ಆಮೆ ಹೊಟ್ಟೆಯಲ್ಲಿ ಬಿಸ್ಕತ್ ರ‍್ಯಾಪರ್!

| Published : Feb 26 2024, 01:30 AM IST

ಸಾರಾಂಶ

ಅರಣ್ಯ ಇಲಾಖೆಯ ಮರೈನ್ ಇಕೋ ಸಿಸ್ಟಂ ವಿಭಾಗದ ಅಧಿಕಾರಿಗಳು ಮೃತ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ

ಕಾರವಾರ: ಮೃತ ಪಟ್ಟ ಅಂದಾಜು ಮೂವತ್ತು ವರ್ಷದ ಆಮೆ ಹೊಟ್ಟೆಯೊಳಗೆ ಬಿಸ್ಕತ್ ರ‍್ಯಾಪರ್ ಸಿಕ್ಕಿದೆ!

ತಾಲೂಕಿನ ದೇವಬಾಗ ಕಡಲ ತೀರದಲ್ಲಿ ಶನಿವಾರ ಆಮೆ ಕಳೇಬರ ಸಿಕ್ಕಿದ್ದು, ಹೊಟ್ಟೆಯೊಳಗೆ ಬಿಸ್ಕತ್ ರ‍್ಯಾಪರ್‌ ಸಿಕ್ಕಿದೆ. ಮಾನವರು ತಿಂದುಂಡು ಬಿಸಾಡಿದ ತ್ಯಾಜ್ಯಗಳನ್ನು ನದಿ, ಸಮುದ್ರ ಸೇರುತ್ತಿದ್ದು, ಕೆಲವು ಜೀವಿಗಳು ಅವುಗಳನ್ನು ತಿಂದು ಜೀವ ಕಳೆದುಕೊಳ್ಳುತ್ತಿವೆ.

ಅರಣ್ಯ ಇಲಾಖೆಯ ಮರೈನ್ ಇಕೋ ಸಿಸ್ಟಂ ವಿಭಾಗದ ಅಧಿಕಾರಿಗಳು ಮೃತ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹಾಕ್ಸ್ ಬಿಲ್ ಪ್ರಭೇದದ ಆಮೆಗಳು ಅತಿ ಚಿಕ್ಕ ಗಾತ್ರದವಾಗಿದ್ದು, ಫೆಸಿಪಿಕ್, ಅಟ್ಲಾಂಟಿಕ್ ಸಾಗರ, ಅರಬ್ಬಿ ಸಮುದ್ರದ ಅಂಡಮಾನ್, ಲಕ್ಷದ್ವೀಪ ಮುಂತಾದ ಹವಳದ ದಂಡೆಗಳಿರುವ ತೀರಗಳಲ್ಲಿ ಮಾತ್ರ ಕಾಣಸಿಗುತ್ತವೆ.