ರೈತರಿಗೆ ಅಚ್ಚುಮೆಚ್ಚು ಬಿಸ್ಮಿಲ್ಲಾಹ ಯಂತ್ರಗಳು

| Published : Sep 17 2025, 01:06 AM IST

ಸಾರಾಂಶ

ಸುಮಾರು 40ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಇವರು ಮೊದಲಿಗೆ ರಬ್ಬರ್‌ ಮಾಡೆಲ್‌(ಡಬ್ಬಿ) ಕೂರಿಗೆ ಸಿದ್ಧಪಡಿಸಿದರು. ಇದು ಶೂನ್ಯ ನಿರ್ವಹಣೆಯೊಂದಿಗೆ ರೈತರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಬಳಿಕ 25ಕ್ಕೂ ಅಧಿಕ ಮಾಡೆಲ್‌ನ ಕೂರಿಗೆಗಳನ್ನು ತಯಾರಿಸಿದ್ದು, ಈ ಎಲ್ಲ ಕೃಷಿ ಯಂತ್ರಗಳಿಗೆ ರಾಜ್ಯ, ಹೊರರಾಜ್ಯಗಳಿಂದಲೂ ಬೇಡಿಕೆಯಿವೆ.

ಹುಬ್ಬಳ್ಳಿ: ಸದಾ ರೈತರ ಏಳ್ಗೆಗಾಗಿ ಶ್ರಮಿಸುವುದರೊಂದಿಗೆ ರೈತಸ್ನೇಹಿ ಯಂತ್ರೋಪಕರಣಗಳನ್ನು ಆವಿಷ್ಕರಿಸುವ ಮೂಲಕ ರೈತರಿಗೆ ಕಡಿಮೆ ಬೆಲೆಯಲ್ಲಿ ಕೊಡುಗೆಯಾಗಿ ನೀಡುವಲ್ಲಿ ಅಣ್ಣಿಗೇರಿಯ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ ಸದಾ ಮುಂದು.

ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಹೊತ್ತು ಮುಂದಡಿ ಹಾಕಿದ ಅಣ್ಣಿಗೇರಿಯ ಗುಳಗುಂದಿ ಬ್ರದರ್ಸ್‌ ರೈತಸ್ನೇಹಿ ಯಂತ್ರೋಪಕರಣ ಸಿದ್ಧಪಡಿಸುವ ಯೋಚನೆ ಹಾಕಿಕೊಂಡರು.

ಸುಮಾರು 40ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಇವರು ಮೊದಲಿಗೆ ರಬ್ಬರ್‌ ಮಾಡೆಲ್‌(ಡಬ್ಬಿ) ಕೂರಿಗೆ ಸಿದ್ಧಪಡಿಸಿದರು. ಇದು ಶೂನ್ಯ ನಿರ್ವಹಣೆಯೊಂದಿಗೆ ರೈತರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಬಳಿಕ 25ಕ್ಕೂ ಅಧಿಕ ಮಾಡೆಲ್‌ನ ಕೂರಿಗೆಗಳನ್ನು ತಯಾರಿಸಿದ್ದು, ಈ ಎಲ್ಲ ಕೃಷಿ ಯಂತ್ರಗಳಿಗೆ ರಾಜ್ಯ, ಹೊರರಾಜ್ಯಗಳಿಂದಲೂ ಬೇಡಿಕೆಯಿವೆ. ಕೃಷಿ ಯಂತ್ರೋಪಕರಣಗಳ ಆವಿಷ್ಕಾರದಲ್ಲಿ ಸಾಧನೆ ತೋರಿರುವ ಈ ಸಂಸ್ಥೆಯನ್ನು ಸರ್ಕಾರ ಗುರುತಿಸುವ ಕಾರ್ಯವಾಗಬೇಕಿದೆ ಎಂಬುದು ರೈತರ ಮನದಾಳದ ಮಾತಾಗಿದೆ.

ಯಾವೆಲ್ಲ ಕೂರಿಗೆಗಳಿವೆ?: 6 ತಾಳಿನ ದುರ್ಗಾ (ಬ್ಯಾಡಗಿ) ಮಾಡೆಲ್ ಕೂರಿಗೆ, ಸ್ಟ್ರಿಂಗ್‌ ತಾಳಿನ ಕಿಸಾನ್ ಮಾಡೆಲ್‌ ಕೂರಿಗೆ, ಸಿಂಗಲ್‌ ಬಾಕ್ಸ್‌ನ ಮೆಕ್ಕೆಜೋಳ ಬಿತ್ತುವ ಬಲರಾಮ ತಾಳಿನ ಕೂರಿಗೆ, 4-5 ತಾಳಿನ ಕಿಸಾನ ಮಾದರಿಯ ಕೂರಿಗೆ, ಸಫ್ಟಾನ್‌ ಮಾದರಿಯ ಭತ್ತ(ನೆಲ್ಲು) ಬಿತ್ತುವ ಕೂರಿಗೆ, 6 ಮತ್ತು 8 ತಾಳಿನ ಮಾಡೆಲ್‌ ಕೂರಿಗೆ, 9 ತಾಳಿನ ಕಲ್ಟಿವೇಟರ್‌ (ಜಿಗ್‌ಜಾಗ್‌) ಮಾಡೆಲ್‌ ಕೂರಿಗೆ, ಕಿಸಾನ್‌ ಮಾದರಿಯ ಕಲ್ಟಿವೇಟರ್‌ ಕೂರಿಗೆ, ಸ್ಪ್ರಿಂಗ್‌ ತಾಳಿನ ಕೂರಿಗೆ, ಬಿಸ್ಮಿಲ್ಲಾಹ ರೋಟವೇಟರ್, ಬಿಸ್ಮಿಲ್ಲಾಹ ನೇಗಿಲು ಸೇರಿದಂತೆ 25ಕ್ಕೂ ಹೆಚ್ಚು ಮಾಡೆಲ್‌ ಯಂತ್ರಗಳು ಇಲ್ಲಿ ಲಭ್ಯ.

