೆ.ಸೃಜನ್, ಭವಾನಿ, ಭಾನು ಶಿವರಾಜ್, ಅಣ್ಣಪ್ಪ ಇದ್ದರು.