ಸಾರಾಂಶ
ಬಿರಿಯಾನಿ ಚಾಲೆಂಜ್ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. 
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಿದ್ದಾಪುರದ ತಣಲ್ ಸಂಸ್ಥೆಯು ಬಡ ಕಿಡ್ನಿ ರೋಗಿಗಳ ಡಯಾಲಿಸಿಸ್ ಗೆ ನೆರವಾಗಲು ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿರಿಯಾನಿ ಚಾಲೆಂಜ್ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ತಣಲ್ ಸಂಸ್ಥೆಯ ಕಾರ್ಯವೈಖರಿ ಎಲ್ಲರಿಗೂ ಮಾದರಿ ಹಾಗೂ ಶ್ಲಾಘನೀಯ ಎಂದರು.
ತಣಲ್ ಸಂಸ್ಥೆಯು ಕೈಗೊಳ್ಳುತ್ತಿರುವ ಹಲವಾರು ಕಾರ್ಯಕ್ರಮಗಳು ಇಂದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದು, ಇದರಿಂದ ಎಲ್ಲರೂ ಇಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರೇರೇಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಕೀಲ ಎಂ ಎಸ್ ವೆಂಕಟೇಶ್, ಎಸ್ ಎನ್ ಡಿ ಪಿ ಯೂನಿಯನ್ ಅಧ್ಯಕ್ಷ ವಿ ಕೆ ಲೋಕೇಶ್, ಸಿದ್ದಾಪುರ ವಲಯ ಅಧ್ಯಕ್ಷರು ಪ್ರತೀಶ್, ಸಿದ್ದಾಪುರ ಧರ್ಮ ಗುರುಗಳು, ಪಂಚಾಯಿತಿ ಉಪಾಧ್ಯಕ್ಷರು ಪಳನಿ ಸ್ವಾಮಿ, ಸದಸ್ಯರು ದೇವಯಾನಿ ಸೇರಿದಂತೆ ತಣಲ್ ಸಂಸ್ಥೆಯ ಪ್ರಮುಖರು ಸಾರ್ವಜನಿಕರು ಇದ್ದರು.
;Resize=(128,128))
;Resize=(128,128))