ಮಹಿಳಾ ಕಾಲೇಜಿನಲ್ಲಿ ಬಿಸಿಯೂಟ

| Published : Sep 15 2024, 01:59 AM IST

ಸಾರಾಂಶ

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ. ಆದರೆ ಇದೆಲ್ಲಕ್ಕೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಮುನ್ನೆಲೆಗೆ ಬರಬೇಕು. ನಮ್ಮಲ್ಲಿರುವ ಶಕ್ತಿಯನ್ನ ಉಪಯೋಗಿಸಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಘೋಷಣೆಯಾಗುವವರೆಗೂ ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುವುದು ಎಂದು ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಂದೀಪ್‌.ಬಿ.ರೆಡ್ಡಿ ತಿಳಿಸಿದರು.

ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅನನ್ಯ ಕಲಾರಂಗ, ಗೌತಮಬುದ್ಧ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬದುಕು ರೂಪಿಸಿಕೊಳ್ಳಬೇಕು

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ. ಆದರೆ ಇದೆಲ್ಲಕ್ಕೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಮುನ್ನೆಲೆಗೆ ಬರಬೇಕು. ನಮ್ಮಲ್ಲಿರುವ ಶಕ್ತಿಯನ್ನ ಉಪಯೋಗಿಸಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಬುದ್ಧ ಎಂದರೆ ಸೊನ್ನೆ. ಏನೂ ಆಗದೆ ಇರುವುದೇ ಬುದ್ಧ. ಅಂತಹ ಬುದ್ಧನನ್ನು ಕವಿಗಳು, ವಿಮರ್ಶಕರು, ಲೇಖಕರು ಅವರದ್ದೇ ದಾಟಿಯಲ್ಲಿ ವರ್ಣಿಸಿದ್ದಾರೆ ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ್(ಆಮಾಸ) ಮಾತನಾಡಿ, ನಾಟಕದಲ್ಲಿ ಹಲವು ಪ್ರಕಾರಗಳಿದ್ದು, ಇದೊಂದು ವಿಶಿಷ್ಟ ಮತ್ತು ವಿಶಾಲವಾದ ಕಲೆ. ಇದೆಲ್ಲವನ್ನೂ ಒಳಗೊಳ್ಳುವುದೇ ರಂಗಭೂಮಿ. ಸಮಾಜದಲ್ಲಿ ಜೀವಪ್ರೀತಿ, ಕಾರುಣ್ಯ ಇದೆ ಎಂದರೆ ಅದಕ್ಕೆ ರಂಗಭೂಮಿ ಕಾರಣ ಎಂದು ಹೇಳಿದರು.ಅನನ್ಯ ಕಲಾರಂಗದ ನಿರ್ದೇಶಕ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಗ.ನ.ಅಶ್ವತ್ಥ್ ಮಾತನಾಡಿ, ನಾವು ಹುಟ್ಟುತ್ತಾ ವಿಶ್ವಮಾನವರಾಗಿ ಹುಟ್ಟುತ್ತೇವೆ. ಆದರೆ, ಸಮಾಜ ಬೆಳೆಯುತ್ತಾ ಜಾತಿ ಹೆಸರಿನಲ್ಲಿ ನಮ್ಮನ್ನ ಅಲ್ಪಮಾನವರನ್ನಾಗಿ ಮಾಡುತ್ತದೆ. ಇಂತಹ ಅಲ್ಪ ಮಾನವರನ್ನು ವಿಶ್ವ ಮಾನವರನ್ನಾಗಿ ಮಾಡುವ ಶಿಕ್ಷಣ ವ್ಯವಸ್ಥೆ, ಸಂಘ ಸಂಸ್ಥೆಗಳು ರೂಪುಗೊಳ್ಳಬೇಕು ಎಂದರು.ನಿವೃತ್ತ ಉಪನ್ಯಾಸಕ ಚಾಂದ್‌ ಪಾಷ, ಅತಿಥಿ ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ, ಸರ್ಕಾರಿ ಪ್ರ.ದ.ಮಹಿಳಾ ಕಾಲೇಜು ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ , ರಾಮು, ಗೌತಮ ಬುದ್ಧ ಫೌಂಡೇಶನ್‌ನ ಬಿ.ಗಂಗರಾಜು, ಜಿ.ಆರ್.ನಾರಾಯಣ್‌ ಸ್ವಾಮಿ, ಕಿರಣ್‌, ಶ್ರೀನಿವಾಸ್‌, ಮಂಜುನಾಥ್‌, ವಿದ್ಯಾರ್ಥಿನಿಯರು ಇದ್ದರು.