ಇಲ್ಲಿಗೆ ಭೇಟಿ ನೀಡಿ: ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಅಣ್ಣಿಗೇರಿಯ ಗದಗ-ಹುಬ್ಬಳ್ಳಿ ರಸ್ತೆಯಲ್ಲಿದೆ. ಈ ಬಾರಿಯ ಕೃಷಿ ಮೇಳದಲ್ಲಿ 488, 489, 490 ಸಂಖ್ಯೆಯ ಮಳಿಗೆ ಸ್ಥಾಪಿಸಿದೆ. ಈ ಯಂತ್ರೋಪಕರಣಗಳು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ರೈತರಿಗೆ ಲಭ್ಯ. ಹೆಚ್ಚಿನ ಮಾಹಿತಿಗೆ ಮೊ 90089 28615, 97392 31911, 9964436307 ಸಂಖ್ಯೆಗೆ ರೈತರು ಸಂಪರ್ಕಿಸಬಹುದಾಗಿದೆ.

ಮೆಕ್ಕೆಜೋಳ ಸ್ಪೇಷಲ್‌ ಕೂರಿಗೆ: ರೈತರ ಬಹುದಿನಗಳ ಬೇಡಿಕೆ ಮೇರೆಗೆ ತಯಾರಿಸಿದ ಬಿಎಂಡಿ26 ಮೆಕ್ಕೆಜೋಳ ಸ್ಪೇಷಲ್ ಕೂರಿಗೆಯನ್ನು ಆಕರ್ಷಕ ವಿನ್ಯಾಸದೊಂದಿಗೆ ರೈತರ ಅನಾನೂಕೂಲತೆ ಗಮನದಲ್ಲಿಟ್ಟು ಈ ಕೂರಿಗೆ ಸಿದ್ಧಪಡಿಸಿದೆ. ಇದು ಪ್ರಪ್ರಥಮವಾಗಿ 5 ತಾಳುಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಬಿಡುಗಡೆ (ಲಾಂಚ್‌) ಮಾಡುತ್ತಿದ್ದಂತೆ ರೈತರಿಂದ ಹೆಚ್ಚಿನ ಬೇಡಿಕೆಗೆ ಕಾರಣವಾಗಿದ್ದು, ಕೃಷಿಮೇಳದಲ್ಲಿ ರೈತರು ಮುಗಿಬಿದ್ದು ಇದರ ಬುಕ್ಕಿಂಗ್‌ ಮಾಡಿದರು.

ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಕೃಷಿಯಂತ್ರೋಪಕರಣ ನೀಡಬೇಕು ಎಂಬ ಕನಸ್ಸು ಕಂಡಿದ್ದೆವು. ಅದರಂತೆ ಈಗ ನಮ್ಮ ಸಂಸ್ಥೆಯ ಮೂಲಕ 25ಕ್ಕೂ ಅಧಿಕ ಕೃಷಿ ಯಂತ್ರೋಪಕರಣ ಸಿದ್ಧಪಡಿಸಿದ್ದೇವೆ ಎಂದು ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ ಮಾಲಿಕರಾದ ಖಾಜಾಹುಸೇನ ಗುಳಗುಂದಿ ಹೇಳಿದರು.

ನಮ್ಮಲ್ಲಿ ತಯಾರಾಗುವ ಕೃಷಿಯಂತ್ರೋಪಕರಣಗಳು ರಾಜ್ಯ, ಹೊರರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿವೆ. ಹೊಸದಾಗಿ ಆವಿಷ್ಕರಿಸಿರುವ ಮೆಕ್ಕೆಜೋಳ ಸ್ಪೇಷಲ್‌ ಕೂರಿಗೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ ಮಾಲಿಕರಾದ ಶಬ್ಬೀರಅಹ್ಮದ ಗುಳಗುಂದಿ ಹರ್ಷ ವ್ಯಕ್ತಪಡಿಸಿದರು.