ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ<bha>;</bha> ಕಾಂಗ್ರೆಸ್ ಕಾರಣ ಆರೋಪ
KannadaprabhaNewsNetwork | Published : Oct 20 2023, 01:00 AM IST
ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ<bha>;</bha> ಕಾಂಗ್ರೆಸ್ ಕಾರಣ ಆರೋಪ
ಸಾರಾಂಶ
ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ (35) ಎಂಬಾತ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿದೆ.
ಶಿವಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿದ 3 ಆಡಿಯೋ ರೆಕಾರ್ಡ್ ಲಭ್ಯ ತನ್ನ ಸಾವಿಗೆ ಮಂತ್ರಿ ಡಾ. ಶರಣಪ್ರಕಾಶ ಪಾಟೀಲ್, ಕಾಂಗ್ರೆಸ್ ಕಾರ್ಯಕರ್ತರು ಕಾರಣ ಆರೋಪ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಡಾ. ಶರಣಪ್ರಕಾಶ್ ರಾಜಿನಾಮೆ ನೀಡಲು ಬಿಜೆಪಿ ಒತ್ತಾಯ ಕನ್ನಡಪ್ರಭ ವಾರ್ತೆ ಕಲಬುರಗಿ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ (35) ಎಂಬಾತ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿದೆ. ಆತ್ಮಹತ್ಯೆ ಮುನ್ನ ನರಸಪ್ಪ ಎಂಬುವರ ಹೊಲಕ್ಕೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ತೀವ್ರ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ನರಸಪ್ಪ ಶಿವಕುಮಾರ್ ಇವರ ಬಂಧುವಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆಯಿಂದ ಮನನೊಂದಿದ್ದ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಮುನ್ನ ಶಿವಕುಮಾರ್ ಮೂರು ಆಡಿಯೋ ರೇಕಾರ್ಡ್ ಮಾಡಿದ್ದಾನೆಂದು ಹೇಳಲಾಗುತ್ತಿದ್ದು, ಈ ಆಡಿಯೋಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಆತ್ಮಹತ್ಯೆಗೆ ಕಾಂಗ್ರೆಸ್ ಸಚಿವ ಹಾಗೂ ಕಾರ್ಯಕರ್ತರೇ ಕಾರಣವೆಂದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಸಚಿವ ಡಾ.ಪಾಟೀಲ್ ಹೆಸರು: ಶಿವಕುಮಾರ್ ತನ್ನ ಆತ್ಮಹತ್ಯೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ, ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾನೆ. ನಾನು ಹಿಂದೂ ಹುಲಿಯಾಗಿದ್ದೇನೆ, ಹಿಂದು ಹುಲಿಯಾಗಿಯೇ ಸಾಯುವೆ. ಇವರಿಗೆ ಹಿಂದು ಧರ್ಮದ ಬಗ್ಗೆ ಮಾತನಾಡಿದರೆ ಸಿಟ್ಟು, ಹಾಗಂತ ನಾನು ಬಿಡೋನಲ್ಲ. ಹಿಂದುತ್ವದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಕಾರ್ಯಕರ್ತರು ಕಿರುಕುಳ ಕೊಡುತ್ತಾರೆ. ಇದಕ್ಕೆ ಬೇಸತ್ತು ನಾನು ಆತ್ಮಹತ್ಯೆಗೆ ಶರಣಾಗುತ್ತಿರುವೆ. ಸೇಡಂ ಮಾಜಿ ಶಾಸಕರು, ಗೌಡರಾದ ರಾಜಕುಮಾರ್ ತೇಲ್ಕೂರ್ ಈ ಘಟನೆ ಖಂಡಿಸಿ ಹೋರಾಟ ಮಾಡಬೇಕು ಎಂದು ಶಿವಕುಮಾರ್ ಆಡಿಯೋದಲ್ಲಿ ಕೋರಿದ್ದಾರೆ. ಆಡಿಯೋದಲ್ಲಿ ನೇರವಾಗಿ ತನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣವೆಂದೇ ದೂರಿರೋದು ರಾಜಕೀಯವಾಗಿ ತೀವ್ರ ಗಮನ ಸೆಳೆದಿದೆ. ಚಿಂಚೋಳಿ ತಾಲೂಕಿನ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಕ್ಸ... ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿಗರ ಮೇಲೆ ಹೆಚ್ಚುತ್ತಿವೆ ದೌರ್ಜನ್ಯ ಕಲಬುರಗಿ: ಆತ್ಮಹತ್ಯೆಗೆ ಕಾರಣರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಡಾ. ಉಮೇಶ ಜಾದವ್ ಆಗ್ರಹಿಸಿದ್ದಾರೆ. ಕಲಬುರಗಿಯಲ್ಲಿ ತುರ್ತು ಸುದ್ದಿಗೋಷ್ಠಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅನೇಕ ದೌರ್ಜನ್ಯಗಳು ನಡೆಯುತ್ತಿವೆ, ಧರ್ಮಕ್ಕಾಗಿ ಹೋರಾಟ ಮಾಡುವವರ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕದ ಜನ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆಂದು ದೂರಿದರು. ಬಿಜೆಪಿ ಮುಖಂಡ ಶಿವಕುಮಾರ್ ಸಂಬಂಧಿಕರ ಹೊಲದಲ್ಲಿದ್ದಾಗ ಆತನನ್ನು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಹೋಗಿ ಥಳಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಶಿವಕುಮಾರ್ ನೇಣು ಹಾಕಿಕೊಳ್ಳುವ ಮುನ್ನ ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ಧ ಆಡಿಯೋ ರೇಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇದ್ಯಾವುದರ ಬಗ್ಗೆ ಮಾತನಾಡೋದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಸಚಿವರ ದಬ್ಬಾಳಿಕೆಯಿಂದಾಗಿ ಆತ್ಮಹತ್ಯೆ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರು, ಕಾಟ ಕೊಟ್ಟ ಕೊಲೆಗಡುಕರನ್ನ ಬಂಧಿಸಬೇಕು. ಸಚಿವ ಶರಣಪ್ರಕಾಶ್ ಪಾಟೀಲ್ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಸರ್ಕಾರದ ವತಿಯಿಂದ ನೊಂದ ಕುಟುಂಬದವರಿಗೆ ಪರಿಹಾರ ಕೊಡುವಂತಹ ಕೆಲಸ ಆಗಬೇಕು ಅವರು ಆಗ್ರಹಿಸಿದರು. ಬಾಕ್ಸ್.... ಬಿಜೆಪಿ ಕಾರ್ಯರ್ತರ ಮೇಲೆ ಸರಣಿ ದಬ್ಬಾಳಿಕೆ ಶಿವಕುಮಾರ ಆಡಿಯೋದಲ್ಲಿ ತಮ್ಮ ಸಾವಿಗೆ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾರಣವೆಂದು ತಿಳಿಸಿದ್ದಾರೆ. ಈಚೆಗಷ್ಟೇ ಅವರ ಸಂಬಂಧಿಕರಾದ ನರಸಪ್ಪ ಪೂಜಾರಿ ಎಂಬುವವರನ್ನು ಕಾಂಗ್ರೆಸ್ ಕಾರ್ಯಕರ್ತರು ಹೊಡೆದು ಆಸ್ಪತ್ರೆಗೆ ದಾಖಲಿಸಿದ್ದರು. ಈಗಿನ ಘಟನೆಗೆ ಶರಣ ಪ್ರಕಾಶ್ ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರೇ ನೇರ ಕಾರಣರಾಗಿದ್ದಾರೆಂಬ ಬಲವಾದ ಗುಮಾನಿ ಇದೆ. ಸಂಪೂರ್ಣ ತನಿಖೆಯಾಗಬೇಕು, ಕೊಲೆಗಡುಕರು ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆಗ್ರಹಿಸಿದ್ದಾರೆ. 19ಜಿಬಿ1 ಶಿವಕುಮಾರ್ ಪೂಜಾರಿ 19ಜಿಬಿ2 ಮತ್ತು 19ಜಿಬಿ3 ಕಲಬುರಗಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ್ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಸಾಯುವ ಮುನ್ನ ಆಡಿರುವ ಮಾತಿರುವ ಆಡಿಯೋ ಬಿಡುಗಡೆ ಮಾಡಿದ ನೋಟ.