ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ಜೈ ರಾಜವಂಶ ಅಭಿಮಾನಿಗಳ ಬಳಗ, ಯುವರಾಜರತ್ನ ಅಪ್ಪು ಅಭಿಮಾನಿಗಳ ಬಳಗ, ಆಟೋ ಚಾಲಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ಭಾನುವಾರ ದಿ. ಪುನೀತ್ ರಾಜಕುಮಾರ್ ಜನ್ಮದಿನ ಆಚರಿಸಲಾಯಿತು.
ಜೈ ರಾಜವಂಶ ಅಭಿಮಾನಿ ಬಳಗದ ಸದಸ್ಯರು ವೃತ್ತದಲ್ಲಿ 10 ಕೆಜಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ 3 ಕ್ವಿಂಟಲ್‌ನ ಚಿಕನ್ ಬಿರಿಯಾನಿ ಹಂಚಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ರಾಘವೇಂದ್ರ ವದ್ದಿ, ರಾಜು ಗೊಬ್ಬರಗುಂಪಿ, ಕುಮಾರ ಯಾದಗಿರಿ, ರಾಜು ಮೊಸಳೆ, ತ್ರಿಪಾಲ್ ಪಟೇಲ, ಕಲ್ಲಪ್ಪ ಶಿರಕೋಳ, ಆಕಾಶ ಗುಡಿಹಾಳ, ವಿಶಾಲ ಜಾಧವ ಸೇರಿದಂತೆ ಹಲವರಿದ್ದರು.
ಪುಲಾವ್ ವಿತರಣೆ: ಯುವರಾಜರತ್ನ ಅಪ್ಪು ಅಭಿಮಾನಿಗಳ ಬಳಗದಿಂದಲೂ 25 ಕೆಜಿ ಫುಲಾವ್, 5 ಕೆಜಿ ಮೈಸೂರು ಪಾಕ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.
ಈ ವೇಳೆ ಆನಂದ ಡೋಂಗಿ, ದ್ಯಾಮ್ಮಣ್ಣಾ ಡೋಂಗಿ, ಫಕ್ಕೀರಪ್ಪ ಮದ್ರಾಸಿನ, ಬಿ.ಎನ್. ಗೋವಿಂದ, ಪ್ರೇಮನಾಥ ಚಿಕ್ಕತುಂಬಳ, ಶೇಖರ ಹೊಸಳ್ಳಿ, ಸಿದ್ದಪ್ಪ ಕವಿತಾಳ, ಶಿವಕುಮಾರ ಕಂದಮ್, ಹನುಮಂತ ಅಂಬಿಗೇರ ಸೇರಿದಂತೆ ಹಲವರಿದ್ದರು.
ಅಪ್ಪು ಅಭಿಮಾನೋತ್ಸವ: ರಾಜರತ್ನ ಕನ್ನಡ ಯುವಸಮಿತಿಯ ವತಿಯಿಂದ ಇಲ್ಲಿನ ವಿದ್ಯಾನಗರದ ತೋಳನಕೆರೆ ಮುಂಭಾಗದಲ್ಲಿ ಅಪ್ಪು ಅಭಿಮಾನೋತ್ಸವ ಹಮ್ಮಿಕೊಳ್ಳಲಾಯಿತು.
ಈ ವೇಳೆ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ಹಿರಿಯ ನಾಗರಿಕರಿಗೆ ಸನ್ಮಾನ, ವಿವಿಧ ಕಲಾ ತಂಡಗಳಿಂದ ಸಂಗೀತ ಗಾಯನ, ನೃತ್ಯ, ಮನರಂಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಮಟ್ಟಿ, ಜಿಲ್ಲಾಧ್ಯಕ್ಷ ಜೋಗಿ ಮಂಜು, ಜಿಲ್ಲಾ ಕಾರ್ಯದರ್ಶಿ ವಿನಯ ಗಡೇದ, ರಾಜ್ಯ ಕಾರ್ಯದರ್ಶಿ ಅಮರ ಹೊಸೂರ ಸೇರಿದಂತೆ ಹಲವರಿದ್ದರು.
ಪುನಿತ್ ಪುತ್ಥಳಿ ಸ್ಥಾಪಿಸಿ: ಉತ್ತರ ಕರ್ನಾಟಕ ಆಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಅಟೋ ಮಾಲಿಕರ ಹಾಗೂ ಚಾಲಕರ ಸಂಘದಿಂದ ನಗರದ ನಿಲಿಜಿನ್ ರಸ್ತೆಯಲ್ಲಿರುವ ಸಂಘದ ಕಚೇರಿಯಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಪುನೀತ್ ರಾಜಕುಮಾರ್ ಅವರ ಬೃಹತ್ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ನಂತರ ಹಳೇ ಹುಬ್ಬಳ್ಳಿಯ ಬಸ್ ನಿಲ್ದಾಣದ ಎದುರು 10 ಕೆಜಿ ಕೇಕ್ ಕತ್ತರಿಸಿ ಸಿಹಿ ಹಂಚಿ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಆಟೋ ಮಾಲೀಕರು ಹಾಗೂ ಚಾಲಕರು ಪಾಲ್ಗೊಂಡು ಹುಬ್ಬಳ್ಳಿಯ ತೋಳನಕೆರೆ ಮುಂಭಾಗ, ಭಾರತ್ ಮಿಲ್ ಬಳಿ ಇಲ್ಲವೇ ಉಣಕಲ್ಲು ಕೆರೆ ಹಿಂಭಾಗದ ವೀರಭದ್ರೇಶ್ವರ ಕಾಲನಿಗೆ ತೆರಳುವ ದ್ವಿಪಥ ರಸ್ತೆಯ ಭಾಗದಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ರಾಜೇಶ ಬಿಜವಾಡ, ಮಲ್ಲಿಕಾರ್ಜುನ ನಂದಿಹಾಳ, ಮಹಾವೀರ ಬಿಲಾನ, ಮುರಳಿ ಇಂಗಳಳ್ಳಿ, ಶಬ್ಬೀರ ಜಮೀನದಾರ, ದೇವಲಸಾಬ ಕುರಹಟ್ಟಿ ಸೇರಿದಂತೆ ನೂರಾರು ಆಟೋ ಚಾಲಕರು ಪಾಲ್ಗೊಂಡಿದ್ದರು.