ಸಾರಾಂಶ
ದೇಶದ ಸುಭದ್ರತೆಗೆ ಸರ್ವ ಜನಾಂಗದ ಕಲ್ಯಾಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲೇಬೇಕು.
ಮರಿಯಮ್ಮನಹಳ್ಳಿ: ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಮರಿಯಮ್ಮನಹಳ್ಳಿ, ಡಣಾಪುರ ಮಹಾಶಕ್ತಿಕೇಂದ್ರಗಳಿಂದ ಹಮ್ಮಿಕೊಂಡ ಬೈಕ್ ರ್‍ಯಾಲಿ ಪಟ್ಟಣದ ಎಪಿಎಂಸಿಯಿಂದ ಆರಂಭಗೊಂಡು ನಾರಾಯಣದೇವರಕೆರೆ ವೃತ್ತದ ಮೂಲಕ ಹೊಸಪೇಟೆಗೆ ತೆರಳಿತು. ಬೈಕ್ ರ್‍ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸ್ಥಳೀಯ ಹಿರಿಯ ಮುಖಂಡ ಡಿ.ರಾಘವೇಂದ್ರ ಶೆಟ್ಟಿ ಮಾತನಾಡಿ, ದೇಶದ ಸುಭದ್ರತೆಗೆ ಸರ್ವ ಜನಾಂಗದ ಕಲ್ಯಾಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲೇಬೇಕು. ಅದಕ್ಕಾಗಿ ನಾವು ಬಳ್ಳಾರಿಯಿಂದ ಶ್ರೀರಾಮುಲು ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಕೃಷ್ಣ ನಾಯ್ಕ್, ಕಾರ್ಯದರ್ಶಿ ಎಸ್.ಎಂ. ವೀರೇಶ್ವರಸ್ವಾಮಿ, ಪಟ್ಟಣದ ಮಹಾಶಕ್ತಿಕೇಂದ್ರದ ಅಧ್ಯಕ್ಷ ಇ.ಶ್ರವಣಕುಮಾರ್, ಡಣಾಪುರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಈ.ಅಂಬರೀಷ್, ಎಸ್ಟಿ ಮೋರ್ಚ ಮಂಡಲ ಅಧ್ಯಕ್ಷ ಎಚ್.ಬಿ. ಕೃಷ್ಣ, ಯುವಮೋರ್ಚ ಜಿಲ್ಲಾ ಉಪಾಧ್ಯಕ್ಷ ರವಿಕಿರಣ್, ಮುಖಂಡರಾದ ಎಂ. ಬದ್ರಿನಾಥಶೆಟ್ಟಿ,
ಬ್ಯಾಲಕುಂದಿ ಶ್ರೀನಿವಾಸ, ಕಾಸ್ಲಿ ಉಮೇಶ್, ಚಿದ್ರಿ ಲಕ್ಷ್ಮೀನಾರಾಯಣ, ಎಲ್. ಮಂಜುನಾಥ, ವ್ಯಾಸನಕೆರೆ ರವಿ ಸೇರಿದಂತೆ ಇತರರಿದ್ದರು.